ETV Bharat / bharat

370ನೇ ವಿಧಿ ರದ್ದು ಮಾಡಿದ್ದು ಐತಿಹಾಸಿಕ ನಿರ್ಣಯ: ಸೇನಾ ಮುಖ್ಯಸ್ಥರ  ಸಮರ್ಥನೆ!

370ನೇ ವಿಧಿ ರದ್ದು ಪಡಿಸಿದ್ದು ಐತಿಹಾಸಿಕ ನಿರ್ಣಯವಾಗಿದ್ದು, ಇದರಿಂದ ಪಾಕಿಸ್ತಾನದ ಅನೇಕ ಯೋಜನೆಗಳು ವಿಫಲವಾದವು ಎಂದು ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವನೆ ಹೇಳಿದ್ದಾರೆ.

abrogation of Art 370 historic step,370ನೇ ವಿಧಿ ರದ್ದು ಮಾಡಿದ್ದು ಐತಿಹಾಸಿ ನಿರ್ಣಯ
ಸೇನಾ ಮುಖ್ಯಸ್ಥ ನರವನೆ
author img

By

Published : Jan 15, 2020, 1:03 PM IST

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಪಡಿಸಿದ್ದು ಐತಿಹಾಸಿಕ ನಿರ್ಣಯವಾಗಿದೆ ಎಂದು ಸೇನಾ ಮುಖ್ಯಸ್ಥ ಮನೋಜ್​ ಮುಕುಂದ್​ ನರವನೆ ಹೇಳಿದ್ದಾರೆ.

ಭಾರತೀಯ ಸೇನಾ ದಿನಾಚರಣೆ ಪ್ರಯುಕ್ತ, ಸೇನಾಧಿಕಾರಿಗಳನ್ನ ಕುರಿತು ಮಾತನಾಡಿರುವ ಅವರು, 370ನೇ ವಿಧಿ ರದ್ದು ಪಡಿಸಿದ್ದು, ಐತಿಹಾಸಿಕ ನಿರ್ಣಯವಾಗಿದೆ. ಈ ಮೂಲಕ ಜಮ್ಮು ಮತ್ತು ಕಾಶ್ಮೀರ ದೇಶದ ಇತರ ರಾಜ್ಯಗಳೊಂದಿದೆ ಸಂಪರ್ಕ ಹೊಂದಲು ಸಾಧ್ಯವಾಯಿತು ಎಂದಿದ್ದಾರೆ.

ಇನ್ನು ಈ ನಿರ್ಣಯ ಪಶ್ಚಿಮದಲ್ಲಿರುವ ನೆರೆಯ ರಾಷ್ಟ್ರದ ಅನೇಕ ಯೋಜನೆಗಳಿಗೆ ಪೆಟ್ಟು ನೀಡಿತು. ಭಯೋತ್ಪಾದನೆ ವಿಚಾರದಲ್ಲಿ ಸಹಿಸಿಕೊಳ್ಳುವ ಮಾತೇ ಇಲ್ಲ. ಅದಕ್ಕಾಗಿ ನಾವು ಅನೇಕ ಆಯ್ಕೆಗಳನ್ನ ಹೊಂದಿದ್ದು, ಆ ಆಯ್ಕೆಗಳನ್ನ ಬಳಸಲು ಹಿಂಜರಿಯುವುದಿಲ್ಲ ಎಂದು ನಯವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.

ಮುಂಬರುವ ದಿನಗಳಲ್ಲಿ ಉನ್ನತ ಮಟ್ಟದ ಕಾರ್ಯಾಚರಣೆ ನಡೆಸಲು ಸಿದ್ಧವಾಗಬೇಕಾಗಿದೆ. ಭಾರತೀಯ ಸೇನೆ, ಸವಾಲುಗಳನ್ನ ಎದುರಿಸಲು ಸಿದ್ಧವಾಗಿದ್ದು, ಭವಿಷ್ಯದಲ್ಲಿನ ನಿರೀಕ್ಷಿತ ಕಾರ್ಯಾಚರಣೆಗೆ ಸನ್ನದ್ಧವಾಗುತ್ತಿದೆ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.