ETV Bharat / bharat

ಪುತ್ರಿ ಮದುವೆಗೆ ಎತ್ತಿನಗಾಡಿಯೊಳಗೆ ಪುಸ್ತಕ ಉಡುಗೊರೆಯಾಗಿ ಕೊಟ್ಟ ಅಪ್ಪ.. - ಗುಜರಾತ್​ ಲೇಟೆಸ್ಟ್​ ನ್ಯೂಸ್​

ರಾಜ್​ಕೋಟ್​ ನಿವಾಸಿ ಹರ್​ದೇವ್​​ ಸಿಂಗ್​ ಜಡೇಜಾ ಎಂಬುವರು ತಮ್ಮ ಪುತ್ರಿ ಕಿನ್ನರಿಬಾ ಎಂಬಾಕೆಯ ಮದುವೆಗೆ ಪುಸ್ತಕಗಳನ್ನು ಗಿಫ್ಟ್‌ ಆಗಿ ಕೇಳಿದ್ದಳು. ಇದಕ್ಕಾಗಿ ತಂದೆ ದೇಶಾದ್ಯಂತ ಸಂಚರಿಸಿ ಪುಸ್ತಕಗಳನ್ನು ಖರೀದಿಸಿದ್ದಾರೆ. ಮದುವೆಯ ದಿನದಂದು ಉಡುಗೊರೆಯಾಗಿ ನೀಡಿದ್ದಾರೆ.

A father given  bullock cart of Books for her wedding
ತಂದೆಯಿಂದ ಮಗಳ ಮದುವೆಗೆ ಎತ್ತಿನಗಾಡಿಯ ತುಂಬಾ ಪುಸ್ತಕಗಳ ಉಡುಗೊರೆ
author img

By

Published : Feb 16, 2020, 1:29 PM IST

ರಾಜ್​ಕೋಟ್​​​​ : ಮಗಳ ಮದುವೆಗೆ ತಂದೆಯೊಬ್ಬ ಒಂದು ಎತ್ತಿನಗಾಡಿಯಲ್ಲಿ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಿದ ಅಪರೂಪದ ಪ್ರಸಂಗ ಗುಜರಾತ್​​ನ ರಾಜಕೋಟ್​​ನಲ್ಲಿ ನಡೆದಿದೆ. ಮಗಳು ತನ್ನ ಮದುವೆಗೆ ಪುಸ್ತಕಗಳನ್ನು ಉಡುಗೊರೆಯಾಗಿ ನೀಡಲು ಹೇಳಿದ್ದರಿಂದ ಸುಮಾರು 2400 ಪುಸ್ತಕಗಳನ್ನು ಮದುವೆಯ ದಿನ ಉಡುಗೊರೆಯಾಗಿ ನೀಡಿದ್ದಾನೆ.

ತಂದೆಯಿಂದ ಮಗಳ ಮದುವೆಗೆ ಎತ್ತಿನಗಾಡಿಯ ತುಂಬಾ ಪುಸ್ತಕಗಳ ಉಡುಗೊರೆ

ರಾಜ್​ಕೋಟ್​ ನಿವಾಸಿ ಹರ್​ದೇವ್​​ ಸಿಂಗ್​ ಜಡೇಜಾ ಎಂಬುವರು ತಮ್ಮ ಪುತ್ರಿ ಕಿನ್ನರಿಬಾ ಎಂಬಾಕೆಯ ಮದುವೆಗೆ ಪುಸ್ತಕಗಳನ್ನು ಗಿಫ್ಟ್‌ ಆಗಿ ಕೇಳಿದ್ದಳು. ಇದಕ್ಕಾಗಿ ತಂದೆ ದೇಶಾದ್ಯಂತ ಸಂಚರಿಸಿ ಪುಸ್ತಕಗಳನ್ನು ಖರೀದಿಸಿದ್ದಾರೆ. ಮದುವೆಯ ದಿನದಂದು ಉಡುಗೊರೆಯಾಗಿ ನೀಡಿದ್ದಾರೆ.

ಹರ್​ದೇವ್​​ ಸಿಂಗ್​ ಜಡೇಜಾ ವೃತ್ತಿಯಿಂದ ಶಿಕ್ಷಕ. 'ನನ್ನ ಮಗಳು ತುಂಬಾ ಚಿಕ್ಕವಯಸ್ಸಿನಿಂದಲೇ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡಿದ್ದಳು. ಮದುವೆಗೆ ಪುಸ್ತಕಗಳನ್ನ ಉಡುಗೊರೆಯಾಗಿ ನೀಡಬೇಕೆಂದು ಕೇಳಿದಾಗ, ಅವುಗಳನ್ನ ಕೊಡಿಸಿದ್ದೇನೆ ಎಂದಿದ್ದಾರೆ. ಚಿಕ್ಕ ವಯಸ್ಸಿನಿಂದ ಮಗಳಿಗೆ ಪುಸ್ತಕಗಳನ್ನು ನೀಡಿದ್ದು ಮನೆಯಲ್ಲಿ ಒಂದು ಪ್ರತ್ಯೇಕ ಗ್ರಂಥಾಲಯ ನಿರ್ಮಾಣ ಮಾಡಿದ್ದಾಳೆ' ಎಂದು ಮದುವೆ ವೇಳೆ ಸಂತಸ ವ್ಯಕ್ತಪಡಿಸಿದ್ದಾರೆ ಹರದೇವ್‌. ಭಾರತದ ಇತಿಹಾಸ, ಮಹಾಭಾರತ, ವಿಷ್ಣುಪುರಾಣದ ಜತೆಗೆ ಗುಜರಾತಿ ಹಾಗೂ ಇಂಗ್ಲೀಷ್​​ನ ಪುಸ್ತಕಗಳನ್ನು ತನ್ನ ಮಗಳಿಗೆ ಉಡುಗೊರೆಯಾಗಿ ನೀಡಿದ್ದಾನೆ ತಂದೆ.

ಮದುವೆಯ ವೇಳೆ ಹಣ, ಚಿನ್ನ, ಕಾರು, ಬಂಗಲೆ ಉಡುಗೊರೆಯಾಗಿ ಕೇಳುವ ಹಾಗೂ ಉಡುಗೊರೆಯಾಗಿ ನೀಡುವ ರೂಢಿ ಇದೆ. ಈ ಹಿನ್ನೆಲೆಯಲ್ಲಿ ರಾಜಕೋಟ್​​ನಲ್ಲಿ ನಡೆದ ಅಪರೂಪದ ವಿವಾಹ ಎಲ್ಲರ ಗಮನ ಸೆಳೆಯುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.