ETV Bharat / bharat

ಆಂಧ್ರದಲ್ಲಿ ನ.2ರಿಂದ ಪ್ರಾಥಮಿಕ ಶಾಲೆ ಶುರು: ಬಹುದೊಡ್ಡ ನಿರ್ಣಯ ಜಾರಿಗೆ ಸಿಎಂ ಜಗನ್ ಸಜ್ಜು! - school reopen precautions at AP

ಪ್ರತಿ ತರಗತಿಯಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಸಾಮಾಜಿಕ ಅಂತರ ಮಾನದಂಡಗಳನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. 180 ವರ್ಕಿಂಗ್​ ದಿನಗಳನ್ನು ನಡೆಸಲು 2020-21ರ ಶೈಕ್ಷಣಿಕ ವರ್ಷವನ್ನು ಏಪ್ರಿಲ್ 30ಕ್ಕೆ ವಿಸ್ತರಿಸಿದೆ ಎಂದು ಆಂಧ್ರಪ್ರದೇಶ ಸರ್ಕಾರ ತಿಳಿಸಿದೆ.

Andhra schools to reopen
ಶಾಲೆ ಶುರು
author img

By

Published : Oct 31, 2020, 6:07 PM IST

ಅಮರಾವತಿ: ಸಿಎಂ ವೈಎಸ್​ ಜಗನ್ಮೋಹನ್ ರೆಡ್ಡಿ ಸರ್ಕಾರವು 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ ಶಾಲೆಗಳು ಸೋಮವಾರದಿಂದ ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಮತ್ತೊಮ್ಮೆ ಎಲ್ಲ ಆರೋಗ್ಯ ಮುನ್ನೆಚ್ಚರಿಕೆಗಳು ಮತ್ತು ನಿಯಮಾವಳಿಗಳನ್ನು ಅನುಸರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.

ಪ್ರತಿ ತರಗತಿಯಲ್ಲಿ ಸೀಮಿತ ಸಂಖ್ಯೆಯ ವಿದ್ಯಾರ್ಥಿಗಳಿಗೆ ಅವಕಾಶ ನೀಡಬೇಕು. ಸಾಮಾಜಿಕ ಅಂತರ ಮಾನದಂಡಗಳನ್ನು ಕಡ್ಡಾಯವಾಗಿ ಕಾಯ್ದುಕೊಳ್ಳಬೇಕು. 180 ವರ್ಕಿಂಗ್​ ದಿನಗಳನ್ನು ನಡೆಸಲು 2020 - 21ರ ಶೈಕ್ಷಣಿಕ ವರ್ಷವನ್ನು ಏಪ್ರಿಲ್ 30ಕ್ಕೆ ವಿಸ್ತರಿಸಲಾಗಿದೆ.

ರಾಜ್ಯದ ವಿವಿಧ ತರಗತಿಗಳ ಶಾಲೆಗಳು ಹಂತ - ಹಂತವಾಗಿ ಪುನಃ ತೆರೆಯಲಿವೆ ಎಂದು ಶಾಲಾ ಶಿಕ್ಷಣ ಆಯುಕ್ತ ವಿ.ವಿನ್ನ ವೀರಭದ್ರು ಹೇಳಿದ್ದಾರೆ.

ಒಂಬತ್ತನೇ ತರಗತಿ ಮತ್ತು ಹನ್ನೆರಡು ವಿದ್ಯಾರ್ಥಿಗಳು ವಾರದ ಪರ್ಯಾಯ ದಿನಗಳಲ್ಲಿ ಸೋಮವಾರದಿಂದ ಮಧ್ಯಾಹ್ನ ಗಂಟೆಗೆ ತರಗತಿಗಳಲ್ಲಿ ಹಾಜರಾಗಲಿದ್ದಾರೆ.

6 ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳಿಗೆ ನವೆಂಬರ್ 23ರಿಂದ ಶಾಲೆಗಳು ಮತ್ತೆ ತೆರೆಯಲ್ಪಡುತ್ತವೆ. 1ರಿಂದ 5ನೇ ತರಗತಿಗಳು ಡಿಸೆಂಬರ್ 14ರಿಂದ ಪುನಾರಂಭಗೊಳ್ಳುತ್ತದೆ.

ಮಾಸ್ಕ್​ ಧರಿಸುವುದು, ಕೈ ತೊಳೆಯುವುದು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಪ್ರತಿಯೊಬ್ಬ ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಕಡ್ಡಾಯವಾಗಿದೆ. ನಿತ್ಯ ವಿದ್ಯಾರ್ಥಿಗಳು ಕೋವಿಡ್ ಮುನ್ನೆಚ್ಚರಿಕೆಗಳ ಬಗ್ಗೆ ಗಮನಹರಿಸಬೇಕು. ಬೆಳಗ್ಗೆ 9.15ರಿಂದ ಮಧ್ಯಾಹ್ನ 1.45ರವರೆಗೆ ತರಗತಿಗಳು ನಡೆಯಲಿದ್ದು, ಮಧ್ಯಾಹ್ನದ ಊಟದ ವ್ಯವಸ್ಥೆ ಇರಲಿದೆ ಎಂದು ವೀರಭದ್ರು ತಿಳಿಸಿದರು.

ಬೆಳಗ್ಗೆ ತರಗತಿಗಳಿಗೆ ಗೈರಾದವರಿಗೆ, ಹಿಂದಿನ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗದವರಿಗೆ ಆನ್‌ಲೈನ್ ತರಗತಿಗಳು ನಡೆಯಲಿವೆ.

ತಂತ್ರಜ್ಞಾನದ ಆಧಾರದ ಮೇಲೆ ದೂರದರ್ಶನ ತರಗತಿಗಳು ಮತ್ತು ಯೂಟ್ಯೂಬ್ ಚಾನೆಲ್‌ಗಳ ಜೊತೆಗೆ ಮೀಸಲಾದ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಮನೆಯಲ್ಲಿಯೇ ಉಳಿಯಲು ಮತ್ತು ಆನ್‌ಲೈನ್ ಶಿಕ್ಷಣ ಮುಂದುವರಿಸಲು ಇಚ್ಛಿಸುವ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಆಯುಕ್ತರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.