ನವದೆಹಲಿ: ಪಾಶ್ಚಾತ್ಯ ವಲಯದ ವಾಯುಪಡೆಯ ಹಿರಿಯ ಅಧಿಕಾರಿಯಾಗಿ ಏರ್ ಮಾರ್ಷಲ್ ವಿಕ್ರಮ್ ಸಿಂಗ್ ಅಧಿಕಾರ ಸ್ವೀಕರಿಸಿದ್ದಾರೆ.
1984ರ ಡಿಸೆಂಬರ್ 21ರಂದು ವಿಕ್ರಮ್ ಸಿಂಗ್ ಅವರನ್ನು ಫೈಟರ್ ಸ್ಟ್ರೀಮ್ಗೆ ನಿಯೋಜಿಸಲಾಗಿತ್ತು. ದಕ್ಷಿಣ ಆಫ್ರಿಕಾದ ಪ್ರಿಟೋರಿಯಾದಲ್ಲಿ ಫ್ಲೈಟ್ ಟೆಸ್ಟ್ ಕೋರ್ಸ್ಗೆ ಸೇರುವ ಮೊದಲು ವಿಕ್ರಮ್ ಸಿಂಗ್ ಅವರು ಮಿಗ್ -21 ಮತ್ತು ಮಿರಾಜ್ -2000 ವಿಮಾನಗಳನ್ನು ಹಾರಿಸಿದ್ದರು.
ವಿಕ್ರಮ್ ಸಿಂಗ್, ನ್ಯಾಷನಲ್ ಫ್ಲೈಟ್ ಟೆಸ್ಟ್ ಸೆಂಟರ್ನಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ವಾಯು ಪ್ರಧಾನ ಕಚೇರಿಯಲ್ಲಿ ಏರ್ ಸ್ಟಾಫ್ ಯೋಜನೆಗಳ ಸಹಾಯಕ ಮುಖ್ಯಸ್ಥರಾಗಿ ವಿವಿಧ ಸಿಬ್ಬಂದಿಯ ನೇಮಕಾತಿಗಳನ್ನು ಮಾಡಿದ್ದಾರೆ.