ಗಾಜಿಯಾಬಾದ್(ಉತ್ತರ ಪ್ರದೇಶ): ಕಳೆದ ವಾರ ನಟಿಯ ಚಿಕ್ಕಪ್ಪನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಅವರ ಬಂಧನ ಮಾಡುವಂತೆ ನಟಿ ಅಲಿಶಾ ಖಾನ್ ಸಲೀಮ್ ಒತ್ತಾಯಿಸಿದ್ದಾರೆ. ವಿಡಿಯೋ ಮೂಲಕ ಪೊಲೀಸರ ಬಳಿ ಮನವಿ ಮಾಡಿಕೊಂಡಿರುವ ನಟಿ ಅಲಿಶಾ, ತನ್ನ ಕುಟುಂಬಕ್ಕೆ ಬೆದರಿಕೆ ಇದ್ದು, ಆರೋಪಿಗಳನ್ನ ಆದಷ್ಟು ಬೇಗ ಬಂಧಿಸುವಂತೆ ಕೇಳಿಕೊಂಡಿದ್ದಾರೆ.
ಚಮನ್ ಮತ್ತು ರಾಮನ್ ಎಂಬ ಇಬ್ಬರು ತಮ್ಮ ಕುಟುಂಬಕ್ಕೆ ಬೆದರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಅವರನ್ನ ಹೊರಗಡೆ ಬಿಡಬಾರದು. ಹಾಗೂ ಹಲ್ಲೆ ನಡೆಸಿರುವ ಇತರ ಎಲ್ಲ ಆರೋಪಿಗಳನ್ನ ಬಂಧಿಸಬೇಕು ಎಂದಿದ್ದಾರೆ.
ಕಳೆದ ವಾರದ ನಟಿ ಅಲಿಶಾ ಚಿಕ್ಕಪ್ಪನ ಮೇಲೆ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ತಮ್ಮ ಕುಟುಂಬದ ಮೇಲೆ ಪದೇ ಪದೆ ಹಲ್ಲೆ ನಡೆಸಲಾಗುತ್ತಿದೆ ಎಂದು ನಟಿ ವಿಡಿಯೋದಲ್ಲಿ ಕಣ್ಣೀರಿಟ್ಟಿದ್ದಾರೆ.
ತಮ್ಮ ಬಳಿ ಇರುವ ಆಸ್ತಿ ಕಸಿದುಕೊಳ್ಳುವ ಉದ್ದೇಶದಿಂದ ಅವರು ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದು, ಉಳಿದ ಇಬ್ಬರ ಬಂಧನ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.