ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಬೆಸ್ತರು ಮೀನುಗಾರಿಕೆಗೆ ತೆರಳಿದ್ದ ವೇಳೆ ಭೆಕ್ಟಿ ಜಾತಿಯ ಜಂಬೋ ಮೀನೊಂದು ಪತ್ತೆಯಾಗಿದೆ. ಅದರ ತೂಕ ಕೇಳಿದ್ರೆ ಅರೆಕ್ಷಣ ಅವಕ್ಕಾಗೋದು ಗ್ಯಾರಂಟಿ..!
ಹೌರಾ ಜಿಲ್ಲೆಯ ಉಲುಬೆರಿಯಾ ನಿವಾಸಿಗಳು ಮಂಗಳವಾರದಂದು ಗಂಗಾ ನದಿಯಲ್ಲಿ ಮೀನುಗಾರಿಕೆ ತೆರಳಿದ ವೇಳೆ ಬರೋಬ್ಬರಿ 18.5 ಕೆಜಿ ತೂಕದ ಭೆಕ್ಟಿ ಮೀನು ದೊರೆತಿದೆ.
ಇಷ್ಟು ತೂಕವಿರುವ ಭೆಕ್ಟಿ ಮೀನು ಸಿಗುವುದು ಅಪರೂಪ. ಹಾಗಾಗಿ ಮಾರಾಟದಲ್ಲೂ ಅದು ದಾಖಲೆ ಬರೆದಿದೆ. ಸ್ಥಳೀಯ ಮೀನು ಮಾರಾಟಗಾರನೊಬ್ಬ ಈ ಮೀನನ್ನು ₹12,000 ನೀಡಿ ಪಡೆದುಕೊಂಡಿದ್ದಾನೆ. ದೊಡ್ಡ ಮಾರುಕಟ್ಟೆಯಲ್ಲಿ ₹13ರಿಂದ ₹15 ಸಾವಿರಕ್ಕೆ ಮಾರಾಟವಾಗುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.