ದೌಸಾ(ರಾಜಸ್ಥಾನ): ಬಂಟಿ ಹಾಗೂ ಬಬ್ಲಿ ಎಂಬ ಹೆಸರಿನಲ್ಲಿ ಪ್ರೇಮಿಗಳಿಬ್ಬರು ನಡೆಸಿರುವ ದೊಡ್ಡ ಹನಿ ಟ್ರ್ಯಾಪ್ ಪ್ರಕರಣವೊಂದು ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ದೌಸಾ ಜಿಲ್ಲೆಯ ನಿವಾಸಿಗಳಾದ ಯುವತಿ ಕಿರಣ್ ಬೈರವ ಹಾಗೂ ಯುವಕ ಅಕ್ಷಯ್ ಅಲಿಯಾಸ್ ಆಶು ಮೀನಾ ಪ್ರಕರಣದ ಆರೋಪಿಗಳಾಗಿದ್ದು, ಇದೀಗ ಇವರು ಪೊಲೀಸರ ಅತಿಥಿಗಳಾಗಿದ್ದಾರೆ.
ಪ್ರಕರಣ ಹಿನ್ನೆಲೆ: 2016 ರಲ್ಲಿ ಯುವತಿ ಕಿರಣ್, ದೌಸಾ ಜಿಲ್ಲೆಯ ರಾಮನಗರ ಕಾಲೋನಿ ನಿವಾಸಿಯಾದ ವಿಶ್ರಮ್ ಬೈರವ ಎಂಬ ವ್ಯಕ್ತಿಯನ್ನು ಫೋನ್ನಲ್ಲಿ ಪರಿಚಯ ಮಾಡಿಕೊಂಡಿದ್ದರು. ತನಗೆ ಮದುವೆಯಾಗಿ ವಿಚ್ಛೇದನ ಪಡೆದಿರುವುದಾಗಿ ಹೇಳಿಕೊಂಡ ಯುವತಿ ಆತನೊಂದಿಗೆ ಸ್ನೇಹ ಸಂಪಾದಿಸಿದ್ದಳು. ನಿಧಾನವಾಗಿ ತನ್ನ ಪ್ರೇಮಜಾಲದಲ್ಲಿ ಬೀಳಿಸಿಕೊಂಡ ಕಿರಣ್ 2017ರಲ್ಲಿ ಕೋಣೆಯೊಂದಕ್ಕೆ ಕರೆದು ವಿಶ್ರಮ್ ಜೊತೆ ದೈಹಿಕ ಸಂಪರ್ಕ ಬೆಳೆಸುತ್ತಾಳೆ. ಆ ಬಳಿಕ ಹಣಕ್ಕೆ ಬೇಡಿಕೆಯಿಟ್ಟಿದ್ದು, ಹಣ ನೀಡಲು ನಿರಾಕರಿಸಿದಕ್ಕೆ ಅತ್ಯಾಚಾರದ ಆರೋಪ ಹೊರಿಸುವುದಾಗಿ ಬೆದರಿಸಿದ್ದಾಳೆ. ಹೀಗೆ ಆಶು ಮೀನಾ ಜೊತೆ ಸೇರಿಕೊಂಡು ಬೆದರಿಸುತ್ತಾ ವಿಶ್ರಮ್ ಬಳಿ ಬರೋಬ್ಬರಿ ಒಂದೂವರೆ ಕೋಟಿ ಹಣ ವಸೂಲಿ ಮಾಡಿದ್ದಾಳೆ.
ಇದರಿಂದ ಬೇಸತ್ತ ವಿಶ್ರಮ್, ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಕಳೆದ ಜ.28 ರಂದು ದೂರು ನೀಡಿದ್ದು, ತನಿಖೆ ನಡೆಸಿದ ಪೊಲೀಸರು ಇನ್ನೇನು ಮದುವೆಯಾಗಲು ತಯಾರಾಗಿದ್ದ ಕಿರಣ್ ಹಾಗೂ ಆಶು ಇಬ್ಬರನ್ನೂ ಬಂಧಿಸಿದ್ದಾರೆ.