ETV Bharat / bharat

24 ಗಂಟೆಗಳಲ್ಲಿ 2 ಮದುವೆಯಾದ ಯುವತಿ.. ಇದು ಪ್ರೀತಿಗೆ ಸಿಕ್ಕ ಜಯ!!

author img

By

Published : Jun 14, 2020, 7:26 PM IST

Updated : Jun 14, 2020, 8:21 PM IST

ಜೂನ್​ 12 ರಂದು ಪೊಷಕರು ನೋಡಿದ್ದ ಯುವಕನನ್ನು ವಿವಾಹವಾಗಿದ್ದ ಯುವತಿ ಅದೇ ಪೋಷಕರಿಂದ ನಡೆದ ಮದುವೆಯನ್ನು ರದ್ದು ಮಾಡಿಸಿ ಪ್ರೀತಿಸಿದವನ ಕೈ ಹಿಡಿದಿದ್ದಾಳೆ.

A woman got another marriage within 24 hours
24 ಗಂಟೆಗಳಲ್ಲಿ 2 ಮದುವೆಯಾದ ಯುವತಿ

ನಲ್ಗೊಂಡ(ತೆಲಂಗಾಣ): 24 ಗಂಟೆಗಳ ಒಳಗಾಗಿಯೇ ಯುವತಿಯೊಬ್ಬಳು ಎರಡು ಮದುವೆಯಾದ ವಿಚಿತ್ರ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕನಗಲ್​ ಪ್ರಾಂತ್ಯದಲ್ಲಿ ನಡೆದಿದೆ.

ಕನಗಲ್ ಪ್ರಾಂತ್ಯದ ಶಾಬ್ದುಲ್ಲಾಪುರ ಗ್ರಾಮದಲ್ಲಿ ಮೋನಿಕಾ ಎಂಬ ಯುವತಿ ಜೂನ್​ 12ರಂದು ಪೋಷಕರು ನೋಡಿದ ಯುವಕನೊಂದಿಗೆ ವಿವಾಹವಾದಳು. ಅದೇ ಸಮಯಕ್ಕೆ ಆಕೆ ಪ್ರೀತಿಸುತ್ತಿದ್ದ ಯುವಕ ರಾಜೇಶ್ ಮದುವೆ ಮನೆಗೆ ಎಂಟ್ರಿ ಕೊಟ್ಟಿದ್ದಾನೆ.

ರಾಜೇಶ್, ಮೋನಿಕಾಳ ಸಂಬಂಧಿಯಾಗಿದ್ದ. ಕಳೆದ ಕೆಲ ವರ್ಷಗಳಿಂದ ಈ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದು. ಆದರೆ, ತಮ್ಮ ಪ್ರೀತಿಯ ವಿಷಯವನ್ನು ಪೋಷಕರಿಗೆ ತಿಳಿಸಲು ಮೋನಿಕಾ ಭಯಪಡುತ್ತಿದ್ದಳು. ಹೀಗಾಗಿ ಪೋಷಕರು ನೋಡಿದ ಯುವಕನೊಂದಿಗೆ ಮದುವೆಯಾಗಲು ಒಪ್ಪಿಗೆ ಸೂಚಿಸಿದ್ದಳು. ಆದರೆ, ವಿವಾಹ ಸ್ಥಳಕ್ಕೆ ಎಂಟ್ರಿ ಕೊಟ್ಟ ರಾಜೇಶ್, ತಮ್ಮ ಪ್ರೀತಿಯ ವಿಷಯ ಬಹಿರಂಗ ಪಡಿಸಿದ್ದಾನೆ.

ಈ ವೇಳೆ ಮದುವೆ ಮನೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಮತ್ತು ಕೆಲವು ಹಿರಿಯರು ಕುಳಿತು ಚರ್ಚೆ ನಡೆಸಿ, ಮದುವೆಯನ್ನು ರದ್ದು ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ಮರು ದಿನವೇ ಪೋಷಕರೆಲ್ಲ ಸೇರಿ ರಾಜೇಶ್ ಮತ್ತು ಮೋನಿಕಾಳ ವಿವಾಹ ನಡೆಸಿದ್ದಾರೆ.

Last Updated : Jun 14, 2020, 8:21 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.