ಸೌಪಾಲ್(ಬಿಹಾರ): ಆಗಸ್ಟ್ 19ರಂದು ನಿಧನರಾಗಿದ್ದ ಬಿಹಾರದ ಮಾಜಿ ಸಿಎಂ ಜಗನ್ನಾಥ್ ಮಿಶ್ರಾರ ಅಂತಿಮ ಕಾರ್ಯ ಇಂದು ನಡೆದಿದೆ. ಆದರೆ ಸಕಲ ಸರ್ಕಾರಿ ಗೌರವ ಸಲ್ಲಿಕೆ ವೇಳೆ ನಡೆದ ಲೋಪವೊಂದು ಹೈಲೈಟ್ ಆಗಿತ್ತು.
ಸಕಲ ಸರ್ಕಾರಿ ಗೌರವದಂತೆ ಪೊಲೀಸ್ ಅಧಿಕಾರಿಗಳು 22 ರೈಫಲ್ಗಳ ಮೂಲಕ ಒಂದು ಸುತ್ತಿನ ಗುಂಡು ಹಾರಿಸಿ ಗೌರವ ಸಲ್ಲಿಸುವ ಸಂಪ್ರದಾಯವನ್ನು ಅನುಸರಿಸಲಾಯಿತು. ಆದರೆ 22 ರೈಫಲ್ನಿಂದಲೂ ಗುಂಡು ಹಾರಲೇ ಇಲ್ಲ. ರೈಫಲ್ ದೋಷ ಗಮನಕ್ಕೆ ಬಂದ ತಕ್ಷಣ ಪೊಲೀಸ್ ಅಧಿಕಾರಿಗಳು ರೈಫಲ್ ಪರೀಕ್ಷಿಸಿದ್ದಾರೆ. ಆದರೆ ಇದಾವುದೂ ಸಫಲವಾಗಲಿಲ್ಲ.
-
#WATCH Rifles fail to fire during the state funeral of former Bihar Chief Minister Jagannath Mishra, in Supaul. (21.8.19) pic.twitter.com/vBnSe7oNTt
— ANI (@ANI) August 22, 2019 " class="align-text-top noRightClick twitterSection" data="
">#WATCH Rifles fail to fire during the state funeral of former Bihar Chief Minister Jagannath Mishra, in Supaul. (21.8.19) pic.twitter.com/vBnSe7oNTt
— ANI (@ANI) August 22, 2019#WATCH Rifles fail to fire during the state funeral of former Bihar Chief Minister Jagannath Mishra, in Supaul. (21.8.19) pic.twitter.com/vBnSe7oNTt
— ANI (@ANI) August 22, 2019
ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಆರ್ಜೆಡಿ ಶಾಸಕ ಪಿಪ್ರಾ ಯದುವಂಶ ಕುಮಾರ್ ಯಾದವ್, ಈ ಘಟನೆ ಮಾಜಿ ಸಿಎಂಗೆ ಮಾಡಿದ ಅವಮಾನ ಎಂದಿದ್ದು, ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
ಬಿಹಾರ ಮಾಜಿ ಸಿಎಂ ಜಗನ್ನಾಥ್ ಮಿಶ್ರಾರ ಅಂತ್ಯಸಂಸ್ಕಾರ ಅವರ ಪೂರ್ವಜರ ಸ್ಥಳವಾದ ಸೌಪಾಲ್ ಜಿಲ್ಲೆಯಲ್ಲಿ ನಡೆದಿದೆ. ಅಂತಿಮ ಸಂಸ್ಕಾರದಲ್ಲಿ ಹಾಲಿ ಸಿಎಂ ನಿತೀಶ್ ಕುಮಾರ್, ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹಾಗೂ ಆರೋಗ್ಯ ಸಚಿವ ಮಂಗಲ್ ಪಾಂಡೆ ಭಾಗಿಯಾಗಿದ್ದರು.