ETV Bharat / bharat

ಆಸ್ಪತ್ರೆಯಲ್ಲಿ ರಸೀದಿ ಪಡೆಯಲು 5 ರೂ. ಇಲ್ಲದೆ ರೋಗಿ ಸಾವು!

author img

By

Published : Jul 23, 2020, 5:13 PM IST

ಮಧ್ಯಪ್ರದೇಶದ ಗುನಾ ಜಿಲ್ಲಾಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಆಸ್ಪತ್ರೆಯಲ್ಲಿ ರಸೀದಿ ಪಡೆಯಲು 5 ರೂಪಾಯಿ ಇಲ್ಲದೆ ಚಿಕಿತ್ಸೆಯಿಂದ ವಂಚಿತನಾಗಿ ರೋಗಿ ಮೃತಪಟ್ಟಿದ್ದಾನೆ.

patient dies
ರೋಗಿ ಸಾವು

ಗುನಾ: ಆಸ್ಪತ್ರೆಯಲ್ಲಿ ರಸೀದಿ ಪಡೆಯಲು 5 ರೂಪಾಯಿ ಇಲ್ಲದೆ ಚಿಕಿತ್ಸೆಯಿಂದ ವಂಚಿತನಾಗಿ ರೋಗಿ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಗುನಾ ಜಿಲ್ಲೆಯಲ್ಲಿ ನಡೆದಿದೆ.

ಗುನಾ ಜಿಲ್ಲೆಯ ಅಶೋಕ್ ನಗರ ಶಂಕರ್ ಕಾಲೋನಿಯ ನಿವಾಸಿ ಸುನಿಲ್ ಧಾಕಡ್​ ಮೃತ ವ್ಯಕ್ತಿ. ಸುನಿಲ್, ಕೆಲ ದಿನಗಳಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದ. ತೀವ್ರ ಬಡತನದಲ್ಲಿ ಜೀವನ ಸಾಗಿಸುತ್ತಿದ್ದ ಸುನಿಲ್-ಆರತಿ ರಾಜಕ್ ದಂಪತಿಗೆ ಆಸ್ಪತ್ರೆಗೆ ಬರಲು ಬಿಡಿಗಾಸು ಕೂಡ ಕೈಯ್ಯಲ್ಲಿರಲಿಲ್ಲ. ಬುಧವಾರ ಗಂಡನ ಆರೋಗ್ಯ ಪರಿಸ್ಥಿತಿ ಗಂಭೀರವಾದ ಕಾರಣ ಗುನಾ ಕಡೆಗೆ ಬರುತ್ತಿದ್ದ ಯಾವುದೋ ವಾಹನ ಹತ್ತಿಕೊಂಡು ಪತ್ನಿ ಆಸ್ಪತ್ರೆಗೆ ಕರೆದುಕೊಂಡು ಹೊರಟಿದ್ದಾಳೆ. ಆ ವಾಹನ ಇಳಿದ ಬಳಿಕ ಅಲ್ಲಿಂದ 30 ರೂ. ಕೊಟ್ಟು ಆಟೋ ಬಾಡಿಗೆ ಮಾಡಿಕೊಂಡು ನಿನ್ನೆ ಸಂಜೆ 7:30ರ ವೇಳೆಗೆ ಜಿಲ್ಲಾಸ್ಪತ್ರೆ ತಲುಪಿದ್ದಾಳೆ.

ಆಸ್ಪತ್ರೆಯಲ್ಲಿ ರಸೀದಿ ಪಡೆಯಲು 5 ರೂ. ಇಲ್ಲದೆ ರೋಗಿ ಸಾವು

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲು ರಸೀದಿ ಪಡೆಯಲು 5 ರೂಪಾಯಿ ಇಲ್ಲದೆ ಮಹಿಳೆ ಪರದಾಡಿದ್ದಾಳೆ. ಇದನ್ನು ನೋಡಿಯೂ ಆಸ್ಪತ್ರೆ ಸಿಬ್ಬಂದಿ ಮಾನವೀಯತೆ ಮರೆತು ನಿಂತಿದ್ದರು. ನಿನ್ನೆ ಸಂಜೆಯಿಂದ ಇಂದು ಬೆಳಗ್ಗೆವರೆಗೂ ತನ್ನ ಕುಟುಂಬಸ್ಥರ ಬರುವಿಕೆಗಾಗಿ ಕಾಯುತ್ತಿದ್ದ ಆಕೆ, ಹೇಗೋ 5 ರೂ. ಹೊಂದಿಸಿದ್ದಾಳೆ. ಆದರೆ ರಸೀದಿ ಪಡೆಯಲು ಹೋಗುವಷ್ಟರಲ್ಲಿ ಗಂಡನ ಪ್ರಾಣಪಕ್ಷಿಯೇ ಹಾರಿ ಹೋಗಿದೆ. ಇನ್ನು ದಂಪತಿಗೆ ಎರಡು ವರ್ಷದ ಮಗು ಕೂಡ ಇದ್ದು, ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.