ETV Bharat / bharat

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ನಾಳೆ ತೀರ್ಪು... ಫುಲ್ ಅಲರ್ಟ್​

ವಿಶೇಷ ಸಿಬಿಐ ಕೋರ್ಟ್ ಸೆ.30 ರಂದು ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪು ನೀಡಲಿದೆ.

author img

By

Published : Sep 29, 2020, 4:25 AM IST

Babri Masjid verdict
ಬಾಬ್ರಿ ಮಸೀದಿ ಧ್ವಂಸ ಪ್ರಕರಣ

ಲಕ್ನೋ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಬುಧವಾರ ಪ್ರಕಟವಾಗುವ ಹಿನ್ನೆಲೆ ಲಕ್ನೋದಲ್ಲಿ ಭಾರಿ ಭದ್ರತೆ ಕೈಗೊಳ್ಳಲಾಗಿದೆ.

ಈ ಪ್ರಕರಣದಲ್ಲಿ ಬಿಜೆಪಿಯ ಹಿರಿಯ ನಾಯಕರಾದ ಎಲ್​.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ, ಉಮಾ ಭಾರತಿ ಮತ್ತು ಕಲ್ಯಾಣ್ ಸಿಂಗ್ ಸೇರಿದಂತೆ 32 ಜನ ಆರೋಪಿಗಳಾಗಿದ್ದಾರೆ.

ಬಾಬ್ರಿ ಮಸೀದಿ ಧ್ವಂಸ ಪ್ರಕರಣ: ನಾಳೆ ತೀರ್ಪು... ಫುಲ್ ಅಲರ್ಟ್​

ಸೆ.30ರಂದು ವಿಶೇಷ ಸಿಬಿಐ ಕೋರ್ಟ್ ಈ ಪ್ರಕರಣದ ತೀರ್ಪು ನೀಡಲಿದೆ. ಎಲ್ಲ ಆರೋಪಿಗಳು ಖುದ್ದಾಗಿ ಕೋರ್ಟ್​ನಲ್ಲಿ ಹಾಜರಿರಬೇಕೆಂದು ಸಿಬಿಐ ವಿಶೇಷ ನ್ಯಾಯಮೂರ್ತಿ ಎಸ್​.ಕೆ.ಯಾದವ್ ಅವರು ಈಗಾಗಲೇ ನಿರ್ದೇಶನ ನೀಡಿದ್ದಾರೆ. ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಒಟ್ಟು 49 ಜನ ಆರೋಪಿಗಳಿದ್ದರು. ಆದ್ರೆ ಅದರಲ್ಲಿ 17 ಜನ ಈಗಾಗಲೇ ಮೃತಪಟ್ಟಿದ್ದಾರೆ.

ಪ್ರಕರಣ ಸಂಬಂಧ ಕೋರ್ಟ್​ ಮುಂದೆ ಸಿಬಿಐ, 351 ಸಾಕ್ಷಿಗಳನ್ನು ಮತ್ತು ಸುಮಾರು 600 ಸಾಕ್ಷ್ಯಾಧಾರಗಳನ್ನು ಪ್ರಸ್ತುತಪಡಿಸಿದೆ. ಈ ಮಧ್ಯೆ ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಉಮಾ ಭಾರತಿ ಅವರು ರಿಷಿಕೇಶಿ ಏಮ್ಸ್​ಗೆ ದಾಖಲಾಗಿದ್ದಾರೆ.

ಜಿಲ್ಲೆಯ ಪ್ರಮುಖ ಕಡೆಗಳಲ್ಲಿ ಪೊಲೀಸರು ತೀವ್ರ ತಪಾಸಣೆ ನಡೆಸಿ, ಕಟ್ಟೆಚ್ಚರ ವಹಿಸಿದ್ದಾರೆ. ಯಾವುದೇ ಊಹಾಪೋಹಗಳಿಗೆ ಜನ ಕಿವಿಗೊಡಬಾರದು. ಹೆಚ್ಚುವರಿ ಭದ್ರತಾ ವ್ಯವಸ್ಥೆಗಳನ್ನು ಮಾಡಿಕೊಂಡಿದ್ದೇವೆ ಎಂದು ಡಿಸಿಪಿ ಡಿ.ಕೆ.ಪಾಂಡೆ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.