ಕಚ್(ಗುಜರಾತ್): ಕೊರೊನಾ ವೈರಸ್ ಹಾಗೂ ಲಾಕ್ಡೌನ್ ಸಂಕಷ್ಟದಿಂದ ದೇಶದ ಪೊಲೀಸರು ಹಗಲು-ರಾತ್ರಿ ಲೆಕ್ಕಿಸದೇ ಕೆಲಸ ಮಾಡ್ತಿದ್ದಾರೆ. ಸರಿಯಾಗಿ ತಮ್ಮ ಮಕ್ಕಳ ಪಾಲನೆ - ಪೋಷಣೆ ಮಾಡಲು ಅವರಿಗೆ ಸಮಯ ಸಿಗುತ್ತಿಲ್ಲ.
ಇದೇ ಪರಿಸ್ಥಿತಿಯಲ್ಲಿ ಕೆಲಸ ನಿರ್ವಹಣೆ ಮಾಡಬೇಕಾದ ಅನಿವಾರ್ಯತೆ ನಿರ್ಮಾಣಗೊಂಡಿರುವ ಕಾರಣ ಗುಜರಾತ್ನ ಕಚ್ನಲ್ಲಿ ಮಹಿಳಾ ಪೇದೆವೋರ್ವರು 14 ತಿಂಗಳ ಕಂದಮ್ಮನಿಗೆ ಕಂಕುಳಲ್ಲಿ ಕುಳ್ಳಿರಿಸಿಕೊಂಡು ತಮ್ಮ ಕೆಲಸ ನಿರ್ವಹಣೆ ಮಾಡುತ್ತಿದ್ದಾರೆ.
ಕಚ್ನ ಭುಜ್ ಪ್ರದೇಶದಲ್ಲಿ ಡ್ಯೂಟಿ ನಿರ್ವಹಿಸುತ್ತಿರುವ ಈ ಮಹಿಳಾ ಪೊಲೀಸ್ ಪೇದೆ 14 ತಿಂಗಳ ಮಗು ಹೊತ್ತುಕೊಂಡೇ ಅನಿವಾರ್ಯ ಪರಿಸ್ಥಿತಿಯಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ. ಈಕೆಯ ಗಂಡ ಕೂಡ ಪೊಲೀಸ್ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿರುವ ಕಾರಣ ಮಗುವಿನ ಜವಾಬ್ದಾರಿ ಹೆಂಡತಿ ಮೇಲೆ ಬಿದ್ದಿದೆ.
ಮನೆಯಲ್ಲಿ ಯಾರು ಇಲ್ಲದ ಕಾರಣ ಅನಿವಾರ್ಯವಾಗಿ ನಮ್ಮೊಂದಿಗೆ ಮಗು ಕರೆದುಕೊಂಡು ಬರಬೇಕಾಗಿದೆ. ನನ್ನ ಗಂಡ ಮನೆಯಲ್ಲಿದ್ದಾಗ ಆತ ಜವಾಬ್ದಾರಿ ಹೊತ್ತುಕೊಳ್ಳುತ್ತಿದ್ದು, ಇಬ್ಬರು ಡ್ಯೂಟಿ ಮೇಲೆ ಇದ್ದಾಗ ಅದರ ಜವಾಬ್ದಾರಿ ನಾನು ನೋಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ. ಇದರ ಸುದ್ದಿ ಈ ಟಿವಿ ಭಾರತನಲ್ಲಿ ಪ್ರಸಾರವಾಗುತ್ತಿದ್ದಂತೆ ಐಜಿಪಿ ತ್ರಿವೇದಿ, ಮಹಿಳಾ ಪೊಲೀಸ್ ಪೇದೆಗೆ ಠಾಣೆಯಲ್ಲೇ ಡ್ಯೂಟಿ ಮಾಡುವಂತೆ ನಿರ್ದೇಶನ ನೀಡಿದ್ದಾಗಿ ತಿಳಿಸಿದ್ದಾರೆ.