ETV Bharat / bharat

2 ಸಾರಿಗೆ ಬಸ್​ಗಳ ನಡುವೆ ಮುಖಾಮುಖಿ ಡಿಕ್ಕಿ: ಆರು ಸಾವು, ಹಲವರಿಗೆ ಗಾಯ - ಲಖನೌ ಬಳಿ ಬಸ್​ ಅಪಘಾತ

ಬಸ್​ಗಳು ವಿರುದ್ಧ ದಿಕ್ಕಿನಲ್ಲಿ ಬಂದು ಪರಸ್ಪರ ಡಿಕ್ಕಿ ಹೊಡೆದಿದೆ. ಒಂದು ಬಸ್​ ಹಾರ್ಡೊಯ್‌ನಿಂದ ಲಖನೌಗೆ ಮತ್ತು ಇನ್ನೊಂದು ಬಸ್ ರಾಜ್ಯ ರಾಜಧಾನಿಯಿಂದ ಹಾರ್ಡೊಯ್‌ಗೆ ಹೊರಟಿತ್ತು. ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂದು ಮೇಲ್ನೋಟಕ್ಕೆ ತಿಳಿದು ಬಂದಿದೆ

Accident between UP  Roadways buses
ಅಪಘಾತಕ್ಕೊಳಗಾದ ಬಸ್​
author img

By

Published : Aug 26, 2020, 11:18 AM IST

ಲಖನೌ (ಉತ್ತರ ಪ್ರದೇಶ) : ಲಖನೌ - ಹಾರ್ಡೊಯ್ ರಸ್ತೆಯಲ್ಲಿ ಉತ್ತರ ಪ್ರದೇಶ ಸಾರಿಗೆ ಸಂಸ್ಥೆಯ ಎರಡು ಬಸ್‌ಗಳ ನಡುವೆ ಅಪಘಾತ ಸಂಭವಿಸಿ ಆರು ಮಂದಿ ಮೃತಪಟ್ಟಿದ್ದು, 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಕುರಿತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿಷಾದ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸರಿಯಾದ ಚಿಕಿತ್ಸೆ ನೀಡಲು ಆದೇಶಿಸಿದ್ದಾರೆ. ಮೂವರು ಸದಸ್ಯರ ಸಮಿತಿಯನ್ನು ರಚಿಸಿರುವ ಹೆದ್ದಾರಿ ಪ್ರಾಧಿಕಾರ ಘಟನೆಯ ಕುರಿತು ತನಿಖೆ ಮಾಡಿ 24 ಗಂಟೆಯೊಳಗೆ ವರದಿ ನೀಡುವಂತೆ ಸೂಚಿಸಿದೆ.

ಅಪಘಾತಕ್ಕೊಳಗಾದ ಬಸ್​

ಬಸ್​ಗಳು ವಿರುದ್ಧ ದಿಕ್ಕಿನಲ್ಲಿ ಬಂದು ಪರಸ್ಪರ ಡಿಕ್ಕಿ ಹೊಡೆದಿದೆ. ಒಂದು ಬಸ್​ ಹಾರ್ಡೊಯ್‌ನಿಂದ ಲಖನೌಗೆ ಮತ್ತು ಇನ್ನೊಂದು ಬಸ್ ರಾಜ್ಯ ರಾಜಧಾನಿಯಿಂದ ಹಾರ್ಡೊಯ್‌ಗೆ ಹೊರಟಿತ್ತು. ಅತಿ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತಲುಪಿದ ಪೊಲೀಸರು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತರ ಬಗ್ಗೆ ಇನ್ನೂ ಮಾಹಿತಿ ತಿಳಿದು ಬಂದಿಲ್ಲ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.