ಅಮರಾವತಿ(ಆಂಧ್ರಪ್ರದೇಶ): ವಿಶಾಖಪಟ್ಟಣದ ನರ್ಸಿ ಪಟ್ಟಣದ ಸರ್ಕಾರಿ ವೈದ್ಯ ಡಾ. ಸುಧಾರಕ್ ಬಂಧನ ಪ್ರಕರಣದ ವಿಚಾರಣೆ ನಡೆಸಿದ ಆಂಧ್ರಪ್ರದೇಶದ ಹೈಕೋರ್ಟ್, ಸಿಬಿಐ ತನಿಖೆಗೆ ಆದೇಶಿಸಿದೆ.
ವೈದ್ಯ ಸುಧಾಕರ್ ಅವರನ್ನು ಬಂಧಿಸಿರುವ ಪೊಲೀಸರು ನಡೆದುಕೊಂಡ ಬಗ್ಗೆ ತನಿಖೆ ನಡೆಸಿ ವರದಿ ನೀಡುವಂತೆ ಕೋರ್ಟ್ ಹೇಳಿದೆ. ಮೇ 16 ರಂದು ಸುಧಾಕರ್ ಅವರನ್ನು ಅನಿರೀಕ್ಷಿತ ಸ್ಥಿತಿಯಲ್ಲಿ ವಿಶಾಖಪಟ್ಟಣಂನಲ್ಲಿ ಬಂಧಿಸಲಾಗಿತ್ತು. ವೈದ್ಯನ ಬಂಧನ ಅತ್ಯಂತ ಅಮಾನವೀಯವಾಗಿ ನಡೆದಿದೆ ಎಂದು ವೆಂಕಟೇಶ್ವರಲು ಎಂಬ ವ್ಯಕ್ತಿ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ರು. ಟಿಡಿಪಿ ಮಹಿಳಾ ನಾಯಕಿ ವಗಲಪೂಡಿ ಅನಿತಾ ಕೂಡ ಕೋರ್ಟ್‌ಗೆ ಪತ್ರ ಬರೆದು ವಿಡಿಯೋ ಒದಗಿಸಿದ್ರು. ಇದರ ಆಧಾರ ಮೇಲೆ ಪ್ರಕರಣವನ್ನು ಕೋರ್ಟ್ ವಿಚಾರಣೆಗೆ ಪರಿಗಣಿಸಿದೆ.
ಇದೇ ವಿವಾದ..
ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಎನ್-95 ಮಾಸ್ಕ್‌ಗಳನ್ನು ಕೊಡುತ್ತಿಲ್ಲ ಎಂದು ವಿಶಾಖಪಟ್ಟಣ ಜಿಲ್ಲೆಯ ನರ್ಸಿಪಟ್ಟಣ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯ ಸುಧಾಕಾರ್ ಪ್ರಶ್ನಿಸಿದ್ರು. ಅವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. 2020ರ ಏಪ್ರಿಲ್ 8 ರಂದು ವೈದ್ಯ ಸುಧಾಕರ್ ಅವರನ್ನು ಅಮಾನತು ಮಾಡಿ ಆದೇಶಿಸಲಾಗಿತ್ತು. ಯಾವುದೇ ವಿಚಾರಣೆ, ನೋಟಿಸ್ ಕೂಡ ನೀಡದೆ ಸಸ್ಪೆಂಡ್ ಮಾಡಿದ್ದಕ್ಕೆ ಅಂದೇ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ಇಂದು ಹೈಕೋರ್ಟ್ ವಿಚಾರಣೆ ನಡೆಸಿ ಪೊಲೀಸರ ನಡೆ ಕುರಿತು ಸಿಬಿಐ ತನಿಖೆಗೆ ಆದೇಶ ನೀಡಿದೆ.