ETV Bharat / bharat

ಪೌರತ್ವ ಕಿಚ್ಚು.. ಯುಪಿ ಹಿಂಸಾಚಾರದಲ್ಲಿ 15ಕ್ಕೆ ಏರಿದ ಸಾವಿನ ಸಂಖ್ಯೆ..

ಪೌರತ್ವ ತಿದ್ದುಪಡಿ ಕಾಯ್ಕೆ ವಿರುದ್ಧ ತೀವ್ರ ಆಕ್ರೋಶ ಎಲ್ಲೆಡೆ ವ್ಯಕ್ತವಾಗುತ್ತಿದೆ. ಅದರಲ್ಲೂ ಉತ್ತರ ಪ್ರದೇಶದಲ್ಲಿ ಇದರ ತೀವ್ರತೆ ಹೆಚ್ಚಾಗಿದೆ. ನಿನ್ನೆ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಯತಿಮ್ಖಾನಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವಲ್ಲಿ ಹಾಗೂ ಗೋಡೆ ಒಡೆಯುವಲ್ಲಿ ಮುಂದಾಗಿದ್ದರು.

ಯುಪಿ ಹಿಂಸಾಚಾರದಲ್ಲಿ 15 ಕ್ಕೆ  ಏರಿದ ಸಾವಿನ ಸಂಖ್ಯೆ ,death toll in UP violence rises to 15
ಯುಪಿ ಹಿಂಸಾಚಾರದಲ್ಲಿ 15 ಕ್ಕೆ ಏರಿದ ಸಾವಿನ ಸಂಖ್ಯೆ
author img

By

Published : Dec 22, 2019, 11:20 AM IST

ಉತ್ತರ ಪ್ರದೇಶ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಎಲ್ಲೆಡೆ ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದೆ. ಉತ್ತರ ಪ್ರದೇಶದಲ್ಲಿ ಪ್ರತಿಭಟನೆ ವೇಳೆ ಮೃತಪಟ್ಟವರ ಸಂಖ್ಯೆ 15ಕ್ಕೇರಿದೆ.

ನಿನ್ನೆ ನಡೆದ ಪ್ರತಿಭಟನೆ ವೇಳೆ ಪ್ರತಿಭಟನಾಕಾರರು ಯತಿಮ್ಖಾನಾ ಪೊಲೀಸ್ ಠಾಣೆಗೆ ಬೆಂಕಿ ಹಚ್ಚುವಲ್ಲಿ ಹಾಗೂ ಗೋಡೆ ಒಡೆಯುವಲ್ಲಿ ಮುಂದಾಗಿದ್ದರು. ಆ ವೇಳೆ ಕೆಲವರಿಗೆ ಗಾಯವಾಗಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶುಕ್ರವಾರದಂದು ನಡೆದಿದ್ದ ಹಿಂಸಾಚಾರದಲ್ಲಿ 6 ಮಂದಿ ಮೃತಪಟ್ಟಿದ್ದರು. ಹಲವರು ಗಾಯಗೊಂಡಿದ್ದರು. ಗಾಯಗೊಂಡವರಲ್ಲಿ ಐವರು ನಿನ್ನೆ ಸಾವನ್ನಪ್ಪಿದ್ದಾರೆ. ಘಟನೆ ಸಂಬಂಧ ಎಡಿಜಿ ಪ್ರೇಮ್ ಪ್ರಕಾಶ್ ಮಾಹಿತಿ ನೀಡಿ, ಪರಿಸ್ಥಿತಿಯನ್ನು ನಿಯಂತ್ರಿಸಲು ವಜ್ರ ವಾಹನಗಳೊಂದಿಗೆ ಆರ್‌ಎಎಫ್​ನ ನಿಯೋಜಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಸಮಾಜವಾದಿ ಪಕ್ಷದ ಶಾಸಕ ಅಮಿತಾಬ್ ಬಜ್​ಪೈ ಮತ್ತು ಮಾಜಿ ಶಾಸಕ ಮತ್ತು ಎಸ್ಪಿ ಮುಖಂಡ ಕಮಲೇಶ್ ತಿವಾರಿ ಅವರನ್ನು ಬಂಧಿಸಲಾಗಿದೆ. ಅವರ ವಾಹನಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ ಎಂದರು.

Intro:Body:

Anti-CAA stir: Police post torched in Kanpur; death toll in UP violence rises to 15

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.