ನವದೆಹಲಿ: ಏರ್ ಇಂಡಿಯಾದ ಮಹಿಳಾ ಪೈಲಟ್ ತಂಡ ವಿಶ್ವದ ಅತಿ ಉದ್ದದ ವಾಯು ಮಾರ್ಗ ಉತ್ತರ ಧ್ರುವದ ಮೇಲೆ ಹಾರಾಟ ನಡೆಸಲಿದೆ. ಸ್ಯಾನ್ ಫ್ರಾನ್ಸಿಸ್ಕೋ(ಎಸ್ಎಫ್ಒ)ನಿಂದ ಹಾರಾಟ ನಡೆಸಲಿದ್ದು, ಜನವರಿ 9ರಂದು ಬೆಂಗಳೂರಿಗೆ ತಲುಪಲಿದ್ದಾರೆ. ಈ ಪ್ರಯಾಣದ ಒಟ್ಟು ದೂರ ಸುಮಾರು 16,000 ಕಿಲೋ ಮೀಟರ್ ಇರಲಿದೆ.
ಉತ್ತರ ಧ್ರುವದ ಮೂಲಕ ಹಾರಾಟ ಬಹಳ ಸವಾಲಿನದು. ಏರ್ ಇಂಡಿಯಾ ಮಹಿಳಾ ಕ್ಯಾಪ್ಟನ್ ಜೋಯಾ ಅಗರವಾಲ್ ಈ ಹಾರಾಟದ ನೇತೃತ್ವ ವಹಿಸಿದ್ದಾರೆ. ಈ ಹಾರಾಟ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಿಂದ ಉತ್ತರ ಧ್ರುವದ ಮೂಲಕ ಬೆಂಗಳೂರಿಗೆ ಸಾಗಿ ಬರಲಿದೆ. ಈ ಮೂಲಕ ಹೊಸ ಮಹಿಳಾ ಪೈಲಟ್‌ಗಳು ವಿನೂತನ ಇತಿಹಾಸ ನಿರ್ಮಾಣಗೊಳ್ಳಲಿದೆ.
ಓದಿ: ದೊಣ್ಣೆ-ರಾಡುಗಳಿಂದ ಡಾಲ್ಫಿನ್ ಹೊಡೆದು ಕೊಂದ ಪಾಪಿಗಳು: ವಿಡಿಯೋ ವೈರಲ್
ವಿಶ್ವದಲ್ಲಿ ತಮ್ಮ ಜೀವಿತಾವಧಿಯಲ್ಲಿ ಉತ್ತರ ಧ್ರುವದ ಭೌಗೋಳಿಕ ನಕ್ಷೆಯನ್ನೂ ನೋಡಿರುವ ಜನರಿದ್ದಾರೆ. ನಾಗರಿಕ ವಿಮಾನಯಾನ ಸಚಿವಾಲಯ ನನ್ನ ಮೇಲೆ ಇಟ್ಟಿರುವ ನಂಬಿಕೆಯಿಂದ ಈ ಸವಾಲು ತೆಗೆದುಕೊಳ್ಳಲು ಸಿದ್ಧಳಾಗಿದ್ದೇನೆ. ಇದೊಂದು ಸುವರ್ಣಾವಕಾಶ ಎಂದು ಜೋಯಾ ಅಗರವಾಲ್ ಹೇಳಿದ್ದಾರೆ.
ಜೋಯಾ ಅಗರವಾಲ್ ಜತೆ ತನ್ಮೈ ಪಾಪಗರಿ, ಆಕಾಶಾ ಸೋನವಾನೆ ಮತ್ತು ಶಿವಾನಿ ಮನ್ಹಾಸ್ ಇರಲಿದ್ದಾರೆ ಎಂದು ಅವರು ತಿಳಿಸಿದರು. ಮಹಿಳಾ ಪೈಲಟ್‌ಗಳ ತಂಡ ಉತ್ತರ ಧ್ರುವದ ಮೇಲೆ ಹಾರಾಟ ನಡೆಸಿ ಇತಿಹಾಸ ಸೃಷ್ಠಿಸಲಿದೆ. ವಾಯುಯಾನ ತಜ್ಞರ ಪ್ರಕಾರ, ಉತ್ತರ ಧ್ರುವದ ಮೇಲೆ ಹಾರಾಟ ಅತ್ಯಂತ ಕಠಿಣ ಹಾಗೂ ತಾಂತ್ರಿಕತೆಯಿಂದ ಕೂಡಿರಲಿದೆ.