ETV Bharat / bharat

ಪ್ರತಿದಿನ 18 ಕಿ.ಮೀ. ದೋಣಿ ನಡೆಸಿಕೊಂಡು ಹೋಗಿ ಡ್ಯೂಟಿ ಮಾಡುವ ಅಂಗನವಾಡಿ ಕಾರ್ಯಕರ್ತೆ!!

ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ವಿಚಾರಿಸುವುದು,ಮಕ್ಕಳ ತೂಕ ಪರೀಕ್ಷಿಸುವುದು, ಅಪೌಷ್ಠಿಕತೆಯಿಂದ ಕೂಡಿದ ತಾಯಂದಿರಿಗೆ ಸರ್ಕಾರದಿಂದ ಕೊಡಲ್ಪಡುವ ಮೊಟ್ಟೆ ಮತ್ತಿತರ ಪೌಷ್ಠಿಕ ಆಹಾರ ನೀಡುತ್ತಾರೆ..

author img

By

Published : Nov 23, 2020, 12:05 PM IST

an Anganwadi worker from Nandurbar rows 18 kilometres
ದೋಣಿ ನಡೆಸಿಕೊಂಡು ಹೋಗುವ ಅಂಗನವಾಡಿ ಕಾರ್ಯಕರ್ತೆ

ಮಹಾರಾಷ್ಟ್ರ: ನಂದೂರ್‌ಬಾರ್‌ನ ಅಂಗನವಾಡಿ ಕಾರ್ಯಕರ್ತೆ ರೇಲು ವಾಸವೆ ಎಂಬುವರು 6ಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮತ್ತು ಹಳ್ಳಿಗಾಡಿನ ತಾಯಂದಿರ ಯೋಗಕ್ಷೇಮ ವಿಚಾರಿಸಿಕೊಳ್ಳಲು ನದಿಯಲ್ಲಿ ಸುಮಾರು 18 ಕಿ.ಮೀ. ದೋಣಿಯನ್ನು ತಾವೇ ನಡೆಸಿಕೊಂಡು ಹೋಗ್ತಾರೆ.

ದೋಣಿ ನಡೆಸಿಕೊಂಡು ಹೋಗುವ ಅಂಗನವಾಡಿ ಕಾರ್ಯಕರ್ತೆ..

ಈ ಕುರಿತು ಪ್ರತಿಕ್ರಿಯಿಸುವ ರೇಲು ವಾಸವೆ, ಪ್ರತಿದಿನ ದೋಣಿ ನಡೆಸಿಕೊಂಡು ಬರುವುದು ಕಷ್ಟ. ಆದರೆ, ಶಿಶುಗಳು ಮತ್ತು ತಾಯಂದಿರು ಪೌಷ್ಠಿಕ ಆಹಾರವನ್ನು ಸೇವಿಸುವುದು ಅವಶ್ಯಕ ಹಾಗೂ ಆರೋಗ್ಯಕರವಾಗಿರುವುದು ಮುಖ್ಯವಾದ್ದರಿಂದ ಅವರಿಗಾಗಿ ನಾನು ಹೋಗುತ್ತೇನೆ ಎಂದು ತಿಳಿಸಿದ್ರು.

ರೇವು ಕಾರ್ಯನಿರ್ವಹಿಸುತ್ತಿರುವುದು ಬುಡಕಟ್ಟು ಜನರಿಗಾಗಿ. ಈ ಜನರು ವಾಸಿರುವ ಕುಗ್ರಾಮಗಳಿಗೆ ತೆರಳಲು ರಸ್ತೆಮಾರ್ಗ ಉತ್ತಮವಾಗಿಲ್ಲ. ದೋಣಿ ಮೂಲಕವೇ ತೆರಳಬೇಕು. ಹೀಗಾಗಿ, ಸ್ಥಳೀಯರೊಬ್ಬರ ಬಳಿ ಚಿಕ್ಕ ದೋಣಿಯೊಂದನ್ನು ಖರೀದಿಸಿದ್ದು, ಈ ದೋಣಿ ಮೂಲಕವೇ ದಿನ ಹೋಗಿ ಬರುತ್ತಾರೆ.

ಗರ್ಭಿಣಿಯರು ಹಾಗೂ ಬಾಣಂತಿಯರ ಆರೋಗ್ಯ ವಿಚಾರಿಸುವುದು,ಮಕ್ಕಳ ತೂಕ ಪರೀಕ್ಷಿಸುವುದು, ಅಪೌಷ್ಠಿಕತೆಯಿಂದ ಕೂಡಿದ ತಾಯಂದಿರಿಗೆ ಸರ್ಕಾರದಿಂದ ಕೊಡಲ್ಪಡುವ ಮೊಟ್ಟೆ ಮತ್ತಿತರ ಪೌಷ್ಠಿಕ ಆಹಾರ ನೀಡುತ್ತಾರೆ.

ಬೆಳಗ್ಗೆ 7:30ಕ್ಕೆ ಹೊರಡುವ ಅವರು ಮತ್ತೆ ಮನೆ ತಲುಪುವುದು ಸಂಜೆಗೆ. ಹೀಗಾಗಿ ರೇಲು ವಾಸವೆ ಅವರ ನಿಸ್ವಾರ್ಥ ಸೇವೆಗಾಗಿ ಜನ ಇವರಿಗೆ ವಿಶೇಷ ಗೌರವ ನೀಡುತ್ತಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.