ETV Bharat / bharat

ಲಿಂಗ ಪತ್ತೆಗೆ ಪತ್ನಿ ಹೊಟ್ಟೆ ಸೀಳಿದ್ದ ಪತಿ: ಆಸ್ಪತ್ರೆಯಲ್ಲಿ ಮೃತ ಶಿಶುವಿಗೆ ಜನ್ಮ - ಗರ್ಭಿಣಿ ಪತ್ನಿ ಹೊಟ್ಟೆ ಸೀಳಿದ್ದ ಪತಿರಾಯ

ಆಘಾತಕಾರಿ ಘಟನೆಯೊಂದರಲ್ಲಿ ತನಗೆ ಹುಟ್ಟಲಿರುವ ಮಗುವಿನ ಲಿಂಗ ತಿಳಿಯಲು ಪತ್ನಿಯ ಹೊಟ್ಟೆ ಸೀಳಿದ್ದ ಘಟನೆ ನಡೆದಿತ್ತು.

budaun man cuts stomach of wife
budaun man cuts stomach of wife
author img

By

Published : Sep 22, 2020, 5:32 PM IST

ಲಖನೌ(ಉತ್ತರ ಪ್ರದೇಶ): ತನಗೆ ಹುಟ್ಟುವ ಮಗುವಿನ ಲಿಂಗ ತಿಳಿದುಕೊಳ್ಳುವ ಉದ್ದೇಶದಿಂದ ಕ್ರೂರಿ ಪತಿ ತನ್ನ ಪತ್ನಿಯ ಹೊಟ್ಟೆ ಸೀಳಿರುವ ಘಟನೆ ಉತ್ತರ ಪ್ರದೇಶದ ಬುದಾನ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಕಳೆದ ಎರಡು ದಿನಗಳ ಹಿಂದೆ ನಡೆದಿತ್ತು. ಇದೀಗ ಮಹಿಳೆ ಆಸ್ಪತ್ರೆಯಲ್ಲಿ ಮೃತ ಶಿಶುವಿಗೆ ಜನ್ಮ ನೀಡಿದ್ದು, ಆಕೆಯ ಸ್ಥಿತಿ ಗಂಭೀರವಾಗಿದೆ.

budaun man cuts stomach of wife
ಪನ್ನಾ ಲಾಲ್​ ಎಂಬ ವ್ಯಕ್ತಿಗೆ ಐವರು ಹೆಣ್ಣು ಮಕ್ಕಳು

ಹುಟ್ಟುವ ಮಗುವಿನ ಲಿಂಗ ತಿಳಿಯಲು ಗರ್ಭಿಣಿ ಪತ್ನಿ ಹೊಟ್ಟೆ ಸೀಳಿದ ಪತಿರಾಯ

ಮಹಿಳೆ ಸ್ಥಿತಿ ಗಂಭೀರವಾಗಿದ್ದರಿಂದ ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ಮೃತ ಶಿಶುವಿಗೆ ಜನ್ಮ ನೀಡಿದ್ದು, ಆಕೆಯ ಸ್ಥಿತಿ ಮತ್ತಷ್ಟು ಉಲ್ಬಣಗೊಂಡಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಆರೋಪಿಯನ್ನ ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ!

ಪನ್ನಾ ಲಾಲ್​ ಎಂಬ ವ್ಯಕ್ತಿ ಈಗಾಗಲೇ ಐವರು ಹೆಣ್ಣು ಮಕ್ಕಳ ತಂದೆಯಾಗಿದ್ದು, ಸದ್ಯ ಹುಟ್ಟುವ ಮಗು ಗಂಡಾಗಿರಬೇಕೆಂದು ಬಯಸಿದ್ದನು. ಹೀಗಾಗಿ ತನಗೆ ಹುಟ್ಟಲಿರುವ 6ನೇ ಮಗುವಿನ ಲಿಂಗ ತಿಳಿದುಕೊಳ್ಳುವ ಉದ್ದೇಶದಿಂದ ಪತ್ನಿಯ ಹೊಟ್ಟೆ ಸೀಳಿದ್ದರು. ಘಟನೆಯಿಂದ ಮಹಿಳೆ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ಚಿಕಿತ್ಸೆಗೋಸ್ಕರ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮೂರು ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.