ETV Bharat / bharat

ವಿಶ್ವ ಬ್ಯಾಂಕ್​​​ ಗ್ರೂಪ್​ನಲ್ಲಿ ಭಾರತೀಯ ಮಹಿಳೆಗೆ ಉನ್ನತ ಸ್ಥಾನಮಾನ - undefined

ಅನ್ಶುಲ ಕಾಂತ್ ಅವರನ್ನು ವಿಶ್ವ ಬ್ಯಾಂಕ್​​ ಗ್ರೂಪ್​ನ ಮ್ಯಾನೇಜಿಂಗ್ ಡೈರೆಕ್ಟರ್​ ಆಗಿ ನೇಮಕ ಮಾಡಲಾಗಿದೆ. ಹಣಕಾಸು, ಬ್ಯಾಂಕಿಂಗ್, ತಾಂತ್ರಿಕ ವಲಯದಲ್ಲಿ ಇವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದು ಗ್ರೂಪ್​​ ಅಧ್ಯಕ್ಷ ಡೇವಿಡ್​ ಮಲ್ಪಾಸ್ ಹೇಳಿದ್ದಾರೆ.

ಅನ್ಶುಲ ಕಾಂತ್
author img

By

Published : Jul 13, 2019, 7:42 AM IST

ವಾಷಿಂಗ್ಟನ್​: ಭಾರತೀಯ ಬ್ಯಾಂಕರ್​ ಅನ್ಶುಲ ಕಾಂತ್ ಅವರನ್ನು ವಿಶ್ವಬ್ಯಾಂಕ್​ ಗ್ರೂಪ್​​ನ ವ್ಯವಸ್ಥಾಪಕ ನಿರ್ದೇಶಕಿ ಹಾಗೂ ಮುಖ್ಯ ಹಣಕಾಸು ಅಧಿಕಾರಿಯನ್ನಾಗಿ ನೇಮಿಸಲಾಗಿದೆ.

ಸದ್ಯ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಾಂತ್ ಅವರು, ಈ ಮೊದಲು ಎಸ್​ಬಿಐನ ಮುಖ್ಯ ಹಣಕಾಸು ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಬ್ಯಾಂಕ್​ನ ಆರ್ಥಿಕ ಸುಸ್ಥಿರತೆಗೆ ಸಾಕಷ್ಟು ಶ್ರಮ ವಹಿಸಿದ್ದರು.

ಈ ಬಗ್ಗೆ ವಿಶ್ವ ಬ್ಯಾಂಕ್ ಗ್ರೂಪ್​​ ಅಧ್ಯಕ್ಷ ಡೇವಿಡ್​ ಮಲ್ಪಾಸ್​ ಮಾತನಾಡಿ, ಅನ್ಶುಲ ಕಾಂತ್ ಅವರನ್ನು ಗ್ರೂಪ್​ನ ಮ್ಯಾನೇಜಿಂಗ್ ಡೈರೆಕ್ಟರ್​ ಆಗಿ ನೇಮಕ ಮಾಡಲಾಗಿದೆ. ಹಣಕಾಸು, ಬ್ಯಾಂಕಿಂಗ್, ತಾಂತ್ರಿಕ ವಲಯದಲ್ಲಿ ಇವರು ಸಾಕಷ್ಟು ಸೇವೆ ಸಲ್ಲಿಸಿದ್ದಾರೆ ಎಂದು ಹೇಳಿದರು.

ವಿಶ್ವ ಬ್ಯಾಂಕ್​ನ ಹಣಕಾಸು ಹಾಗೂ ಬಿಕ್ಕಟ್ಟು ನಿರ್ವಹಣೆ ಹೊಣೆಯನ್ನು ಕಾಂತ್ ಅವರಿಗೆ ನೀಡಲಾಗಿದೆ. ಲೇಡಿ ಶ್ರೀರಾಮ್ ಕಾಲೇಜಿನಲ್ಲಿ ಎಕನಾಮಿಕ್ ಹಾನರ್ಸ್ ಪಡೆದಿದ್ದ ಕಾಂತ್​, ದೆಹಲಿಯ ಸ್ಕೂಲ್ ಆಫ್ ಎಕನಾಮಿಕ್ಸ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.