ನವದೆಹಲಿ: ಒಂದೇ ಕುಟುಂಬದ ಐವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ಈ ದುರಂತಕ್ಕೆ ಕಾರಣ ತಿಳಿದುಬಂದಿದೆ.
ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಒಂದೇ ಕುಟುಂಬದ ಐವರನ್ನು ವ್ಯಕ್ತಿಯೋರ್ವ ಹತ್ಯೆ ಮಾಡಿದ್ದಾನೆ. ದೆಹಲಿಯ ಭಜನ್‌ಪುರದಲ್ಲಿಈ ಘಟನೆ ಜರುಗಿತ್ತು ಹಣದ ವಿಷಯಕ್ಕೆ ಸಂಬಂಧಿಸಿಂತೆ ಜಗಳವಾಗಿ ಕೋಪಗೊಂಡ ವ್ಯಕ್ತಿ ಕಬ್ಬಿಣದ ರಾಡ್ನಿಂದ ಐವರನ್ನೂ ಹೊಡೆದು ಕೊಂದಿದ್ದಾನೆ ಎಂದು ತಿಳಿದುಬಂದಿದೆ.
ಹೆಚ್ಚಿನ ಮಾಹಿತಿಗಾಗಿ: ಒಂದೇ ಕುಟುಂಬದ ಐವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ: ಇಷ್ಟಕ್ಕೂ ಇಲ್ಲಿ ನಡೆದಿದ್ದೇನು?
ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಆರೋಪಿಯು 28 ವರ್ಷದವನಾಗಿದ್ದು,ಆತನನ್ನ ಬಂಧಿಸಲಾಗಿದೆ. ಹೆಚ್ಚಿನ ತನಿಖೆಗೆ ಆರೋಪಿಯನ್ನ ಒಳಪಡಿಸಲಾಗಿದೆ ಎಂದಿದ್ದಾರೆ.