ETV Bharat / bharat

ಪ್ರತಿಭಟನೆ ವೇಳೆ ಸಾರ್ವಜನಿಕರ ಆಸ್ತಿ ಹಾನಿ ಮಾಡಿದವರಿಗೆ ಸಂಕಷ್ಟ: ನಷ್ಟ ಕಟ್ಟಿಕೊಡುವಂತೆ ನೋಟಿಸ್ - ಸಿಎಎ ಪ್ರತಿಭಟನಾಕಾರರಿಗೆ ನೋಟಿಸ್

ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಲು ಉತ್ತರ ಪ್ರದೇಶ ಪೊಲೀಸರು ಮುಂದಾಗಿದ್ದಾರೆ.

ನಷ್ಟ ಕಟ್ಟಿಕೊಡುಂತೆ ನೋಟಿಸ್,Notice to over 60 people for damaging properties
ನಷ್ಟ ಕಟ್ಟಿಕೊಡುಂತೆ ನೋಟಿಸ್
author img

By

Published : Dec 26, 2019, 8:56 AM IST

Updated : Dec 26, 2019, 9:25 AM IST

ರಾಂಪುರ್ (ಉತ್ತರ ಪ್ರದೇಶ): ಕಳೆದ ವಾರ ಉತ್ತರಪ್ರದೇಶದ ರಾಂಪುರ್ ಮತ್ತು ಗೋರಖ್‌ಪುರದಲ್ಲಿ ನಡೆದ ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧದ ಪ್ರತಿಭಟನೆಯಲ್ಲಿ ಹಿಂಸಾಚಾರ ನಡೆಸಿ ಸಾರ್ವಜನಿಕರ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣರಾದ 60ಕ್ಕೂ ಹೆಚ್ಚು ಜನರನ್ನು ಗುರುತಿಸಿ ನೋಟಿಸ್ ಜಾರಿಗೊಳಿಸಿದ್ದು, ಹಾನಿಗೆ ಪರಿಹಾರವನ್ನು ನೀಡುವಂತೆ ಕೇಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಂಪುರ್​ ಜಿಲ್ಲೆಯಾದ್ಯಂತ ಸುಮಾರು 25 ಲಕ್ಷ ರೂಪಾಯಿಯಷ್ಟು ಹಾನಿಯನ್ನು ಪೊಲೀಸರು ಮತ್ತು ಜಿಲ್ಲಾಡಳಿತ ಅಂದಾಜು ಮಾಡಿದ್ದು, 28 ಜನರಿಗೆ ನೋಟಿಸ್ ಜಾರಿಗೊಳಿಸಿದೆ. ಪ್ರತಿಭಟನೆಯ ಸಮಯದಲ್ಲಿ ಹಿಂಸಾಚಾರ ನಡೆಸಿದವರನ್ನು ಗುರುತಿಸಲಾಗಿದ್ದು 28 ಜನರಿಗೆ ನೋಟಿಸ್ ನೀಡಲಾಗಿದೆ. ಅವರ ವಿರುದ್ಧ ಏಕೆ ಕ್ರಮ ತೆಗೆದುಕೊಳ್ಳಬಾರದು? ಎಂದು ಕೇಳಲಾಗಿದ್ದು ಉತ್ತರಿಸಲು ಏಳು ದಿನಗಳ ಕಾಲಾವಕಾಶ ನೀಡಲಾಗಿದೆ. ಸಾರ್ವಜನಿಕ ಮತ್ತು ಖಾಸಗಿ ಆಸ್ತಿಪಾಸ್ತಿಗಳ ನಾಶಕ್ಕಾಗಿ ಅವರಿಂದ ಹಣ ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ರಾಂಪುರ್ ಜಿಲ್ಲಾಧಿಕಾರಿ ಆಂಜನೇಯ ಸಿಂಗ್ ಹೇಳಿದ್ದಾರೆ.

  • Rampur DM Aunjaneya Singh: Those who were involved in destruction of public property on Dec 21 have been identified through CCTV footage & their names sent to police. Assessment of damage has been done & notice issued to 28 identified accused. Further action will be taken. #CAA pic.twitter.com/Yd8F8AB83V

    — ANI UP (@ANINewsUP) December 25, 2019 " class="align-text-top noRightClick twitterSection" data=" ">

ರಾಂಪುರ್​​ನಲ್ಲಿ ಕಳೆದ ಶನಿವಾರ 22 ವರ್ಷದ ಯುವಕ ಗುಂಡು ತಗುಲಿ ಸಾವನ್ನಪ್ಪಿದ್ದಾನೆ. ಘಟನೆಯ ವೇಳೆ ಪೊಲೀಸ್ ಬೈಕ್​ ಸೇರಿದಂತೆ ಆರು ವಾಹನಗಳನ್ನು ಸುಟ್ಟುಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಂಪುರ್​ನಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ 33 ಜನರನ್ನು ಬಂಧಿಸಲಾಗಿದೆ.

ಇತ್ತ ಗೋರಖ್​ಪುರ್​​ ಪೊಲೀಸರು ಸಹ 33 ಜನರಿಗೆ ನಷ್ಟದ ಪರಿಹಾರ ಕಟ್ಟಿಕೊಡುವಂತೆ ನೋಟಿಸ್ ನೀಡಿದ್ದಾರೆ. ಪ್ರತಿಭಟನೆ ಹೆಸರಿನಲ್ಲಿ ಹಿಂಸಾತ್ಮಕ ಕೃತ್ಯ ನಡೆಸಿ, ಸಾರ್ವಜನಿಕರ ಆಸ್ತಿ ಪಾಸ್ತಿ ನಷ್ಟಕ್ಕೆ ಕಾರಣರಾದವರ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

Intro:Body:Conclusion:
Last Updated : Dec 26, 2019, 9:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.