ನವದೆಹಲಿ: ಭಾರತದ ಜನಸಂಖ್ಯೆಯ ಅರ್ಧದಷ್ಟು ಜನರು ಯಾವುದೇ ಉದ್ಯೋಗ ಅಥವಾ ಆದಾಯವಿಲ್ಲದೆ ಕೇವಲ ಉಳಿತಾಯ ಅಥವಾ ಕುಟುಂಬ ಬೆಂಬಲದಿಂದ ಒಂದು ತಿಂಗಳಿಗಿಂತ ಹೆಚ್ಚು ಕಾಲ ಬದುಕಲು ಸಾಧ್ಯವಾಗುವುದಿಲ್ಲ ಎಂದು ಸಮೀಕ್ಷೆಯೊಂದು ಹೇಳಿದೆ.
ಸುದೀರ್ಘವಾದ ಲಾಕ್‌ಡೌನ್ ಮತ್ತು ಆರ್ಥಿಕ ಕುಸಿತದೊಂದಿಗೆ ಉದ್ಯೋಗ ನಷ್ಟಗಳು ಹೆಚ್ಚುತ್ತಿರುವ ಕಾರಣ ಹಲವಾರು ಕುಟುಂಬಗಳು ಎಷ್ಟು ಸಮಯದವರೆಗೆ ಸ್ಥಿರವಾಗಿರಬಹುದು ಎಂಬ ಆತಂಕಗಳು ಹೆಚ್ಚುತ್ತಿವೆ.
ಇತ್ತೀಚಿನ ಸಮೀಕ್ಷೆಯೊಂದು, ಶೇಕಡಾ 28.2ರಷ್ಟು ಜನ ಆದಾಯವಿಲ್ಲದೆ ಒಂದು ತಿಂಗಳಿಗಿಂತ ಕಡಿಮೆ ಸಮಯದವರೆಗೆ ಮಾತ್ರ ಬದುಕಲು ಸಾಧ್ಯ. ಶೇಕಡಾ 20.7ರಷ್ಟು ಜನರು ಒಂದು ತಿಂಗಳ ಕಾಲ ಬದುಕುಳಿಯಬಹುದು ಎಂದು ಹೇಳಿದೆ.
ಶೇಕಡಾ 10.7ರಷ್ಟು ಜನರು ಮಾತ್ರ ಒಂದು ವರ್ಷಕ್ಕಿಂತ ಹೆಚ್ಚು ಸಮಯ ಆದಾಯವಿಲ್ಲದೆ ಬದುಕಬಹುದು ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ.