ETV Bharat / bharat

ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ ರಾಷ್ಟ್ರ ಪ್ರಶಸ್ತಿ ವಿಜೇತ ಪರೇಶ್​ ರಾವಲ್ ನೇಮಕ! - ರಾಷ್ಟ್ರ ಪ್ರಶಸ್ತಿ ವಿಜೇತ ಪರೇಶ್​ ರಾವಲ್ ನೇಮಕ

30ಕ್ಕೂ ಹೆಚ್ಚು ವರ್ಷಗಳ ಕಾಲ ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿರುವ ನಟ ಪರೇಶ್​ ರಾವಲ್​ ಇದೀಗ ನ್ಯಾಷನಲ್​ ಸ್ಕೂಲ್​ ಆಫ್​ ಡ್ರಾಮಾ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Paresh Rawal
Paresh Rawal
author img

By

Published : Sep 10, 2020, 6:11 PM IST

ಮುಂಬೈ: ಭಾರತೀಯ ಜನತಾ ಪಕ್ಷದ ಮಾಜಿ ಸಂಸದ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಪರೇಶ್​ ರಾವಲ್​​ ನ್ಯಾಷನಲ್​​​ ಸ್ಕೂಲ್​ ಆಫ್​ ಡ್ರಾಮಾ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. 2017ರಿಂದಲೂ ಖಾಲಿಯಾಗಿದ್ದ ಹುದ್ದೆಗೆ ಇದೀಗ ರಾಷ್ಟ್ರಪತಿ ರಾಮನಾಥ್​ ಕೋವಿಂದ್​​ ಪರೇಶ್​ ರಾವಲ್​​ ಅವರನ್ನ ಆಯ್ಕೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್​ ಮಾಡಿ ಮಾಹಿತಿ ನೀಡಿದ್ದಾರೆ. 65 ವರ್ಷದ ಪರೇಶ್​ ರಾವಲ್​ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ಭಾರತೀಯ ಚಿತ್ರರಂಗದಲ್ಲಿ ಸೇವೆ ಸಲ್ಲಿಸಿದ್ದು, ಹತ್ತಾರು ಪ್ರಶಸ್ತಿ ಗೆದ್ದಿದ್ದಾರೆ. 2014ರಲ್ಲಿ ಇವರಿಗೆ ಪದ್ಮಶ್ರೀ ಪ್ರಶಸ್ತಿ ಸಹ ನೀಡಲಾಗಿದೆ.

2014ರಲ್ಲಿ ಅಹಮದಾಬಾದ್​ ಪೂರ್ವದಿಂದ ಬಿಜೆಪಿ ಟಿಕೆಟ್​ ಪಡೆದುಕೊಂಡು ಲೋಕಸಭೆಗೆ ಆಯ್ಕೆಯಾಗಿದ್ದರು. ಆದರೆ 2019ರಲ್ಲಿ ಅವರು ಚುನಾವಣೆಗೆ ಸ್ಪರ್ಧೆ ಮಾಡಿರಲಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.