ಅಮರಾವತಿ: ಮಹಿಳೆಯರ ಮೇಲಿನ ಅತ್ಯಾಚಾರ, ಆಸಿಡ್ ದಾಳಿ ಮತ್ತಿತರ ಅಪರಾಧ ಪ್ರಕರಣಕ್ಕೆ ಕೇವಲ 21 ದಿನಗಳಲ್ಲಿ ಶಿಕ್ಷೆ ನೀಡುವ ದಿಶಾ ವಿಧೇಯಕ ಜಾರಿಗೆ ತಂದಿರುವ ಆಂಧ್ರ ಮುಖ್ಯಮಂತ್ರಿ ಇದೀಗ ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಹೊಸ ಯೋಜನೆ ಜಾರಿಗೊಳಿಸಿದ್ದಾರೆ.
'ಜಗನ್ನ ವಸ್ತಿ ದೀವೆನಾ'(Jagananna Vasthi Deevena) ಎಂಬ ಹೆಸರಿನ ಮತ್ತೊಂದು ಯೋಜನೆ ಇಂದಿನಿಂದ ಆರಂಭಗೊಂಡಿದ್ದು, ಇದರ ಮೂಲಕ ಹಾಸ್ಟೆಲ್ನಲ್ಲಿದ್ದುಕೊಂಡು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತಮ್ಮ ವೆಚ್ಚ ಪೂರೈಸಿಕೊಳ್ಳಲು ಹಾಗೂ ಮಧ್ಯಂತರ ಕೋರ್ಸ್ ಮಾಡಲು ಸಹಕಾರಿಯಾಗಲಿದೆ. ಬರೋಬ್ಬರಿ 2,300 ಕೋಟಿ ರೂ. ಹಣ ಈ ಯೋಜನೆಗಾಗಿ ವ್ಯಯ ಮಾಡಲಾಗುತ್ತಿದೆ.
ಐಟಿಐ,ಪಾಲಿಟೆಕ್ನಿಕ್, ಪದವಿ ಪೂರ್ವ ಮತ್ತು ಸ್ನಾತಕೋತ್ತರ ಶಿಕ್ಷಣ ಕಲಿಯುತ್ತಿರುವ 11,87,904 ವಿದ್ಯಾರ್ಥಿಗಳಿಗೆ ಇದರ ಲಾಭವಾಗಲಿದೆ ಎಂದು ಮುಖ್ಯಮಂತ್ರಿ ಕಚೇರಿ ಮಾಹಿತಿ ನೀಡಿದೆ.
ಈ ಯೋಜನೆ ಮೂಲಕ ಐಟಿಐ ವಿದ್ಯಾರ್ಥಿಗಳಿಗೆ ತಲಾ 10,000 ರೂ., ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ಮತ್ತು ಪದವಿಪೂರ್ವ ಮತ್ತು ಸ್ನಾತಕೋತ್ತರ ಪದವೀಧರರಿಗೆ ತಲಾ 20,000 ರೂ. ವಾರ್ಷಿಕವಾಗಿ ನೀಡಲು ನಿರ್ಧರಿಸಲಾಗಿದೆ.