ETV Bharat / bharat

ಕಟ್ಟುನಿಟ್ಟಿನ ಮಾನದಂಡಗಳನ್ನು ಬಳಸಿ ಸಿದ್ಧಪಡಿಸಬೇಕಿದೆ ಮತದಾರರ ಪಟ್ಟಿ!! - election

2015ರ ಫೆಬ್ರವರಿಯಲ್ಲಿ ನಿರ್ವಚನ್ ಸದನ್ ಮುಖ್ಯ ಆಯುಕ್ತ ಹೆಚ್ ಎಸ್ ಬ್ರಹ್ಮ ಅವರು ದೇಶಾದ್ಯಂತ ಮತದಾರರ ಪಟ್ಟಿಯಲ್ಲಿ ಎಂಟೂವರೆ ಕೋಟಿ ಹೆಸರುಗಳು ನಕಲಿ ಅಥವಾ ಭೋಗಸ್ ಎಂದು ಘೋಷಿಸಿದರು. ಒಟ್ಟು ಮತಗಳಲ್ಲಿ ಶೇ.10-12ರಷ್ಟು ನಕಲಿ ಎಂದೂ ಹೇಳಿದ್ದರು..

A List of Voters Prepared on Strict Norms
ಮತದಾರರ ಪಟ್ಟಿ
author img

By

Published : Sep 1, 2020, 9:10 PM IST

ವಿಶೇಷ ಲೇಖನ : 90 ಕೋಟಿಗಿಂತಲೂ ಹೆಚ್ಚಿನ ಮತದಾರರ ಅಂಕಿಅಂಶವನ್ನು ಹೊಂದಿರುವ ಭಾರತವು ವಿಶ್ವದ ಪ್ರಜಾಪ್ರಭುತ್ವಕ್ಕೆ ದಾರಿದೀಪವಾಗಿ ಬಹಳ ದೊಡ್ಡ ಖ್ಯಾತಿಯನ್ನು ಹೊಂದಿದೆ.

ಭಾರತದ ಮೂರು ಹಂತದ ಆಡಳಿತಕ್ಕೆ ಪ್ರತಿನಿಧಿಗಳ ಆಯ್ಕೆಯ ಚುನಾವಣೆಗೆ ಮೂಲಭೂತ ಅವಶ್ಯಕತೆಯಾದ ಮತದಾರರ ಪಟ್ಟಿಯ ಪ್ರಸ್ತುತ ಸ್ಥಿತಿಯು ಅತ್ಯಂತ ನಾಚಿಕೆಗೇಡಿನ ಸ್ಥಿತಿಯಲ್ಲಿದೆ. ಭಾರತ ರತ್ನ ಡಾ. ಅಂಬೇಡ್ಕರ್ ಅವರು ಮತದಾರರ ಪಟ್ಟಿಯ ಸಿದ್ಧತೆಯನ್ನು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕಾದುದು ಕರ್ತವ್ಯ ಎಂದು ನಮಗೆ ನೆನಪಿಸಿದ್ದರೂ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಚುನಾವಣಾ ಸಮಿತಿಗಳು ದಶಕಗಳಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ವಿಫಲವಾಗುತ್ತಿರುವ ರೀತಿ ಆತಂಕಗಳನ್ನುಂಟು ಮಾಡಿದೆ.

ಕಳೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಭರವಸೆ ನೀಡಿದಂತೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಇತ್ತೀಚೆಗೆ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಂದೇ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಯತ್ನಗಳನ್ನು ತೀವ್ರಗೊಳಿಸಿದೆ. ಸಂವಿಧಾನದ 324 ನೇ ವಿಧಿ ಪ್ರಕಾರ, ಲೋಕಸಭೆ ಮತ್ತು ವಿಧಾನಸಭೆಯು ಚುನಾವಣೆಗೆ ಖಚಿತವಾದ ಚುನಾವಣಾ ಪಟ್ಟಿಯನ್ನು ಕಾಯ್ದುಕೊಳ್ಳಲು ಕಾನೂನಿನ ಪ್ರಕಾರ ಅಗತ್ಯವಿದ್ದಲ್ಲಿ ಚುನಾವಣೆಗಳನ್ನು ನಡೆಸಲು ಸ್ಥಳೀಯ ಸಂಸ್ಥೆಗಳಿಂದ ಅಧಿಕಾರ ಹೊಂದಿರುವ ರಾಜ್ಯ ಚುನಾವಣಾ ಸಂಸ್ಥೆಗಳು ಒಟ್ಟುಗೂಡಿಸಿದ ಮತದಾರರ ಪಟ್ಟಿಯೊಂದಿಗೆ ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ನಿರ್ವಹಿಸುತ್ತವೆ.

ಸುಮಾರು 22 ರಾಜ್ಯಗಳು ಕೇಂದ್ರ ಚುನಾವಣಾ ಆಯೋಗ ಸಿದ್ಧಪಡಿಸಿರುವ ಪಟ್ಟಿಗಳನ್ನು ಅವಲಂಬಿಸಿವೆ. ಉತ್ತರಪ್ರದೇಶ, ಉತ್ತರಾಖಂಡ, ಒಡಿಶಾ, ಅಸ್ಸೋಂ, ಮಧ್ಯಪ್ರದೇಶ, ಕೇರಳ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್ ರಾಜ್ಯಗಳ ವಿಶಿಷ್ಟತೆಯನ್ನು ಸೂಚಿಸುವ 'ಪ್ರತ್ಯೇಕ' ಮತದಾರರ ಪಟ್ಟಿಗಳು ಬಂದಿವೆ. 1999 ಮತ್ತು 2004ರ ಅವಧಿಯಲ್ಲಿ ಚುನಾವಣಾ ಆಯೋಗವು ದೇಶಾದ್ಯಂತ ಒಂದೇ ಮತದಾರರ ಪಟ್ಟಿಯನ್ನು ಪರಿಚಯಿಸುವುದನ್ನು ಬೆಂಬಲಿಸುತ್ತಿದ್ದಂತೆ, ನ್ಯಾಯಾಂಗ ಮಂಡಳಿಯು 2015ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಇದನ್ನೇ ಎತ್ತಿ ಹಿಡಿದಿತ್ತು.

ಮತದಾರರ ಪಟ್ಟಿಯನ್ನು ತಯಾರಿಸುವ ಸಲುವಾಗಿ ಆಯಾ ರಾಜ್ಯಗಳಲ್ಲಿ ಪುನರಾವರ್ತಿತ ಖರ್ಚು ಮತ್ತು ಕೆಲಸಗಳನ್ನು ತಪ್ಪಿಸುವ ಉದ್ದೇಶವನ್ನು ಹೊಂದಿರುವ ಈ ಬದಲಾವಣೆಯು ರಾಜ್ಯದ ಕಾನೂನುಗಳಲ್ಲಿ ನಿರ್ದಿಷ್ಟ ಬದಲಾವಣೆಗಳನ್ನು ಬೇಡುತ್ತದೆ. ದೇಶಕ್ಕೆ ಒಂದೇ ಮತದಾರರ ಪಟ್ಟಿಯನ್ನು ಕಾಯ್ದುಕೊಳ‍್ಳುವುದು ಒಳ್ಳೆಯದೇ ಆದರೂ ಈ ಪಟ್ಟಿಯ ಸತ್ಯಾಸತ್ಯತೆ ವಿಶ್ವಾಸಾರ್ಹವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಬೇಕಾಗುತ್ತದೆ.

ಮತ ಎಂದರೇನು?: ಭಾರತದ ಚುನಾವಣಾ ಆಯೋಗವು ತಾನು ಈ ಚುನಾವಣೆಯ ನಂತರದ ಸಾರ್ವತ್ರಿಕ ಚುನಾವಣೆಯಲ್ಲಿ ತಾನು ಪರಿಚಯಿಸಿದ ಮತದಾನ ವ್ಯವಸ್ಥೆಯ ಕುರಿತು ಸಂಪೂರ್ಣ ಜ್ಞಾನದೊಂದಿಗೆ ಸಾಮಾನ್ಯ ಮತದಾರನಿಗೆ ಮತ ಚಲಾಯಿಸಲು ಸಾಧ್ಯವಾಯಿತು ಎಂದು ಈ ಹಿಂದೆ ಹೆಮ್ಮೆಪಟ್ಟಿತ್ತು. ಮತ್ತು ಇಂದಿನ ದಿನಗಳಲ್ಲಿ ಚುನಾವಣಾ ಆಯೋಗವು ರಚಿಸಿದ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲದಿರುವಿಕೆಯನ್ನು ಆಕ್ರಮಣಕಾರಿಯಾಗಿ ಪ್ರಶ್ನಿಸುತ್ತಿರುವ ಲಕ್ಷಾಂತರ ಜನರು ಅವರ ಮತವನ್ನು ತಮ್ಮ ಅಸ್ತಿತ್ವದ ಸಂಕೇತವೆಂದು ಪರಿಗಣಿಸುತ್ತಾರೆ.

2015ರ ಫೆಬ್ರವರಿಯಲ್ಲಿ ನಿರ್ವಚನ್ ಸದನ್ ಮುಖ್ಯ ಆಯುಕ್ತ ಹೆಚ್ ಎಸ್‌ ಬ್ರಹ್ಮ ಅವರು ದೇಶಾದ್ಯಂತ ಮತದಾರರ ಪಟ್ಟಿಯಲ್ಲಿ ಎಂಟೂವರೆ ಕೋಟಿ ಹೆಸರುಗಳು ನಕಲಿ ಅಥವಾ ಭೋಗಸ್ ಎಂದು ಘೋಷಿಸಿದರು. ಒಟ್ಟು ಮತಗಳಲ್ಲಿ ಶೇ.10-12ರಷ್ಟು ನಕಲಿ ಎಂದೂ ಹೇಳಿದರು, ಇದು ರಾಷ್ಟ್ರೀಯ ಸಮಸ್ಯೆಯಾಗಿದೆ. ಅದೇ ವರ್ಷದ ಆಗಸ್ಟ್ 15ರೊಳಗೆ ನಾಗರಿಕರ ಮೂಲ ಸಂಖ್ಯೆಗಳನ್ನು ಮತದಾರರ ಪಟ್ಟಿಗೆ ಜೋಡಿಸಲಾಗುವುದು ಎಂದು ಭರವಸೆ ನೀಡಿದರು.

ಎಲ್ಲಾ ವಹಿವಾಟುಗಳಿಗೂ ಆಧಾರ್ ಕಡ್ಡಾಯಗೊಳಿಸುವುದು ಸೂಕ್ತವಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸುವುದರೊಂದಿಗೆ ಈ ಯೋಜನೆಯನ್ನು ರದ್ದುಗೊಳಿಸಲಾಯಿತು. ಚುನಾವಣಾ ಆಯೋಗದ ಪರವಾಗಿ 'ಮತದ ಹಕ್ಕನ್ನು' ಪ್ರಚಾರ ಮಾಡಲು ಭಾಗವಹಿಸಿದ ಪ್ರಸಿದ್ಧ ವ್ಯಕ್ತಿಗಳ ಹೆಸರುಗಳು ಮತದಾರರ ಪಟ್ಟಿಯಿಂದ ಕಾಣೆಯಾಗಿವೆ. ಚುನಾವಣಾ ಆಯೋಗದ ಮಾಜಿ ಮುಖ್ಯ ಆಯುಕ್ತರನ್ನು ಸಹ ನಾಂಪಲ್ಲಿಯ ಮತದಾರರೆಂದು ತೋರಿಸಿರುವ ಇತರ ನಿರಾಕರಿಸಲಾಗದ ದೃಷ್ಟಾಂತಗಳೂ ಕಣ್ಣ ಮುಂದಿವೆ. ಚುನಾವಣಾ ಆಯೋಗವು ಪ್ರತಿ ಬಾರಿಯೂ ನಿಯಮಿತವಾಗಿ 'ಕ್ಷಮೆಯಾಚಿಸುವುದು/ಕ್ಷಮಿಸಿ' ಎಂದು ಘೋಷಿಸುವುದನ್ನು ಬಿಟ್ಟು ಇಂತಹ ತಪ್ಪುಗಳು ಸಂಭವಿಸದಂತೆ ತಪ್ಪುಗಳಿಲ್ಲದ ಭಾರತೀಯ ಮತದಾರರ ಪಟ್ಟಿಯನ್ನು ತರಬೇಕಿದೆ.

ಅರ್ಜೆಂಟೀನಾ, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್ ಮತ್ತು ಫಿನ್‌ಲ್ಯಾಂಡ್‌ಗಳಲ್ಲಿ ಸುಗಮವಾಗಿ ನಡೆಯುತ್ತಿರುವ ಚುನಾವಣೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಯಿಂದ ಪ್ರೇರಿತರಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಗ್ಗೂಡಿದರೆ ಮಾತ್ರ ಭಾರತದಲ್ಲಿ ನಿಜವಾದ ಪ್ರಜಾಪ್ರಭುತ್ವವನ್ನು ಸಾಧಿಸಬಹುದು. ನಕಲಿ ವಿವರಗಳನ್ನು ಅಳಿಸಿಹಾಕುವುದು, ತಂತ್ರಜ್ಞಾನದ ಬಳಕೆಯಿಂದ ಪಟ್ಟಿಯನ್ನು ಶುದ್ಧೀಕರಿಸುವುದು ಮತ್ತು ಭಾರತದ ಎಲ್ಲಾ ನಾಗರಿಕರಿಗೆ ಸಹಾಯಕವಾಗುವಂತೆ ಮತದಾರರ ಸ್ಪಷ್ಟ ಪಟ್ಟಿಯನ್ನು ನೀಡುವುದು ಅತ್ಯಂತ ಅವಶ್ಯಕವಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.