ETV Bharat / bharat

ಕೊರೊನಾ ಎಫೆಕ್ಟ್​: ನೇರ ಪ್ರಸಾರದಲ್ಲಿ ಮಾತ್ರ ನೋಡಬಹುದು ಸೇನೆಯ ಪಾಸಿಂಗ್​​ ಔಟ್ ಪರೇಡ್ !

ದೇಶಾದ್ಯಂತ ಕೋವಿಡ್​-19 ಮಹಾಮಾರಿ ಭೀತಿ ಹಿನ್ನೆಲೆಯಲ್ಲಿ ಭಾರತೀಯ ಮಿಲಿಟರಿ ಅಕಾಡೆಮಿಯ ಸಾಂಪ್ರದಾಯಿಕ ಪಾಸಿಂಗ್​​ ಔಟ್ ಪರೇಡ್‌ಗೆ ಸಾಕ್ಷಿಯಾಗಲು ಕೆಡೆಟ್‌ಗಳ ಕುಟುಂಬ ಸದಸ್ಯರಿಗೆ ಅನುಮತಿ ನೀಡಿಲ್ಲ. ಭಾರತೀಯ ಸೇನೆಯ ಯುಟ್ಯೂಬ್ ಚಾನೆಲ್‌ನಲ್ಲಿ ದೇಶಾದ್ಯಂತ ಪರೇಡ್​ನ ನೇರ ಪ್ರಸಾರ ನೋಡಬಹುದಾಗಿದೆ.

Amid pandemic, IMA to livestream historic passing out parade tomorrow
ಸೇನೆಯ ಪಾಸಿಂಗ್​​ ಔಟ್ ಪರೇಡ್
author img

By

Published : Jun 13, 2020, 5:13 AM IST

ಡೆಹ್ರಾಡೂನ್: ಕೊರೊನಾ ವೈರಸ್​ ಹಿನ್ನೆಲೆ ಇಂದು ನಡೆಯುತ್ತಿರುವ ಭಾರತೀಯ ಮಿಲಿಟರಿ ಅಕಾಡೆಮಿಯ (ಐಎಂಎ) ಪಾಸಿಂಗ್ ಔಟ್ ಪರೇಡ್ (ಪಿಒಪಿ) ಭಾರತೀಯ ಸೇನೆಯ ಯುಟ್ಯೂಬ್ ಚಾನೆಲ್‌ನಲ್ಲಿ ದೇಶಾದ್ಯಂತ ನೇರ ಪ್ರಸಾರವಾಗಲಿದೆ. ಪರೇಡ್​ ನಡೆಯುವ ಮೈದಾನದಲ್ಲಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ.

ಕೋವಿಡ್​​-19 ಕಾರಣದಿಂದ ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಿಗೆ ಕಡಿವಾಣ ಹೇರಿದ್ದರೂ ಕೂಡ ಸಾಂಪ್ರದಾಯಿಕ ಪಾಸಿಂಗ್ ಔಟ್ ಪರೇಡ್​ನಲ್ಲಿ ಜಂಟಲ್​ಮೆನ್​ ಕೆಡೆಟ್​​ಗಳ ಜೋಶ್​ ಸಹಜವಾಗಿರಲಿದೆ. 2020ರ ಬ್ಯಾಚ್​ನ ಪಾಸಿಂಗ್ ಔಟ್ ಪರೇಡ್​ ಇದಾಗಿದೆ.

Amid pandemic, IMA to livestream historic passing out parade tomorrow
ನೇರ ಪ್ರಸಾರದಲ್ಲಿ ಮಾತ್ರ ನೋಡಬಹುದು ಸೇನೆಯ ಪಾಸಿಂಗ್​​ ಔಟ್ ಪರೇಡ್

ಪ್ರತಿ ಆರು ತಿಂಗಳಿಗೊಮ್ಮೆ, ಐಎಂಎಯು ತನ್ನ ಕೆಡೆಟ್‌ಗಳಿಗೆ ಭಾರತೀಯ ಸೈನ್ಯದ ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಗಳಿಗೆ ಸೇರುವ ನಿಟ್ಟಿನಲ್ಲಿ ಪಾಸಿಂಗ್ ಔಟ್ ಪರೇಡ್ ಆಯೋಜಿಸುತ್ತದೆ. ಪರೇಡ್​​ನಲ್ಲಿ ಭಾಗವಹಿಸುವ ವಿದೇಶಿ ಕೆಡೆಟ್‌ಗಳು ಆಯಾ ದೇಶಗಳಲ್ಲಿನ ಸೈನ್ಯಕ್ಕೆ ಸೇರಲು ತೆರಳುತ್ತಾರೆ.

ಕೊರೊನಾ ಭೀತಿ ಹಿನ್ನೆಲೆ ಐಎಂಎ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೆಡೆಟ್‌ಗಳ ಪೋಷಕರನ್ನು ಪರೇಡ್​​ಗೆ ಆಹ್ವಾನಿಸಿಲ್ಲ. ಇದಲ್ಲದೆ, ಕೆಡೆಟ್‌ಗಳು ಖಡ್ಗ ಮತ್ತು ಅತ್ಯುತ್ತಮ ಪ್ರದರ್ಶನಕ್ಕೆ ನೀಡಲಾಗುವ ಪದಕಗಳನ್ನು ಮುಟ್ಟವುದನ್ನು ನಿಷೇಧಿಸಲಾಗಿದೆ. ಅಲ್ಲದೆ ಪರೇಡ್​ ನಡೆಯುವ ಮೈದಾನದ ವೀಕ್ಷಕ ಗ್ಯಾಲರಿಗಳು ಖಾಲಿ ಖಾಲಿಯಾಗಿರಲಿವೆ.

ಇಲ್ಲಿಯವರೆಗೆ, ಐಎಂಎಯು ಕಾಮನ್ವೆಲ್ತ್ ದೇಶಗಳ 2,413 ಅಧಿಕಾರಿಗಳು ಸೇರಿದಂತೆ 62,139 ರಾಷ್ಟ್ರೀಯ ಮತ್ತು ವಿದೇಶಿ ಅಧಿಕಾರಿಗಳಿಗೆ ತರಬೇತಿ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.