ನವದೆಹಲಿ: ಆಕ್ಟೋಬರ್ 2 ರಂದು ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಪರಿಸರಕ್ಕೆ ಮಾರವಾಗಿರುವ ಕೆಲವು ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ಸರ್ಕಾರ ತೀರ್ಮಾನಿಸಿದ್ದು, ಬಿಜೆಪಿ ಕಚೆರಿಯಿಂದಲೇ ಮೊದಿ ತಮ್ಮ ಕಾರ್ಯ ಆರಂಭಿಸಿದ್ದಾರೆ.
-
After PM's call, glass jars replace plastic water bottles at BJP headquarters
— ANI Digital (@ani_digital) September 29, 2019 " class="align-text-top noRightClick twitterSection" data="
Read @ANI Story | https://t.co/4MsDFDFlWO pic.twitter.com/4ep52DGGx1
">After PM's call, glass jars replace plastic water bottles at BJP headquarters
— ANI Digital (@ani_digital) September 29, 2019
Read @ANI Story | https://t.co/4MsDFDFlWO pic.twitter.com/4ep52DGGx1After PM's call, glass jars replace plastic water bottles at BJP headquarters
— ANI Digital (@ani_digital) September 29, 2019
Read @ANI Story | https://t.co/4MsDFDFlWO pic.twitter.com/4ep52DGGx1
ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಕಚೇರಿಯಲ್ಲಿ ನಡೆದ ಮೀಟಿಂಗ್ ವೇಳೆ ಕುಡಿಯುವ ನೀರನ್ನ ಪ್ಲಾಸ್ಟಿಕ್ ಬಾಟೆಲ್ನಲ್ಲಿ ಇರಿಸಲಾಗಿತ್ತು. ಇದನ್ನ ಕಂಡ ಮೋದಿ ಪ್ಲಾಸ್ಟಿಕ್ ಬಾಟೆಲ್ಗಳನ್ನ ತೆಗೆಯುವಂತೆ ಸೂಚಿಸಿದ್ದಾರೆ. ಪ್ರಧಾನಿ ಮೋದಿ ಸೂಚನೆಯಂತೆ ಪ್ಲಾಸ್ಟಿಕ್ ಬಾಟೆಲ್ಗಳನ್ನ ತೆಗೆದು ಗಾಜಿನ ಜಾರ್ನಲ್ಲಿ ನೀರು ತಂದು ಕೊಡಲಾಯಿತು.
ಅಕ್ಟೋಬರ್ 2 ರಿಂದ ಆರು ರೀತಿಯ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಪ್ಲಾಸ್ಟಿಕ್ ಬ್ಯಾಗ್ಗಳು, ಕಪ್ಗಳು, ಫಲಕಗಳು, ಸಣ್ಣ ಬಾಟಲ್ಗಳು, ಸ್ಟ್ರಾ ಮತ್ತು ಕೆಲವು ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ಮುಂದಾಗಿದೆ.