ETV Bharat / bharat

ಮಗಳು ಸೇರಿ ಮೂವರನ್ನು ಬರ್ಬರವಾಗಿ ಕೊಂದ ವ್ಯಕ್ತಿ! ಕಾರಣ? - murder of three people

ಅಣ್ಣನ ಮಗಳು ಪ್ರೇಮವಿವಾಹ ಆಗಿದ್ದಕ್ಕೆ ಕೋಪಗೊಂಡ ವ್ಯಕ್ತಿ, ಅಣ್ಣ, ಅಣ್ಣನ ಮಗಳು ಹಾಗೂ ತನ್ನ ಮಗಳನ್ನು ಕೊಲೆ ಮಾಡಿರುವ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯ ದೋಮಕಾಂಡ ಶಿವಾರುನಲ್ಲಿ ನಡೆದಿದೆ.

ಮಗಳನ್ನು ಸೇರಿ ಮೂವರ ಹತ್ಯೆ
author img

By

Published : Oct 13, 2019, 10:07 AM IST

Updated : Oct 13, 2019, 12:29 PM IST

ಹೈದ್ರಾಬಾದ್: ಕುಟುಂಬದಲ್ಲಿ ಪ್ರೇಮವಿವಾಹ ನಡೆದಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ಮನೆಯಲ್ಲಿ ರಕ್ತದ ಕೋಡಿಯನ್ನೇ ಹರಿಸಿರುವ ಭೀಕರ ಘಟನೆಯೊಂದು ತೆಲಂಗಾಣ ರಾಜ್ಯದ ಕಾಮರೆಡ್ಡಿ ಜಿಲ್ಲೆಯಲ್ಲಿ ನಡೆದಿದೆ.

ಮತ್ತೊಂದು ಬಾರಿ ತಮ್ಮ ಕುಟುಂಬದಲ್ಲಿ ಪ್ರೇಮವಿವಾಹ ನಡೆದೀತು ಎಂದು ಪೂರ್ವಾಗ್ರಹಪೀಡಿನಾದ ವ್ಯಕ್ತಿ ತನ್ನ ಮಗಳು, ಸಹೋದರ ಮತ್ತು ಆತನ ಮಗಳನ್ನು ಬರ್ಬರವಾಗಿ ಕೊಂದಿದ್ದಾನೆ.

ಕಾಮರೆಡ್ಡಿ ಜಿಲ್ಲೆಯ ದೋಮಕಾಂಡ ಶಿವಾರುನ ನಿವಾಸಿ ಬಾಲಯ್ಯ (45), ಹಿರಿಯ ಮಗಳು ದೀಪಾ ಮತ್ತು ಆರೋಪಿಯ ಮಗಳು ಕೊಲೆಯಾದವರು. ದೀಪಾ ಅದೇ ಗ್ರಾಮದ ಯುವಕನನ್ನು ಪ್ರೇಮಿಸಿ ವಿವಾಹವಾಗಿದ್ದಳು.

ಮಗಳನ್ನು ಸೇರಿ ಮೂವರ ಹತ್ಯೆ

ಆಕೆಯ ಚಿಕ್ಕಪ್ಪ ರವಿಗೆ ಈ ಪ್ರೇಮ ವಿವಾಹ ಇಷ್ಟವಿರಲಿಲ್ಲ. ಇದೆಲ್ಲವನ್ನು ಎದುರಿಸಿದ ದೀಪಾ ವಿವಾಹವಾಗಿದ್ದಳು ಎನ್ನಲಾಗ್ತಿದೆ. ಇದನ್ನು ಅರಗಿಸಿಕೊಳ್ಳದ ರವಿ ತನ್ನ ಅಣ್ಣನ ಮೇಲೆ ಕೋಪಗೊಂಡಿದ್ದ. ಬಳಿಕ ಇದೇ ರೀತಿ ತನ್ನ ಮಕ್ಕಳು ಕೂಡ ಮದುವೆಯಾಗುತ್ತಾರೆ ಎಂಬ ತಪ್ಪು ಕಲ್ಪನೆಯಿಂದ ಅಣ್ಣ, ಅಣ್ಣನ ಮಗಳು ಹಾಗೂ ತನ್ನ ಮಗಳನ್ನು ಕೊಲೆಗೈದಿದ್ದಾನೆ.

ಕೊಲೆ ಮಾಡಲು ಮೊದಲೇ ಸಂಚು ರೂಪಿಸಿದ್ದ ರವಿ, ಶನಿವಾರ ಮೂವರನ್ನು ದೇವಸ್ಥಾನಕ್ಕೆ ಕರೆದೊಯ್ದಿದ್ದ. ಬಳಿಕ ಅವರಿಗೆ ದೇವಸ್ಥಾನದ ಪ್ರಸಾದಲ್ಲಿ ವಿಷ ಬೆರಸಿ ಕೊಟ್ಟಿದ್ದಾನೆ. ಇದನ್ನು ತಿಂದು ಅವರು ಅಸ್ವಸ್ಥರಾಗುತ್ತಿದ್ದಂತೆ ಬ್ಲೇಡ್​​ನಿಂದ ಕತ್ತು ಕೊಯ್ದು ಕೊಲೆ ಮಾಡಿ, ವಿಕೃತಿ ಮೆರೆದಿದ್ದಾನೆ. ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Intro:ವಿಜಯಪುರ Body:ವಿಜಯಪುರ:
ಪ್ರೀತಿ, ಪ್ರೇಮ, ಕರುಣೆ ಎಂಬುದು ಮೂಕ ಪ್ರಾಣಿಗಳಲ್ಲಿಯೂ ಇರುತ್ತವೆ ಎಂಬುದಕ್ಕೆ ವಿಜಯಪುರ ಜಿಲ್ಲೆಯಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಮಾನವೀಯತೆ ಮರೆತ ಜನರಿಗೆ ಮಂಗವೊಂದು ನೀತಿ ಪಾಠ ಹೇಳಿದೆ. ಮೂಕ ಪ್ರಾಣಿಗಳಲ್ಲಿಯೂ ಪ್ರೀತಿ ಪ್ರೇಮ ಇರುತ್ತದೆ ಅದು ಕೇವಲ ಮನುಷ್ಯ ಸ್ವತ್ತಲ್ಲ ಎಂಬುದನ್ನು ಒಂದು‌ ಮಂಗ ನಿರೂಪಿಸಿದೆ. ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನ ಕೋರವಾರ ಗ್ರಾಮದಲ್ಲಿ ಮೂರ್ನಾಲ್ಕು ದಿನದ ಹಿಂದಿನ ನಡೆದ ಕಥೆಯಿದು.
ಹಂದಿಗಳ ದಾಳಿಯಿಂದ ನಾಯಿ‌ ಮರಿ ರಕ್ಷಣೆ ಮಾಡಿದ ಮಂಗ ಮಾನವೀಯತೆ ಮೆರೆದಿದೆ.
ತಾಯಿಯಿಂದ ಬೇರೆಯಾಗಿದ್ದ ಎರಡು ನಾಯಿ ಮರಿಗಳು ಅಲೆದಾಡುತ್ತಿದ್ದವು. ಇದೇ ವೇಳೆ ಹಂದಿಗಳ ಗುಂಪು ಆ ಎರಡು ನಾಯಿಮರಿಗಳ ಮೇಲೆ ದಾಳಿ ಮಾಡಿದ್ದವು. ಹಂದಿಗಳ ದಾಳಿಗೆ ಒಳಗಾದ ನಾಯಿ‌ ಮರಿಗಳನ್ನು ಸ್ವತಃ ಜನರು ಕಣ್ಣಾರೆ ಕಂಡು ಸುಮ್ಮನಿದ್ದರು. ಇದನ್ನು ಕಂಡ ಎರಡು ಕೋತಿಗಳು ಹಂದಿಗಳ ಮೇಲೆ ಅಟ್ಯಾಕ್ ಮಾಡಿ ನಾಯಿ ಮರಿಗಳ ರಕ್ಷಣೆಗೆ ಮುಂದಾದವು. ಅಷ್ಟರಲ್ಲಾಗಲೇ ಒಂದು ನಾಯಿ ಮರಿ ಅಸುನೀಗಿತ್ತು. ಬದುಕುಳಿದ ಒಂದು ನಾಯಿ ಮರಿ ರಕ್ಷಣೆ ಮಾಡಿದ ಕೋತಿಗಳು ಆ ನಾಯಿ ಮರಿಯನ್ನು ಜೊತೆಗೆ ಕರೆದುಕೊಂಡು ಹೋದವು. ಇದು ಕೋರವಾರ ಗ್ರಾಮದ ಜನರಲ್ಲಿ ಆಶ್ಚರ್ಯವನ್ನು ಉಂಟು ಮಾಡಿದೆ.
ಮಂಗನಿಂದ ಈ ಶ್ವಾನ ಮರಿಯ ಲಾಲನೆ ಪಾಲನೆ:
ನಾಯಿ ಮರಿಯನ್ನು ಬಿಟ್ಟರೆ ಹಂದಿಗಳು ಮತ್ತೆ ದಾಳಿ ಮಾಡಬಹುದು ಎಂದು ಕೋತಿಗಳೆರಡು ನಾಯಿಮರಿಯನ್ನು ಪೋಷಣೆ ಮಾಡುತ್ತಿದೆ. ಇತ್ತ ತಾಯಿ ನಾಯಿ ಮಾತ್ರ ಕಳೆದು ಹೋಗಿರುವ ಮರಿಗಳಿಗಾಗಿ ಓಡಾಡುತ್ತಿದೆ. ಕೋತಿಗಳ ಕೈಲಿ ತನ್ನ ಮರಿಯನ್ನು ಕಂಡು ತಾಯಿ‌ನಾಯಿ ಮೂಕವಾಗಿ ರೋಧಿಸುತ್ತಿದೆ. ಒಂದು ವೇಳೆ ತಾಯಿ ನಾಯಿ ಕೋತಿಗಳ ಬಳಿಗೆ ತೆರಳಿದರೆ ನಾಯಿಯನ್ನು ಕೋತಿಗಳು ಬೆದರಿಸಿ ಕಳುಹಿಸುತ್ತಿವೆ ಎಂದು ಗ್ರಾಮದ ಜನರು ಹೇಳಿದ್ದಾರೆ.
ಆಂಜನೇಯ ಸ್ವಾಮಿ ಮಹಿಮೆ.!:
ಹೌದು... ಕೋರವಾರ ಹನುಮಂತ ದೇವರಿಗೆ ಹರಕೆ ಕಟ್ಟಿಕೊಂಡ್ರೆ ಇಷ್ಟಾರ್ಥ ಸಿದ್ಧಿಯಾಗುತ್ತೆ. ಬೇಡಿದ ವರವನ್ನು ಹನುಮಂತ ದೇವರು ನೀಡುತ್ತಾನೆ ಎಂಬ ನಂಬಿಕೆ ಈ ಭಾಗದಲ್ಲಿ ಜನರಲ್ಲಿದೆ. ಈ‌ ದೇವರ
ಪವಾಡದಿಂದಲೇ ಎರಡು ಕೋತಿಗಳು ನಾಯಿ ಮರಿಗೆ ಆಶ್ರಯ ನೀಡಿವೆ ಎಂದು ಕೋರವಾರ ಗ್ರಾಮದ ಜನರು ಚರ್ಚೆ ಮಾಡುತ್ತಿದ್ದಾರೆ. ಈ ರೀತಿ ನಾಯಿ ಮರಿಯನ್ನು ಕರೆದುಕೊಂಡು ಹೋಗಿರುವ ಕೋತಿಗಳು ನಾಯಿ ಮರಿಗೆ ತಾಯಿಯಂತೆ ಪೋಷಣೆ ಮಾಡುತ್ತಿವೆ. ಗ್ರಾಮದ ಜನರು ನೀಡುವ ರೊಟ್ಟಿ, ಬ್ರೆಡ್, ಬಿಸ್ಕಟ್ ಸೇರಿದಂತೆ ಇತರೆ ವಸ್ತುಗಳನ್ನು ಕೋತಿಗಳು ತಾವು ತಿಂದು ನಾಯಿ ಮರಿಗೂ ತಿನಿಸುತ್ತಿವೆ. ಒಂದು ಹೆಣ್ಣು ಹಾಗೂ ಒಂದು ಗಂಡು ಕೋತಿಗಳು ಈ ರೀತಿ ನಾಯಿ ಮರಿಗೆ ಆಶ್ರಯ ನೀಡಿದ್ದು ಸಹ ದೇವರ ಪವಾಡವೆಂದು ಜನರು ನಂಬಿಕೆ ವ್ಯಕ್ತಪಡಿಸಿದ್ದಾರೆ. ಆದರೆ ಮಂಗಗಳ‌ ಕೈಯಲ್ಲಿ ತನ್ನ ಮಗುವನ್ನು ಕಂಡ ತಾಯಿ ನಾಯಿ ಮಾತ್ರ ಮೂಕ ವೇದನೆ ಅನುಭವಿಸುತ್ತಿದೆ.Conclusion:ವಿಜಯಪುರ
Last Updated : Oct 13, 2019, 12:29 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.