ನವದೆಹಲಿ: ಇನ್ನು ಕೆಲವೇ ದಿನಗಳಲ್ಲಿ ಅಯೋಧ್ಯೆ ತೀರ್ಪು ಹೊರಬೀಳಲಿದ್ದು, ಈ ನಿಟ್ಟಿನಲ್ಲಿ ಉತ್ತರ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಅಯೋಧ್ಯೆ ಭೂ ವಿವಾದದ ತೀರ್ಪು ಮುಖ್ಯವಾಗಿ ಉತ್ತರ ಪ್ರದೇಶದಲ್ಲಿ ಗಲಾಟೆಗೆ ಕಾರಣವಾಗುವ ಸಾಧ್ಯತೆ ಇದ್ದು, ಈ ನಿಟ್ಟಿನಲ್ಲಿ 4000 ಪ್ಯಾರಾಮಿಲಿಟರಿ ಸೈನಿಕರನ್ನು ನಿಯೋಜನೆ ಮಾಡಲಾಗಿದೆ.
ಕೇಂದ್ರ ಸರ್ಕಾರ ಬರೋಬ್ಬರಿ 4000 ಸೈನಿಕರನ್ನು ನಿಯೋಜನೆ ಮಾಡಿ ಆದೇಶಿಸಿದೆ. ನವೆಂಬರ್ 18ರ ತನಕ ಪ್ಯಾರಾಮಿಲಿಟರಿ ಸೈನಿಕರು ಭದ್ರತೆ ನೀಡಲಿದ್ದಾರೆ.
-
Centre gives UP 4000 CAPF personnel to maintain law and order before, after Ayodhya judgement
— ANI Digital (@ani_digital) November 5, 2019 " class="align-text-top noRightClick twitterSection" data="
Read @ANI Story | https://t.co/GCqpXMtms4 pic.twitter.com/cxQn2Jg9jE
">Centre gives UP 4000 CAPF personnel to maintain law and order before, after Ayodhya judgement
— ANI Digital (@ani_digital) November 5, 2019
Read @ANI Story | https://t.co/GCqpXMtms4 pic.twitter.com/cxQn2Jg9jECentre gives UP 4000 CAPF personnel to maintain law and order before, after Ayodhya judgement
— ANI Digital (@ani_digital) November 5, 2019
Read @ANI Story | https://t.co/GCqpXMtms4 pic.twitter.com/cxQn2Jg9jE
ಅಯೋಧ್ಯೆ ಹಾಗೂ ವಾರಣಾಸಿ ಹೊರತಾಗಿ ಅತಿಸೂಕ್ಷ್ಮ ಪ್ರದೇಶಗಳಾದ ಕಾನ್ಪುರ, ಅಲಿಘಡ, ಲಖನೌ, ಅಜಂಗಢದಲ್ಲಿ ಪ್ಯಾರಾಮಿಲಿಟರಿಯನ್ನು ನಿಯೋಜನೆ ಮಾಡಲಾಗಿದೆ.
ನವೆಂಬರ್ 17ರಂದು ಸುಪ್ರೀಂಕೋರ್ಟ್ ಹಾಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಕಾರ್ಯಾವಧಿ ಮುಕ್ತಾಯವಾಗಲಿದ್ದು, ಹೀಗಾಗಿ ನ.17ಕ್ಕಿಂತ ಮುಂಚಿತವಾಗಿ ಐತಿಹಾಸಿಕ ತೀರ್ಪು ಹೊರಬೀಳಲಿದೆ.
ಉಗ್ರ ಭೀತಿ:
ಅಯೋಧ್ಯೆ ಭೂವಿವಾದದ ತೀರ್ಪಿನ ವೇಳೆ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಉತ್ತರ ಪ್ರದೇಶಕ್ಕೆ ನುಸುಳಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಗುಪ್ತಚರ ಇಲಾಖೆ ಮಾಹಿತಿಯ ಪ್ರಕಾರ ಒಟ್ಟು ಏಳು ಮಂದಿ ಉಗ್ರರು ಉತ್ತರ ಪ್ರದೇಶದಲ್ಲಿ ಅಡಗಿದ್ದಾರೆ ಎಂದು ತಿಳಿದು ಬಂದಿದೆ.