ETV Bharat / bharat

ಮೋದಿ - ಶಾ ಅವರನ್ನು ಕೃಷ್ಣ- ಅರ್ಜುನರಿಗೆ ಹೋಲಿಸಿದಕ್ಕೆ ಕಾರಣ ಕೊಟ್ಟ ರಜಿನಿ

'ಅವರು (ಪ್ರಧಾನಿ ಮೋದಿ- ಶಾ) 370 ರದ್ಧತಿಗೆ ಯೋಜಿಸಿದ ರೀತಿ ರಣತಂತ್ರದಿಂದ ಕೂಡಿತ್ತು. ಮೊದಲು ಸೆಕ್ಷನ್ 144 ಅನ್ನು ವಿಧಿಸಿದರು. ಜನರಿಗೆ ಯಾವುದೇ ವಿಧದ ತೊಂದರೆ ಆಗದಂತೆ ನೋಡಿಕೊಂಡರು. ನಂತರ ಅವರು ಮಸೂದೆಯನ್ನು ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಮಂಡಿಸಿದರು. ನಂತರ ಅದನ್ನು ಲೋಕಸಭೆಯಲ್ಲಿ ಅಂಗೀಕರಗೊಳಿಸಿದರು. ಹೀಗೆ ಒಂದೊಂದೆ ಮೆಟ್ಟಿಲು ಜೋಡಿಸಿದ ಅವರು, ತಮ್ಮ ಗುರಿ ತಲುಪುವಲ್ಲಿ ಯಶಸ್ವಿಯಾದರು ಎಂದು ರಜಿನಿಕಾಂತ್​ ಬಣ್ಣಿಸಿದ್ದಾರೆ.

author img

By

Published : Aug 15, 2019, 12:40 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ಹಿಂಪಡೆದಿದ್ದನ್ನು ಬೆಂಬಲಿಸಿದ ನಟ ರಜಿನಿಕಾಂತ್​ ಅವರು, ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಕೃಷ್ಣ- ಅರ್ಜುನರಿಗೆ ಹೋಲಿಸಿದ್ದರ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

'ಅವರು (ಮೋದಿ- ಶಾ) ಇಡೀ ಕಾಶ್ಮೀರ ಪ್ರಕರಣವನ್ನ ಯೋಜಿಸಿದ ರೀತಿ ರಣತಂತ್ರದಿಂದ ಕೂಡಿತ್ತು. ಮೊದಲು ಸೆಕ್ಷನ್ 144 ಅನ್ನು ವಿಧಿಸಿದರು. ಜನರಿಗೆ ಯಾವುದೇ ವಿಧದ ತೊಂದರೆ ಆಗದಂತೆ ನೋಡಿಕೊಂಡರು. ನಂತರ ಅವರು ಮಸೂದೆಯನ್ನು ಬಹುಮತವಿಲ್ಲದ ರಾಜ್ಯಸಭೆಯಲ್ಲಿ ಮಂಡಿಸಿದರು. ನಂತರ ಅದನ್ನು ಲೋಕಸಭೆಯಲ್ಲಿ ಅಂಗೀಕರಗೊಳಿಸಿದರು ಎಂದು ಎಳೆ ಎಳೆಯಾಗಿ ಬಿಡಿಸಿಟ್ಟರು.

ಆಗಸ್ಟ್​ 5ರಂದು ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ಸಂವಿಧಾನದ 370 ಮತ್ತು 35ಎ ವಿಧಿಯನ್ನು ವಾಪಸ್​ ಪಡೆದು ಕಾಶ್ಮೀರ ಮತ್ತು ಜಮ್ಮು ಹಾಗೂ ಲಡಾಖ್​ ಅನ್ನು ಕೇಂದ್ರಾಡಳಿ ಪ್ರದೇಶಗಳ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ವಿಧೇಯಕ ಮಂಡಿಸಿದರು.

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ಈ ವಿವಾದವನ್ನು ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರವನ್ನು ನಾನು ಮೆಚ್ಚುತ್ತೇನೆ ಎಂದು ಸೂಪರ್​ ಸ್ಟಾರ್ ರಜಿನಿ ಬೆಂಬಲಿಸಿ ಇಬ್ಬರನ್ನು ಕೃಷ್ಣಾರ್ಜುನರಿಗೆ ಹೋಲಿಸಿದ್ದರು.

ಕೃಷ್ಣಾರ್ಜುನ ಹೇಳಿಕೆಗೆ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಕಿಡಿಕಾರಿದ್ದರು, 'ಮೋದಿ ಮತ್ತು ಅಮಿತ್​ ಶಾ ಅವರನ್ನ ಕೃಷ್ಣ ಮತ್ತು ಅರ್ಜುನರಾದರೇ ಪಾಂಡವರು ಮತ್ತು ಕೌರವರು ಯಾರು? ನಿಮಗೆ ದೇಶದಲ್ಲಿ ಮತ್ತೊಂದು ಮಹಾಭಾರತ ನಡೆಯಬೇಕಾ? ಪ್ರಶ್ನಿಸಿದ್ದರು. ಇದಕ್ಕೆ ರಜಿನಿ ಉತ್ತರಿಸಿದ್ದು, 70 ವರ್ಷಗಳಿಂದ ಇದ್ದ 370 ನೇ ವಿಧಿಯನ್ನ ಇನ್ನಿಲ್ಲದಂತೆ ಮಾಡಲು ಶಾ- ಮೋದಿ ಜೋಡಿ ಅನುಸರಿಸಿದ ಕ್ರಮಗಳನ್ನ ಸಮರ್ಥಿಸಿ, ಓವೈಸಿಗೆ ದೀರ್ಘ ಉತ್ತರ ನೀಡಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.