ನವದೆಹಲಿ: ಉಸಿರಾಡೋ ಗಾಳಿ ರಾಷ್ಟ್ರ ರಾಜಧಾನಿಯಲ್ಲಿ ವಿಷವಾಗಿ ಪರಿಣಮಿಸುತ್ತಿದೆ. ದಿನದಿಂದ ದಿನಕ್ಕೆ ದೆಹಲಿಯ ಗಾಳಿ ಗುಣಮಟ್ಟ ಕ್ಷೀಣಿಸುತ್ತಿದ್ದು ಇಲ್ಲಿನ ನಾಗರಿಕರು ಅಪಾಯವನ್ನು ಎದುರಿಸುತ್ತಿದ್ದಾರೆ.
ಇಂದು ಮುಂಜಾನೆ ವಾಯು ಗುಣಮಟ್ಟ ಸೂಚ್ಯಂಕ(Air Quality Index) 62 5ಕ್ಕೇರಿಕೆಯಾಗಿದ್ದು, ಈ ಬಾರಿಯ ಅತಿ ಕ್ಷೀಣ ಗುಣಮಟ್ಟ ಇದಾಗಿದೆ. ಸದ್ಯದ ಮಾಹಿತಿ ಪ್ರಕಾರ ಎಐಕ್ಯೂ 1000 ಹತ್ತಿರ ಸಮೀಪವಿದೆ ಎನ್ನಲಾಗಿದೆ.
-
Delhi: Bawana at 492, ITO crossing at 487 and Ashok Vihar at 482 on Air Quality Index. All three in 'Severe' category. #DelhiAirQuality (file pic) pic.twitter.com/F0kAfkDdKg
— ANI (@ANI) November 3, 2019 " class="align-text-top noRightClick twitterSection" data="
">Delhi: Bawana at 492, ITO crossing at 487 and Ashok Vihar at 482 on Air Quality Index. All three in 'Severe' category. #DelhiAirQuality (file pic) pic.twitter.com/F0kAfkDdKg
— ANI (@ANI) November 3, 2019Delhi: Bawana at 492, ITO crossing at 487 and Ashok Vihar at 482 on Air Quality Index. All three in 'Severe' category. #DelhiAirQuality (file pic) pic.twitter.com/F0kAfkDdKg
— ANI (@ANI) November 3, 2019
ವಾಯು ಗುಣಮಟ್ಟ ಸೂಚ್ಯಂಕವು, 0-50 ನಡುವಿದ್ದರೆ 'ಉತ್ತಮ', 51-100 "ತೃಪ್ತಿದಾಯಕ", 101-200 "ಮಧ್ಯಮ", 201-300 "ಕಳಪೆ", 301-400 "ತುಂಬಾ ಕಳಪೆ" ಮತ್ತು 401-500 "ತೀವ್ರ ಕಳಪೆ" ಎಂದು ಪರಿಗಣಿಸಲಾಗುತ್ತದೆ. ಅಲ್ಲದೆ 500 ಕ್ಕಿಂತ ಹೆಚ್ಚಿದ್ದರೆ 'ತೀವ್ರ ಹಾಗೂ ಅತಿ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ದೆಹಲಿ ಈಗ ಇದೆಲ್ಲವನ್ನೂ ಮೀರಿ, 1000 ಸಮೀಪಿಸಿದೆ.
ಅತ್ಯಂತ ಕಳಪೆ ಮತ್ತು ಅಪಾಯಕಾರಿ ಗುಣಮಟ್ಟದ ಈ ವಾಯುವಿನಿಂದ ರಾಜಧಾನಿಯ ನಾಗರಿಕರು ಉಸಿರಾಟದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.