ಶ್ರೀನಗರ: ಜಮ್ಮು-ಕಾಶ್ಮೀರವನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾರ್ಪಡಿಸಿದ ಬಳಿಕ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಉಪಟಳ ಹೆಚ್ಚಾಗುತ್ತಿದೆ. ಕಳೆದ 25 ದಿನಗಳಲ್ಲಿ ಬರೋಬ್ಬರಿ 222ಕ್ಕೂ ಹೆಚ್ಚು ಸಲ ಕದನ ವಿರಾಮ ಉಲ್ಲಂಘಿಸಿದ ಪಾಕ್ ಸೇನೆ ಉದ್ಧಟತನ ಪ್ರದರ್ಶಿಸುತ್ತಿದೆ.
2019ರಲ್ಲೇ 1,889 ಸಲ ಕದನ ವಿರಾಮ(Ceasefire) ಉಲ್ಲಂಘಿಸಿರುವ ಪಾಕ್ ಇದೇ ತಿಂಗಳಲ್ಲಿ ಬರೋಬ್ಬರಿ 222 ಸಲ ಗಡಿಯಲ್ಲಿ ಗುಂಡಿನ ಚಕಮಕಿ ನಡೆಸಿದೆ ಎಂದು ವರದಿಯಾಗಿದೆ. ಪ್ರಮುಖವಾಗಿ ರಜೌರಿ, ಉರಿ ಸೆಕ್ಟರ್, ಕುಪ್ವಾರ್, ಹದ್ವಾರ್, ಪುಲ್ವಾಮಾ ಬಳಿ ನಿರಂತರವಾಗಿ ಗುಂಡಿನ ದಾಳಿ ನಡೆಸುತ್ತಿದೆ.