ETV Bharat / bharat

4 ಶಿಶುಗಳಿಗೆ ಜನ್ಮ ನೀಡಿದ ಕೊರೊನಾ ವೈರಸ್​ ಸೋಂಕಿತ ಮಹಿಳೆ! - ಉತ್ತರಪ್ರದೇಶದಲ್ಲಿ ನಾಲ್ವರು ಮಕ್ಕಳಿಗೆ ಜನ್ಮ

ಕೊರೊನಾ ಸೋಂಕಿತ ಮಹಿಳೆಯೊಬ್ಬಳು ನಾಲ್ವರು ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

coronavirus positive woman
coronavirus positive woman
author img

By

Published : Sep 24, 2020, 9:52 PM IST

ಗೋರಖ್​ಪುರ್ ​(ಉತ್ತರ ಪ್ರದೇಶ): ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ಗರ್ಭಿಣಿಯೊಬ್ಬಳು ನಾಲ್ವರು ಶಿಶುಗಳಿಗೆ ಜನ್ಮ ನೀಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದ್ದು, ಮೂವರು ಮಕ್ಕಳು ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ.

ಗೋರಖ್​ಪುರ್​​ ಜಿಲ್ಲೆಯ ಬಿಆರ್​ಡಿ ವೈದ್ಯಕೀಯ ಕಾಲೇಜ್​​ನಲ್ಲಿ ಈ ಘಟನೆ ನಡೆದಿದ್ದು, ಮೂವರು ಶಿಶುಗಳು ಆರೋಗ್ಯವಾಗಿದ್ದು, ನಾಲ್ಕನೇ ಮಗು ವೆಂಟಿಲೇಟರ್​​ನಲ್ಲಿದೆ ಎಂದು ವೈದ್ಯಕೀಯ ಕಾಲೇಜ್​ ಪ್ರಾಂಶುಪಾಲ ಗಣೇಶ್​ ಕುಮಾರ್ ಮಾಹಿತಿ ನೀಡಿದ್ದು, ತಾಯಿ ಕೂಡ ಆರೋಗ್ಯವಾಗಿದ್ದಾಳೆ ಎಂದಿದ್ದಾರೆ.

ಡಿಯೋರಿಯಾ ಜಿಲ್ಲೆ ಗೌರಿ ಬಜಾರ್​ ನಿವಾಸಿ 26 ವರ್ಷದ ಮಹಿಳೆ ಮಂಗಳವಾರ ರಾತ್ರಿ ವೈದ್ಯಕೀಯ ಆಸ್ಪತ್ರೆಗೆ ಹೆರಿಗೆಗೋಸ್ಕರ ದಾಖಲಾಗಿದ್ದರು. ಈ ವೇಳೆ, ಅವರಿಗೆ ಕೋವಿಡ್​ ಸೋಂಕು ಇರುವುದು ಕನ್ಫರ್ಮ್​ ಆಗಿತ್ತು. ಆಕೆಯ ಹೆರಿಗೆ ಮಾಡಿಸಲಾಗಿದ್ದು, ನಾಲ್ಕು ಶಿಶುಗಳ ತೂಕ 980 ಗ್ರಾನಿಂದ 1.5 ಕೆಜಿ ಇದೆ ಎಂದು ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.