ETV Bharat / bharat

ವಿಶೇಷ ಅಂಕಣ: ನಮ್ಮ ಕಾಲಕ್ಕೆ ಒಪ್ಪುವ 'ಎ ಸೂಟಬಲ್ ಬಾಯ್'..!

author img

By

Published : Aug 16, 2020, 5:29 PM IST

1993ರಲ್ಲಿ ವಿಕ್ರಮ್ ಸೇಥ್ ಬರೆದಿದ್ದ ಮಹಾ ಕಾದಂಬರಿ “ಎ ಸೂಟಬಲ್‌ ಬಾಯ್’ ಸ್ವಾತಂತ್ರ್ಯ ಬಂದ ನಂತರದ, ಒಂದೆರಡು ವರ್ಷಗಳಲ್ಲಿ ಜರುಗುವ ಇಂತಹ ಸಂಗತಿಗಳನ್ನು ಬಿಂಬಿಸುತ್ತದೆ.

A Suitable Boy is suitable for our times
ನಮ್ಮ ಕಾಲಕ್ಕೆ ಒಪ್ಪುವ ಎ ಸೂಟಬಲ್ ಬಾಯ್

ಹೈದರಾಬಾದ್: ಒಬ್ಬ ಅಲ್ವಾವಧಿಯ ರಾಜನಿಂದ ಕಟ್ಟಲ್ಪಟ್ಟಿದ್ದ ಮಸೀದಿಯ ಪಕ್ಕದಲ್ಲಿ ಮಂದಿರವೊಂದನ್ನು ನಿರ್ಮಿಸಲಾಗಿರುತ್ತದೆ. ಇದು ಗಲಭೆಗೆ ಕಾರಣವಾಗಿ ಪ್ರತಿಭಟನೆಗೆ ಮುಂದಾದ ಮುಸ್ಲಿಮರು ಗಂಡೇಟಿಗೆ ಬಲಿಯಾಗುತ್ತಾರೆ. ತನ್ನ ಮಗಳು ಕಾಲೇಜಿನಲ್ಲಿ “ಹಿಂಸಾತ್ಮಕ, ಕ್ರೂರಿಯಾದ ಮತ್ತು ದುರಾಸೆ ಪೀಡಿತ” ಸಮುದಾಯವೊಂದಕ್ಕೆ ಸೇರಿದ ಹುಡುಗನನ್ನು ಭೇಟಿಯಾಗುತ್ತಿರುವುದನ್ನು ತಿಳಿದು ಆಘಾತಕ್ಕೊಳಗಾಗಿದ್ದಾಳೆ.

ಹಾಗೆಯೇ ಕಲ್ಕತ್ತಾ ನಮೂನೆಯ ಅದರಲ್ಲೂ ವಿಶೇಷವಾಗಿ ಮಹಿಳೆಯರನ್ನ “ಬಿನ್ನಾಣದವರು ಮತ್ತು ನಂಬಿಕೆಗೆ ಅರ್ಹರಲ್ಲದವರು” ಎಂದೇ ಕರೆಯಲಾಗುತ್ತದೆ, ಒಬ್ಬಾಕೆ ತನ್ನ ತಾಯಿ ತನಗೆ ಉಡುಗೊರೆಯಾಗಿ ನೀಡಿದ್ದ ಚಿನ್ನದ ಪದಕಗಳನ್ನು ಕರಗಿಸಿ ತನಗಾಗಿ ಬಾಣದ ಆಕೃತಿಯ ಕವಿಯೋಲೆಗಳನ್ನು ಮಾಡಿಸಿಕೊಂಡ ಕಾರಣಕ್ಕೆ ಅವಳನ್ನು ಹಾಗೆಂದು ಕರೆಯಲಾಗುತ್ತದೆ.

ಒಮ್ಮೆ ಸುತ್ತಮುತ್ತಲಿನ ಸಂಗತಿಗಳನ್ನು ಗಮನಿಸಿ, 1993ರಲ್ಲಿ ವಿಕ್ರಮ್ ಸೇಥ್ ಬರೆದಿದ್ದ ಮಹಾ ಕಾದಂಬರಿ “ಎ ಸೂಟಬಲ್‌ ಬಾಯ್’ ಸ್ವಾತಂತ್ರ್ಯ ಬಂದ ನಂತರದ ಒಂದೆರಡು ವರ್ಷಗಳಲ್ಲಿ ಜರುಗುವ ಇಂತಹ ಸಂಗತಿಗಳನ್ನು ಬಿಂಬಿಸುತ್ತದೆ. ಆ ಕಾದಂಬರಿಯ ದೃಶ್ಯಗಳಿಗೂ ಇಂದು ಕಾಣುವ ಸನ್ನಿವೇಶಗಳಿಗೂ ಹೆಚ್ಚಿನ ವ್ಯತ್ಯಾಸವೆನಿಸುವುದಿಲ್ಲ. ಇದೀಗ ಈ ಮಹಾ ಕಾದಂಬರಿಯನ್ನು ಮೀರಾ ನಾಯರ್ ಅವರು BBC One ಗಾಗಿ ಆರು ಭಾಗಗಳ ಕಿರು ಚಿತ್ರಸರಣಿಯಾಗಿಸಿದ್ದಾರೆ.

ಮಸೀದಿಯೊಂದರ ಅಳಿದುಳಿದ ಗುರುತುಗಳ ಮೇಲೆ ಈಗಷ್ಟೇ ಭೂಮಿ ಪೂಜೆ ನಡೆಸಿದ್ದೇವೆ. ಬೇರೆ ಬೇರೆ ಧಾರ್ಮಿಕ ಸಮುದಾಯಗಳ ನಡುವಿನ ಸಂಬಂಧಗಳು ಈಗಲೂ ಅಪನಂಬಿಕೆ, ಆತಂಕಗಳಿಂದಲೇ ಕೂಡಿವೆ. ನಾವು ಬಂಗಾಳಿ ಮಹಿಳೆಯರ ಬಗ್ಗೆ ಯಾವ ರೀತಿಯಲ್ಲಿ ಅನುಮಾನಿಸಲಾಗುತ್ತದೆ ಎಂಬುದನ್ನು ನೆನಪಿಸಿಕೊಳ್ಳಬೇಕೆಂದರೆ ರಿಯಾ ಚಕ್ರವರ್ತಿ ಅವರ ಸುತ್ತ ಸಾಮಾಜಿಕ ಮಾಧ್ಯಮದಲ್ಲಿ ಕೇಳಿ ಬಂದ ಗುಸುಗುಸು ಮಾತುಗಳನ್ನು ನೆನಪಿಸಿಕೊಳ್ಳಬೇಕು.

ಇಂತಹ ಒಂದು ಎಳೆಯನ್ನು ಇಟ್ಟುಕೊಂಡಿರುವ ನಾಯರ್ ಅವರ ‘ಎ ಸೂಟಬಲ್ ಬಾಯ್‌’ ಮೀನಾಕ್ಷಿ ಚಟರ್ಜಿ ಮೆಹ್ತಾರನ್ನ ಮಹಾನ್ ಗ್ಲಾಮರಸ್‌ ಅಗಿ ಚಿತ್ರಿಸಿ, ಟಾಲಿಗಂಜ್ ಕ್ಲಬ್‌ನಲ್ಲಿ ನರ್ತಿಸುವ ಟ್ಯಾಂಗೋ ಆಗಿಯೂ, ಹಾಗೆಯೇ ಉಗುರುಗಳಿಗೆ ಬಣ್ಣ ಹಚ್ಚಿಕೊಳ್ಳುವುದನ್ನು ಚಿತ್ರಿಸುವುದು ಮನರಂಜಕವಾಗಿದೆ. ಇಂತಹ ಮುದ್ದು ಹುಡುಗಿಯನ್ನ ಬಿಲ್ಲಿ ಇರಾನಿ ಎಂಬಾತ ಇಷ್ಟಪಡುತ್ತಾನೆ ಆದರೆ, ಈತನ ಹೆಸರು ಮಹಿಳೆಯರ ಬಗ್ಗೆ ಗೌರವವೇ ಇಲ್ಲದ ಶ್ರೀಮಂತ ವ್ಯಕ್ತಿಯೊಬ್ಬನಿಗೆ ಸೂಕ್ತವಾಗಿರುವಂತದು.

ಬಿಬಿಸಿ ಒನ್‌ಗಾಗಿ ‘ಎ ಸೂಟಬಲ್ ಬಾಯ್‌’ ಕತೆಯನ್ನು ಆಂಡ್ರ್ಯೂ ಡೇವೀಸ್‌ ಮರುಸೃಷ್ಟಿಸುವಾಗ ಲೇಖಕ ಯಾವ ಜೇನ್ ಆಸ್ಟಿನ್ ಬಗ್ಗೆ ತೀವ್ರ ಸೆಳೆತ ಹೊಂದಿದ್ದರೋ, ಅವಳಿಗೆ ತಕ್ಕಂತೆಯೇ ಸೃಷ್ಟಿಸಿದ್ದಾರೆ. ಇದು ಆಶ್ಚರ್ಯದ ಸಂಗತಿಯೇನಲ್ಲ. ಲತಾಳಿಗಾಗಿ ಸೂಕ್ತ ಗಂಡು ಗಂಡೊಂದನ್ನು ಆರಿಸುವ ಸನ್ನಾಹದಲ್ಲಿರುವ ಆಕೆಯ ಅಮ್ಮ ರೂಪ ಮೆಹ್ರಾಳು ಜೇನ್ ಆಸ್ಟಿನ್ ಕಾದಂಬರಿಯ ಮಿಸಸ್ ಬೆನ್ನೆಟ್‌ಳ ಪ್ರತಿರೂಪವೇ ಎನ್ನಬಹುದು.

ಬೆನ್ನೆಟ್‌ಗೂ ಅಷ್ಟೇ, ತಾನು ತನ್ನ ಮಗಳ ಮದುವೆಯನ್ನು ಚನ್ನಾಗಿ ನೆರವೇರಿಸಬೇಕು ಎಂಬ ಹಂಬಲವಿರುತ್ತದೆ. ಇಂತಹ ಒಂದು ದೊಡ್ಡ ಕಾದಂಬರಿಯನ್ನು ಚಿತ್ರ ಸರಣಿಯಾಗಿ ನಿರ್ಮಿಸುವಾಗ ನಾಯರ್‌ ಅನೇಕ ಸಂಗತಿಗಳನ್ನು ವಿವರವಾಗಿ ತೋರಿಸಲು ಆಗುವುದಿಲ್ಲ, ಆದರೆ ಸಮಕಾಲೀನ ವಿಷಯಗಳಿಗೆ ಸ್ಪಂದಿಸುವ ದೃಶ್ಯಗಳ ಬಗ್ಗೆ ಮಾತ್ರ ಬಿಡದೇ ಅತೀವ ಗಮನ ನೀಡಿದ್ದಾರೆನ್ನಬಹುದು.

ಕ್ರಾಂತಿಕಾರಿ ಜಮೀನ್ದಾರಿ ವ್ಯವಸ್ಥೆ ನಿರ್ಮೂಲನಾ ಕಾಯ್ದೆಯನ್ನು ಮುನ್ನಡೆಸುವ ಕಂದಾಯ ಮಂತ್ರಿ ಮಹೇಶ್ ಕಪೂರ್‌ ಸ್ನೇಹಿತ, ಸ್ಥಳೀಯ ಭೂಮಾಲಿಕ ನವಾಬ್ ಸಾಹೇಬ್‌ ತನ್ನ ಸಂಬಂಧಿಕರೆಲ್ಲಾ ಭಾರತ ತೊರೆಯಲು ತೀರ್ಮಾನಿಸುವಾಗ ತಾನು ಭಾರತದಲ್ಲೇ ಉಳಿದುಕೊಳ್ಳಲು ತೀರ್ಮಾನಿಸುವ ಚಿತ್ರಣದೊಂದಿಗೆ "ಮುಸ್ಲಿಂ ಪ್ರಶ್ನೆ” ಯನ್ನು ಬಿಂಬಿಸಲಾಗಿದೆ.

ತನ್ನ ಮದುವೆಯ ನಂತರ ತಾನು ಕಲಿತಿದ್ದು ವ್ಯರ್ಥವಾಗದಂತೆ ಪಾಠ ಹೇಳಿಕೊಡಲು ಕಾತುರಳಾದ ಲತಾಳ ಮೂಲಕ ಮಹಿಳಾ ಸಬಲೀಕರಣದ ವಿಷಯವನ್ನು ಬಿಂಬಿಸಲಾಗಿದೆ. ಹಾಗೆಯೇ, ಲತಾಳ ಅಣ್ಣ ಕಲ್ಕತ್ತಾದಲ್ಲಿ ಸಣ್ಣ ವ್ಯಾಪಾರಿಯಾಗಿದ್ದು “ಹಿಂದಿ” ನಮೂನೆಯಲ್ಲಿ ಮಾತಾಡುವವರನ್ನು ನಿರಾಕರಿಸಿ ತನ್ನ ನುಡಿಯನ್ನು ಬಳಸುವುದರಲ್ಲಿ ಭಾಷೆಯ ಪ್ರಶ್ನೆಯನ್ನು ತರಲಾಗಿದೆ.

ನರೇಂದ್ರ ಮೋದಿಯವರ ಭಾರತದಲ್ಲಿ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಮತ್ತು ಐದನೇ ತರಗತಿಯವರೆಗೆ ತಾಯ್ನುಡಿಯನ್ನು ಕಲಿಕಾ ಮಾಧ್ಯಮವಾಗಿ ಬಳಸಬೇಕೆಂಬ ಅದರ ಪ್ರತಿಪಾದನೆಯನ್ನು, ಅದರ ಟೀಕಾಕಾರರು ಎಲೀಟಿಸ್ಟುಗಳುಗಳೆಂಬ ಹಣೆಪಟ್ಟಿ ಕಟ್ಟಿಕೊಳ್ಳಬೇಕಾದ ಸಂದರ್ಭವನ್ನು ಮತ್ತು ಇಂಗ್ಲಿಷನ್ನು ಮಗದೊಮ್ಮೆ ಒಂದು ಸಮಸ್ಯೆಯಾಗಿ ಮಾಡಲಾಗುತ್ತಿರುವುದನ್ನು ನೋಡುತ್ತಿದ್ದೇವೆ.

ಇದರೊಂದಿಗೆ ಪಠ್ಯಕ್ರಮ ಬದಲಾವಣೆಯ ಕುರಿತು ಸಹ ಹೋರಾಟಗಳಾಗುತ್ತಿವೆ, ಈ ಕಾದಂಬರಿ ಆಧಾರಿತ ಚಿತ್ರ ಸರಣಿಯಲ್ಲಿ ಜೇಮ್ಸ್ ಜಾಯ್ಸ್‌ನನ್ನು ಯುವಕರಿಗೆ ತಕ್ಕಂತಹ ಬರಹಗಾರ ಅಲ್ಲ ಎಂದು ಸಂಸ್ಥೆಗಳ ಶಿಕ್ಷಕರು ಪರಿಗಣಿಸಿದ್ದಂತಹ ಸ್ನಾತಕ ಪೂರ್ವ ಇಂಗ್ಲಿಷ್ ತರಗತಿಯ ಸ್ಥಳೀಯ ಬ್ರಹ್ಮಪುರ್ ವಿಶ್ವವಿದ್ಯಾಲಯದಲ್ಲಿ ಅಂತಹುದೇ ಹೋರಾಟ ನಡೆಯುತ್ತದೆ.

‘ಎ ಸೂಟಬಲ್ ಬಾಯ್’ ನಲ್ಲಿ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಿರುವ ರಸಿಕಾ ದುಗಲ್ ಅವರಿಗೆ ನಾನು ಇಂದು ಈ ಚಿತ್ರ ಸರಣಿಯ ಜರೂರತ್ತಿನ ಬಗ್ಗೆ ಕೇಳಲಾಗಿ ಅವರು ಅದು ಹಿಂದೆಂದಿಗಿಂತ ಹೆಚ್ಚು ಪ್ರಸ್ತುತತೆ ಹೊಂದಿರುವುದಾಗಿ ಹೇಳಿದರು. ‘ಸಮಾಜ ಇಷ್ಟೊಂದು ಧ್ರುವೀಕರಣ ಹೊಂದಿದ್ದನ್ನು ನನ್ನ ಜೀವನಾವಧಿಯಲ್ಲೇ ಕಂಡಿರಲಿಲ್ಲ, ಇದು ಒಂದು ರೀತಿ ಭೀತಿ ಹುಟ್ಟಿಸುವಂತಿದೆ. ಮಾತುಕತೆಗಳೇ ಮುರಿದು ಬೀಳುವಾಗ ಒಬ್ಬರು ಮತ್ತೊಬ್ಬರಿಂದ ಕಲಿಯುವುದಕ್ಕೆ ಏನೂ ಇರುವುದಿಲ್ಲ” ಎಂದರವರು.

ಸಮಾಜದಲ್ಲಿ ಆಳವಾದ ಬಿರುಕುಗಳು ಮೂಡಿ ಇಂದಿಗೂ ಮುಂದುವರೆದಿವೆ. ಜಮೀನುದಾರನ ಹೊಲದಲ್ಲಿ ನೀರು ಹಾಯಿಸುವ ಕೂಲಿಯಾಳು ಕುಚೆರ್ರು ಮತ್ತು ಜಸ್ಟೀಸ್ ಚಟರ್ಜಿಯವರ ಚಹ ಎಂದರೆ ಗಲಾಸು ತಂಪು ಶಾಂಪೇನ್ , ಆಥವಾ ಅಥವಾ “ಚಟರ್ಜೀ ಸಹ” ಎಂದು ಇಂಗ್ಲೆಂಡಿನಿಂದ ಮರಳಿರುವ ಭಯಂಕರ ಚಾಣಾಕ್ಷ ಕವಿಯಾದ ಮಗ ಬಣ್ಣಿಸುವ ಪರಿಯನ್ನು ನೋಡಬಹುದು.

ಹರೇಶ್ ಖನ್ನಾ ಪಾತ್ರದಲ್ಲಿ ಕಲಿತ ಪದವಿಗಿಂತಲೂ ಮೈಗೂಡಿಸಿಕೊಂಡ ಕುಶಲತೆಯನ್ನು ಆಧರಿಸಿದ ಹೊಸ ವೃತ್ತಿ ಮುನ್ನೆಲೆಗೆ ಬರುವ ಸನ್ನಿವೇಶವಿದೆ, ಇದು ಸ್ವತಃ ವಿಕ್ರಂ ಸೇಥ್ ಅವರ ಬೂಟು ತಯಾರಿಸುವ ತಂದೆಯಿಂದ ಸ್ಪೂರ್ತಿ ಪಡೆದಿರುವಂತದ್ದು. ಒಂದು ವೃತ್ತಿಗೂ ಮತ್ತು ವ್ಯಾಪಾರಕ್ಕೂ ನಡುವೆ ವ್ಯತ್ಯಾಸವಿದೆ ಎಂದು ಲತಾಳ ಅಣ್ಣ ಹೇಳುವುದು ಮತ್ತು ಅದು ನಮ್ಮ ಸಮಾಜದಲ್ಲಿ ಎಂದೆಂದಿಗೂ ಬೆರೆತುಕೊಂಡಿರುವ ಸಂಗತಿಯೇ ಆಗಿದೆ.

ಕುಂಭ ಮೇಳದ ಕಾಲ್ತುಳಿತಗಳು, ಕಿತ್ತು ತಿನ್ನುವ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಬೆಳ್ಳಂಬೆಳಿಗ್ಗೆ ದೋಣಿ ವಿಹಾರಕ್ಕೆ ಹೋಗುವುದು, ಸ್ವಘೋಷಿತ ದೇವಮಾನವರ ಸುತ್ತಲಿರುವ ಮೂಢನಂಬಿಕೆಗಳು, ಇಲ್ಲಿ ರಾಮ್‌ಜಪ್‌ ಬಾಬಾ ಮತ್ತು ವಯಸ್ಸಿಗೆ ಸಹಜವಲ್ಲದ ರೊಮ್ಯಾನ್ಸ್‌ಗಳ ಬಗ್ಗೆ ಎಲ್ಲರೂ ಆಡಿಕೊಳ್ಳುವಂತಾಗುವುದು. ಭಾರತಕ್ಕೆ ಸ್ವಾತಂತ್ರ್ಯ ಬಂದ 70 ವರ್ಷಗಳ ನಂತರವೂ ಕಾದಂಬರಿಯಲ್ಲಿ ಕಾಣುವ ಸಂಗತಿಗಳಿಗಿಂತ ಹೆಚ್ಚೇನೂ ಬದಲಾವಣೆಗಳು ಕಾಣುವುದಿಲ್ಲ.

- ಕಾವೇರಿ ಬಾಮ್ಜಾಯ್, ಹಿರಿಯ ಪತ್ರಕರ್ತರು, ಇಂಡಿಯಾ ಟುಡೆ ಮಾಜಿ ಸಂಪಾದಕರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.