ETV Bharat / bharat

ಯೋಧರ ಭರ್ಜರಿ ಕಾರ್ಯಾಚರಣೆ... ಎನ್​ಕೌಂಟರ್​ನಲ್ಲಿ ನಾಲ್ವರು ಉಗ್ರರು ಹತ - Shopian

ಜಮ್ಮು ಕಾಶ್ಮೀರದ ಶೋಪಿಯಾನ್​ನಲ್ಲಿ ಪೊಲೀಸರು ಮತ್ತು ಯೋಧರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಎನ್​ಕೌಂಟರ್​ನಲ್ಲಿ ನಾಲ್ವರು ಉಗ್ರರನ್ನು ಹೊಡೆದುರುಳಿಸಿದ್ದಾರೆ.

An encounter has started at Pinjora area of Shopian
ಎನ್​ಕೌಂಟರ್
author img

By

Published : Jun 8, 2020, 7:35 AM IST

Updated : Jun 8, 2020, 11:46 AM IST

ಶೋಪಿಯಾನ್​(ಜಮ್ಮು-ಕಾಶ್ಮೀರ): ಶೋಪಿಯಾನ್​ ಜಿಲ್ಲೆಯಲ್ಲಿ ನಡೆದ ಎನ್​​​ಕೌಂಟರ್​ನಲ್ಲಿ ನಾಲ್ವರು ಉಗ್ರರನ್ನು ಯೋಧರು ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹೊಡೆದುರುಳಿಸಿದ್ದಾರೆ.

ಎನ್​ಕೌಂಟರ್​ನಲ್ಲಿ ನಾಲ್ವರು ಉಗ್ರರು ಹತ

ಉಗ್ರರನ್ನು ಹೆಡೆಮುರಿ ಕಟ್ಟಲು ಸನ್ನದ್ಧವಾಗಿರುವ ಪೊಲೀಸರು ಮತ್ತು ಸೇನಾಪಡೆ ಸಿಬ್ಬಂದಿ ಇಂದು ಭರ್ಜರಿ ಕಾರ್ಯಾಚರಣೆ ಮೂಲಕ ನಾಲ್ವರು ಉಗ್ರರನ್ನು ಬೇಟೆಯಾಡಿದ್ದಾರೆ. ಖಚಿತ ಸುಳಿವಿನ ಹಿನ್ನೆಲೆ ಸೋಪಿಯಾನ್​ ಜಿಲ್ಲೆಯ ಪಿಂಜೋರಾ ಭಾಗದಲ್ಲಿ ಈ ಎನ್​ಕೌಂಟರ್​ ನಡೆದಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್, ನಿನ್ನೆ ಹಾಗೂ ಇಂದು ನಡೆಸಿದ ಕಾರ್ಯಾಚರಣೆಯಲ್ಲಿ ಹಿಜ್ಬುಲ್ ಮುಜಾಹಿದ್ದೀನ್‌ ಸಂಘಟನೆಯ 9 ಉಗ್ರರು ಬಲಿಯಾಗಿದ್ದಾರೆ. ಕಳೆದ 2 ವಾರಗಳಲ್ಲಿ 9 ಬೃಹತ್​ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಇದರಲ್ಲಿ ಆರು ಹಿರಿಯ ಕಮಾಂಡರ್‌ಗಳು ಸೇರಿದಂತೆ ಒಟ್ಟು 22 ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

Last Updated : Jun 8, 2020, 11:46 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.