ನವದೆಹಲಿ: ವಂದೇ ಭಾರತ್ ಮಿಷನ್ ವೈಮಾನಿಕ ಸ್ಥಳಾಂತರದಲ್ಲಿ ವಿದೇಶದಿಂದ ಕರೆತರಲಾದ ಭಾರತೀಯರನ್ನು ಅವರವರ ರಾಜ್ಯಗಳಿಗೆ ಕಳುಹಿಸಲು ಏರ್ ಇಂಡಿಯಾ ವಿಶೇಷ ದೇಶೀಯ ವಿಮಾನಗಳನ್ನು ಹಾರಿಸುತ್ತಿದೆ.
ಕೊರೊನಾ ವೈರಸ್ ಲಾಕ್ಡೌನ್ನಿಂದಾಗಿ ವಿದೇಶಗಳಲ್ಲಿ ಸಿಲುಕಿರುವ ಸಾವಿರಾರು ಭಾರತೀಯ ನಾಗರಿಕರನ್ನು ಮರಳಿ ಕರೆತರುವಲ್ಲಿ ವಿಮಾನಯಾನ ಸಂಸ್ಥೆ ತೊಡಗಿದೆ. ಪ್ರಯಾಣಿಕರು ವಿದೇಶದಿಂದ ದೇಶದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಬಂದ ಬಳಿಕ ಅವರು ತಮ್ಮ ತವರು ರಾಜ್ಯಗಳನ್ನು ತಲುಪಲು ಹೆಚ್ಚಿನ ಸಾರಿಗೆ ಅಗತ್ಯವಿರುತ್ತದೆ. ಹೀಗಾಗಿ, ವಿಮಾನಯಾನವು ಆ ಪ್ರಯಾಣಿಕರಿಗಾಗಿ ಈ ವಿಶೇಷ ದೇಶೀಯ ವಿಮಾನಗಳನ್ನು ಹಾರಿಸುತ್ತಿದೆ.
ಕಳೆದ ಬುಧವಾರ, ವಿಮಾನಯಾನವು 13 ವಿಮಾನಗಳಲ್ಲಿ ವಿದೇಶದಿಂದ 2,669 ಪ್ರಯಾಣಿಕರನ್ನು ಕರೆತಂದಿದೆ. ಇವರನ್ನು ಪ್ರತಿ ರಾಜ್ಯಗಳ ಅವರವರ ತವರಿಗೆ ಸೇರಿಸುವ ಹಿನ್ನೆಲೆಯಲ್ಲಿ ದೇಶೀಯ ಫೆರಿ ವಿಮಾನಗಳನ್ನು ಏರ್ ಇಂಡಿಯಾ ನಡೆಸುತ್ತಿದೆ.
ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರ 'ವಂದೇ ಭಾರತ್ ಮಿಷನ್' ಅಡಿಯಲ್ಲಿ ಒಟ್ಟು 64 ವಿಮಾನಗಳಲ್ಲಿ ಸ್ಥಳಾಂತರ ಪ್ರಕ್ರಿಯೆ ನಡೆಯುತ್ತಿದೆ.