ಇಂದೋರ್ : ತೆಲಂಗಾಣದ ಪೆದ್ದಪಳ್ಳಿ ಜಿಲ್ಲೆಯ ಬೊಲ್ಲಿ ಸ್ವಾಮಿ ಗ್ರಾಮದ ಮತ್ತೊಂದು ಕುಟುಂಬ ಪಾಕಿಸ್ತಾನದಿಂದ ಮರಳಿದ ಗೀತಾ ತಮ್ಮ ಮಗಳೆಂದು ಹೇಳಿದೆ.
ಗೀತಾ ತನ್ನ ಕಳೆದುಹೋದ ಮಗಳು, ಅಕೆ ನನ್ನ ಮಗಳೆಂದು ಸಾಬೀತುಪಡಿಸಲು ಡಿಎನ್ಎ ಪರೀಕ್ಷೆಗೆ ಒಳಗಾಗಲು ಸಿದ್ಧ ಎಂದು ಬೊಲ್ಲಿ ಸ್ವಾಮಿ ಗ್ರಾಮದ ಬುಲ್ಲಿ ಶ್ಯಾಮ್ ಸುಂದರ್ ಹೇಳಿದ್ದಾನೆ.
ಈ ಕುರಿತು ಈಟಿವಿ ಭಾರತ್ ಜೊತೆ ಮಾತನಾಡಿದ ಬುಲ್ಲಿ ಶ್ಯಾಮ್ ಸುಂದರ್, ಕಿವುಡಿ ಮತ್ತು ಮೂಗಿಯಾಗಿರುವ ನನ್ನ ಮಗಳು 2000 ಇಸವಿಯಲ್ಲಿ ಮನೆಯಿಂದ ನಾಪತ್ತೆಯಾಗಿದ್ದಳು. ಅಂದಿನಿಂದ ನಾನು ಅವಳನ್ನು ಹುಡುಕುತ್ತಿದ್ದೇನೆ ಎಂದಿದ್ದಾರೆ.
ಓದಿ: 15 ವರ್ಷಗಳ ಬಳಿಕ ಊರು ತಲುಪಿದ ತೆಲಂಗಾಣದ ಗೀತಾ: ಮಗಳನ್ನು ಗುರುತಿಸಿದ ಪೋಷಕರು
ಮಧ್ಯ ಪ್ರದೇಶ ಮೂಲದ ಎನ್ಜಿಒ ಪ್ರತಿನಿಧಿಗಳಾದ ಜ್ಞಾನೇಂದ್ರ ಪುರೋಹಿತ್ ಮತ್ತು ಮೋನಿಕಾ ಪುರೋಹಿತ್ ಜೊತೆ ಸೇರಿ ತೆಲಂಗಾಣಕ್ಕೆ ಆಗಮಿಸಿರುವ ಗೀತಾ ತನ್ನ ಪೋಷಕರನ್ನು ಹುಡುಕುತ್ತಿದ್ದಾಳೆ.
ಇತ್ತೀಚೆಗೆ ತೆಲಂಗಾಣದ ಬಸಾರಕ್ಕೆ ಆಗಮಿಸಿದ್ದ ಗೀತಾ, ಅಲ್ಲಿ ಆಕೆ ಬಾಲ್ಯ ಕಳೆದ ಸ್ಥಳಗಳನ್ನು ಗುರುತಿಸಿದ್ದಳು. ಈ ವೇಳೆ ಗೀತಾ ಆಗಮಿಸಿದ ಸುದ್ದಿ ತಿಳಿದು ಗ್ರಾಮದ ದಂಪತಿ, ಗೀತಾ ತಮ್ಮ ಮಗಳೆಂದು ಬಾಲ್ಯದ ಬಟ್ಟೆ ಬರೆಗಳನ್ನು ಹಿಡಿದು ಮುಂದೆ ಬಂದಿದ್ದರು. ಈ ನಡುವೆ ಮತ್ತೊಂದು ಕುಟುಂಬ ತಮ್ಮ ಮಗಳೆಂದು ಹೇಳಿದೆ.