ETV Bharat / bharat

ದಿನಕ್ಕೆ ಒಂದು ಮಿಲಿಯನ್​​ ಕೊರೊನಾ ಲಸಿಕೆ ವಿತರಿಸಲು ಸಜ್ಜಾದ ಅಪೋಲೊ - ದಿನಕ್ಕೆ ಒಂದು ಮಿಲಿಯನ್​​ ಲಸಿಕೆ ವಿತರಣೆ

ದಿನಕ್ಕೆ ಒಂದು ಮಿಲಿಯನ್ ಕೊರೊನಾ​​ ಲಸಿಕೆ ವಿತರಿಸಲು ಅಪೋಲೊ ಸಂಸ್ಥೆ ಸಜ್ಜಾಗಿದೆ. ಅಪೋಲೊ 24/7, ಸರ್ವೇ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರು ಲಸಿಕೆ ಕೊಳ್ಳುತ್ತಾರೆಯೇ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಮತ್ತು ಕೊಳ್ಳುವವರ ಹೆಸರನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ.

Apollo to give 1 million Covid vaccines a day
ದಿನಕ್ಕೆ ಒಂದು ಮಿಲಿಯನ್​​ ಕೊರೊನಾ ಲಸಿಕೆ ವಿತರಿಸಲು ಸಜ್ಜಾದ ಅಪೋಲೋ
author img

By

Published : Nov 25, 2020, 1:38 PM IST

Updated : Nov 25, 2020, 2:01 PM IST

ನವದೆಹಲಿ: ಭಾರತದಾದ್ಯಂತ ಕೊರೊನಾ ಲಸಿಕೆ ಲಭ್ಯವಾದ ನಂತರ ಅಪೋಲೊ ತನ್ನ ಕ್ಲಿನಿಕ್ಸ್​​​, ಆರೋಗ್ಯ ಕೇಂದ್ರಗಳು, ಫಾರ್ಮಸಿಸ್​​ ಮೂಲಕ ದಿನಕ್ಕೆ ಒಂದು ಮಿಲಿಯನ್​​ ಲಸಿಕೆ ವಿತರಿಸಲು ಸಜ್ಜಾಗಿದೆ.

ಕೋವಿಡ್ -19 ಲಸಿಕೆ ಮುಂದಿನ 60 - 120 ದಿನಗಳಲ್ಲಿ ವಿತರಣೆಗೆ ಸಿದ್ಧಗೊಳ್ಳಬೇಕಿದೆ. ಅಪೋಲೊ 24/7, ಸರ್ವೇ ಕಾರ್ಯ ನಡೆಸುತ್ತಿದ್ದು, ಸಾರ್ವಜನಿಕರು ಲಸಿಕೆ ಕೊಳ್ಳುತ್ತಾರೆಯೇ ಎಂಬ ಮಾಹಿತಿ ಕಲೆಹಾಕಲಾಗುತ್ತಿದೆ. ಮತ್ತು ಕೊಳ್ಳುವವರ ಹೆಸರನ್ನು ನೋಂದಾಯಿಸಿಕೊಳ್ಳಲಾಗುತ್ತಿದೆ.

''ಈ ಪಟ್ಟಿಗೆ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ ಮತ್ತು ನಿಮ್ಮ ಪ್ರೀತಿ ಪಾತ್ರರನ್ನು ರಕ್ಷಿಸಿಕೊಳ್ಳಿ. ಮಹಾಮಾರಿ ಕೊರೊನಾ ವಿರುದ್ಧ ಹೋರಾಡಲು ಲಸಿಕೆ ಸಿದ್ಧಗೊಳ್ಳುವ ಸಂದರ್ಭದಲ್ಲಿ, ಲಸಿಕೆ ಕುರಿತು ತಿಳಿದುಕೊಳ್ಳುವವರಲ್ಲಿ ನೀವು ಮೊದಲಿಗರಾಗುತ್ತೀರಿ'' ಎಂದು ಅಪೋಲೊ 24/7 ತಿಳಿಸಿದೆ.

ಅಪೋಲೊ 24/7, ಈಗಲೇ ಲಸಿಕೆ ಕೊಳ್ಳುವವರ ಪಟ್ಟಿಗೆ ಹೆಸರು ನೋಂದಾಯಿಸುವಂತೆ ಗ್ರಾಹಕರಲ್ಲಿ ಕೇಳಿಕೊಂಡಿದೆ. ಹೆಸರಿನೊಂದಿಗೆ ದೂರವಾಣಿ ಸಂಖ್ಯೆ ಸಹ ಹಂಚಿಕೊಳ್ಳಿ, ಆ ಮೂಲಕ ಲಸಿಕೆ ಕುರಿತು ಮಾಹಿತಿ ನೀಡುತ್ತೇವೆ. ಉತ್ತಮ ಮತ್ತು ಸುರಕ್ಷಿತವಾದ ಕೋವಿಡ್ -19 ಲಸಿಕೆಗಳ ಬಗ್ಗೆ ನಾವು ನಿಮಗೆ ಮಾಹಿತಿ ನೀಡುತ್ತೇವೆ. ಲಸಿಕೆ ಯಾವಾಗ ಲಭ್ಯವಾಗುತ್ತದೆ, ಯಾರು ಅದನ್ನು ಮೊದಲು ಪಡೆಯುತ್ತಾರೆ ಮತ್ತು ನೀವು ಅದನ್ನು ಹೇಗೆ ಪಡೆಯಬಹುದು ಎಂಬ ಮಾಹಿತಿ ನೀಡುತ್ತೇವೆ ಎಂದು ಅಪೋಲೊ 24/7 ತಿಳಿಸಿದೆ.

ಸಮೀಕ್ಷೆಯಲ್ಲಿ ಕೇಳಲಾಗುವ ಪ್ರಶ್ನೆಗಳು:

  • ನೀವು ಕೋವಿಡ್ -19 ಲಸಿಕೆ ತೆಗೆದುಕೊಳ್ಳುತ್ತೀರಾ?
  • ಕೋವಿಡ್ -19 ಲಸಿಕೆ ಲಭ್ಯವಾದ ನಂತರ ನೀವು ಎಷ್ಟು ಬೇಗನೆ ತೆಗೆದುಕೊಳ್ಳುತ್ತೀರಿ ಎನ್ನುವ ಪ್ರಶ್ನೆಗಳನ್ನು ಕೇಳಲಾಗುತ್ತದೆ.
Last Updated : Nov 25, 2020, 2:01 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.