ETV Bharat / bharat

ರಾಜಧಾನಿಯಲ್ಲಿ ಕೈ-ಆಪ್​ ಮೈತ್ರಿ ಗೊಂದಲ: ಕೃಷ್ಣ ಸಂಧಾನಕ್ಕೆ ಪವಾರ್ ಎಂಟ್ರಿ​ - ಶರದ್​ ಪವಾರ್ ಮಧ್ಯಸ್ಥಿಕೆ

ನವದೆಹಲಿಯಲ್ಲಿ ಕಾಂಗ್ರೆಸ್-ಆಪ್​ ಮೈತ್ರಿಗೆ ಶರದ್​ ಪವಾರ್​ ಮಧ್ಯಸ್ಥಿಕೆ ವಹಿಸಲಿದ್ದಾರೆ

ಕಾಂಗ್ರೆಸ್ ಆಪ್​ ನಡುವೆ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಸಂಧಾನ ನಡೆಸುತ್ತಿದ್ದಾರೆ
author img

By

Published : Mar 19, 2019, 8:47 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಆಮ್​ ಆದ್ಮಿ ಪಕ್ಷದೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್​ ಮುಂದಾಗಿದೆ. ಇದೀಗ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​ ಎರಡೂ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸಿ ಸಂಧಾನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಕಾಂಗ್ರೆಸ್​ - ಆಪ್​ ಮೈತ್ರಿಗೆ ದೆಹಲಿ ಕೈ ನಾಯಕರು ಹೈ ಕಮಾಂಡ್​ಗೆ ಮನವಿ ಮಾಡುತ್ತಿದ್ದಾರೆ. ಆದರೆ, ದೆಹಲಿ ಕಾಂಗ್ರೆಸ್​ ಅಧ್ಯಕ್ಷೆ ಶೀಲಾ ಧೀಕ್ಷಿತ್​ ಮಾತ್ರ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ. ಈ ಮಧ್ಯೆ ಮೈತ್ರಿ ಕುರಿತಾಗಿ ಕಾಂಗ್ರೆಸ್​ ಹೈಕಮಾಂಡ್​ ಯಾವುದೇ ನಿರ್ಧಾರ ಕೈಗೊಂಡರೂ ದೆಹಲಿ ನಾಯಕರು ಬದ್ಧರಾಗಿರಬೇಕು ಎಂದು ದೆಹಲಿ ಉಸ್ತುವಾರಿ ಪಿ.ಸಿ. ಚಾಕೋ ಸಹ ಹೇಳಿದ್ದಾರೆ.

ದೆಹಲಿಯ ನಾಯಕರಲ್ಲೇ ಉಂಟಾಗಿರುವ ಗೊಂದಲ ಬಗೆಹರಿಸಲು ಪವಾರ್​ ಶ್ರೀ ಕೃಷ್ಣನ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಲಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಪವಾರ್​ ಇಂದು ಬೆಳಗ್ಗೆ ಕಾಂಗ್ರೆಸ್​ ಹಾಗೂ ಆಪ್​ನೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ. ರಾಹುಲ್​ ಗಾಂಧಿ ಹಾಗೂ ಮಲ್ಲಿಕಾರ್ಜುನ ಖರ್ಗೆ ಜತೆ ಮಾತನಾಡಿರುವ ಪವಾರ್​, ಆಪ್​ನ ಸಂಜಯ್​ ಸಿಂಗ್​ರೊಂದಿಗೂ ಚರ್ಚೆ ನಡೆಸಿದ್ದಾರೆ.

ನವದೆಹಲಿಯಲ್ಲಿ ಬಿಜೆಪಿ ಪ್ರಾಬಲ್ಯವಿರುವ ಬಗ್ಗೆ ಕಾಂಗ್ರೆಸ್​ನ ಆಂತರಿಕ ಸಮೀಕ್ಷೆಯಲ್ಲಿ ತಿಳಿದು ಬಂದಾಗಿನಿಂದ ಕೈ ನಾಯಕರು ಆಪ್​ ಜತೆ ಮೈತ್ರಿಯ ಮನಸ್ಸು ಮಾಡಿದ್ದಾರೆ. ರಾಹುಲ್ ಗಾಂಧಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ದೆಹಲಿ ಉಸ್ತುವಾರಿ ಪಿ.ಸಿ. ಚಾಕೋ ಹೇಳಿದ್ದಾರೆ.

Intro:Body:

ರಾಜಧಾನಿಯಲ್ಲಿ ಕೈ-ಆಪ್​ ಮೈತ್ರಿ ಗೊಂದಲ: ಕೃಷ್ಣ ಸಂಧಾನಕ್ಕೆ ಪವಾರ್ ಎಂಟ್ರಿ​ 

A Sharad Pawar Cameo As Divided Congress Debates Tie-Up With AAP

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರ ಹಿಡಿಯಲು ಆಮ್​ ಆದ್ಮಿ ಪಕ್ಷದೊಂದಿಗೆ ಮತ್ತೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್​ ಮುಂದಾಗಿದೆ. ಇದೀಗ ಎನ್​ಸಿಪಿ ಮುಖ್ಯಸ್ಥ ಶರದ್​ ಪವಾರ್​  ಎರಡೂ ಪಕ್ಷಗಳ ನಡುವೆ  ಮಧ್ಯಸ್ಥಿಕೆ  ವಹಿಸಿ ಸಂಧಾನ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ. 

ಕಾಂಗ್ರೆಸ್​ - ಆಪ್​ ಮೈತ್ರಿಗೆ ದೆಹಲಿ  ಕೈ ನಾಯಕರು ಹೈ ಕಮಾಂಡ್​ಗೆ ಮನವಿ  ಮಾಡುತ್ತಿದ್ದಾರೆ. ಆದರೆ,  ದೆಹಲಿ ಕಾಂಗ್ರೆಸ್​ ಅಧ್ಯಕ್ಷೆ ಶೀಲಾ ಧೀಕ್ಷಿತ್​ ಮಾತ್ರ ಈ ಬಗ್ಗೆ ಅಪಸ್ವರ ಎತ್ತಿದ್ದಾರೆ.  ಈ ಮಧ್ಯೆ ಮೈತ್ರಿ ಕುರಿತಾಗಿ ಕಾಂಗ್ರೆಸ್​ ಹೈ ಕಮಾಂಡ್​ ಯಾವುದೇ ನಿರ್ಧಾರ ಕೈಗೊಂಡರೂ ದೆಹಲಿ ನಾಯಕರು ಬದ್ಧವಾಗಿರಬೇಕು ಎಂದು ದೆಹಲಿ ಉಸ್ತುವಾರಿ ಪಿ.ಸಿ. ಚಾಕೋ ಸಹ ಹೇಳಿದ್ದಾರೆ. 

ದೆಹಲಿಯ ನಾಯಕರಲ್ಲೇ ಉಂಟಾಗಿರುವ  ಗೊಂದಲ ಬಗೆಹರಿಸಲು ಪವಾರ್​ ಶ್ರೀ ಕೃಷ್ಣನ ಪಾತ್ರ ವಹಿಸುತ್ತಿದ್ದಾರೆ ಎಂದು  ಹೇಳಲಾಗ್ತಿದೆ. ಇದಕ್ಕೆ ಪೂರಕವೆಂಬಂತೆ ಪವಾರ್​ ಇಂದು ಬೆಳಗ್ಗೆ ಕಾಂಗ್ರೆಸ್​  ಹಾಗೂ ಆಪ್​ನೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ.   ರಾಹುಲ್​ ಗಾಂಧಿ  ಹಾಗೂ ಮಲ್ಲಿಕಾರ್ಜುನ ಖರ್ಗೆ ಜತೆ ಮಾತನಾಡಿರುವ ಪವಾರ್​, ಆಪ್​ನ ಸಂಜಯ್​ ಸಿಂಗ್​ರೊಂದಿಗೂ  ಚರ್ಚೆ ನಡೆಸಿದ್ದಾರೆ. 

ನವದೆಹಲಿಯಲ್ಲಿ ಬಿಜೆಪಿ ಪ್ರಾಬಲ್ಯವಿರುವ ಬಗ್ಗೆ ಕಾಂಗ್ರೆಸ್​ನ ಆಂತರಿಕ ಸಮೀಕ್ಷೆಯಲ್ಲಿ ತಿಳಿದು ಬಂದಾಗಿನಿಂದ ಕೈ ನಾಯಕರು ಆಪ್​ ಜತೆ ಮೈತ್ರಿಯ ಮನಸ್ಸು ಮಾಡಿದ್ದಾರೆ. ರಾಹುಲ್ ಗಾಂಧಿ ಇನ್ನು ಕೆಲವೇ ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ದೆಹಲಿ ಉಸ್ತುವಾರಿ ಪಿ.ಸಿ. ಚಾಕೋ ಹೇಳಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.