ETV Bharat / bharat

ಬಿಡೆನ್ ಅಮೆರಿಕ ಅಧ್ಯಕ್ಷರಾದ್ರೂ ಭಾರತ-ಚೀನಾ ಸಂಬಂಧದಲ್ಲಿ ಮಾರ್ಪಾಡಾಗದು: ತಜ್ಞರ ಅಭಿಮತ

ಅಮೆರಿಕ ಇದೀಗ ಚುನಾವಣೆಗೆ ಹೋದರೆ ಬಿಡೆನ್ ದೊಡ್ಡ ವಿಜಯಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಜನಾಭಿಪ್ರಾಯ ಸಂಗ್ರಹ ವರದಿಗಳು ತಿಳಿಸಿವೆ. ರಿಯಲ್ ಕ್ಲಿಯರ್ ಪಾಲಿಟಿಕ್ಸ್ ಎಂಬ ಜಾಲತಾಣದ ಅಂಕಿ - ಅಂಶಗಳ ಆಧಾರದ ಮೇಲೆ ಮತ್ತು ಇತ್ತೀಚಿನ ಫೈನಾನ್ಷಿಯಲ್ ಟೈಮ್ಸ್ ಪೋಲ್ ಟ್ರ್ಯಾಕರ್ ಪ್ರಕಾರ, ಡೆಮೋಕ್ರಾಟ್ ಅಭ್ಯರ್ಥಿ ಜೋ ಬಿಡನ್ ಅವರು ಚುನಾಯಿತರ ಕೂಟದ (ಎಲೆಕ್ಟೋರಲ್ ಕಾಲೇಜ್) ಒಟ್ಟು 538 ಮತಗಳಲ್ಲಿ 308 ಮತಗಳನ್ನು ಗೆಲ್ಲಬಹುದು ಎನ್ನಲಾಗಿದೆ.

a-biden-white-house-unlikely-to-roll-back-us-policies-on-india-china-experts
ಬಿಡೆನ್ ಅಮೆರಿಕ
author img

By

Published : Aug 9, 2020, 8:09 PM IST

ನವದೆಹಲಿ: ವಾಷಿಂಗ್ಟನ್ ಮತ್ತು ಬೀಜಿಂಗ್ ನಡುವೆ ವಾಣಿಜ್ಯ ಸಮರ ಏರ್ಪಟ್ಟಿರುವ ಬೆನ್ನಲ್ಲೇ ಈ ವರ್ಷ ಅಮೆರಿಕ ಅಧ್ಯಕ್ಷೀಯ ಚುನಾವಣೆ ಕೂಡ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹ ಮತ್ತಿತರ ಸಮೀಕ್ಷೆಗಳ ವೇಳೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಜೋ ಬಿಡನ್ ಅವರು ಗೆಲ್ಲುವ ಮೂನ್ಸೂಚನೆ ದೊರೆಯುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತ - ಅಮೆರಿಕ ಸಂಬಂಧಗಳು ಯಾವ ರೀತಿ ಸಾಗಲಿವೆ ಎಂಬ ಊಹಾಪೋಹಗಳು ಸೃಷ್ಟಿ ಆಗಿವೆ. ಈಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಆಡಳಿತಾತ್ಮಕವಾಗಿ ತೆಗೆದುಕೊಂಡ ನಿರ್ಧಾರಗಳ ಹಾದಿಯಲ್ಲಿ ಅಮೆರಿಕದ ಮಾಜಿ ಉಪಾಧ್ಯಕ್ಷರೂ ಆಗಿರುವ ಬಿಡೆನ್ ನೇತೃತ್ವದ ಶ್ವೇತಭವನದ ಹೊಸ ಆಡಳಿತ ಸಾಗದೇ ಇರದು ಎಂಬುದು ರಾಜಕೀಯ ವಿಶ್ಲೇಷಕರ ಮಾತು.

ಭಾರತ - ಅಮೆರಿಕ ದ್ವಿಪಕ್ಷೀಯ ಸಂಬಂಧವು ಸುಮಾರು ಎರಡು ದಶಕಗಳಿಂದ ಉತ್ತಮ ರೀತಿಯಲ್ಲಿ ಸಾಗುತ್ತಿದೆ. ಆದರೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅಧಿಕಾರ ವಹಿಸಿಕೊಂಡಾಗಿನಿಂದಲೂ ಜಗತ್ತಿನ ಪ್ರಥಮ ಶಕ್ತಿಯಾಗಿ ಹೊರಹೊಮ್ಮಬೇಕು ಎಂಬ ಚೀನಾ ಪ್ರಯತ್ನದ ಬಗ್ಗೆ ವಾಷಿಂಗ್ಟನ್ ಕಠಿಣ ನಿಲುವು ತೆಗೆದುಕೊಂಡಿದೆ.

ಬಿಡೆನ್ ಅಮೆರಿಕ ಅಧ್ಯಕ್ಷರಾದರೂ ಕೂಡ ಭಾರತ- ಚೀನಾ ಜೊತೆಗಿನ ಸಂಬಂಧದಲ್ಲಿ ಮಾರ್ಪಾಟು ಇಲ್ಲ

ಅಮೆರಿಕ ಇದೀಗ ಚುನಾವಣೆಗೆ ಹೋದರೆ ಬಿಡೆನ್ ದೊಡ್ಡ ವಿಜಯಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ ಎಂದು ಜನಾಭಿಪ್ರಾಯ ಸಂಗ್ರಹ ವರದಿಗಳು ತಿಳಿಸಿವೆ. ರಿಯಲ್ ಕ್ಲಿಯರ್ ಪಾಲಿಟಿಕ್ಸ್ ಎಂಬ ಜಾಲತಾಣದ ಅಂಕಿ - ಅಂಶಗಳ ಆಧಾರದ ಮೇಲೆ ಮತ್ತು ಇತ್ತೀಚಿನ ಫೈನಾನ್ಷಿಯಲ್ ಟೈಮ್ಸ್ ಪೋಲ್ ಟ್ರ್ಯಾಕರ್ ಪ್ರಕಾರ, ಡೆಮೋಕ್ರಾಟ್ ಅಭ್ಯರ್ಥಿ ಜೋ ಬಿಡನ್ ಅವರು ಚುನಾಯಿಕರ ಕೂಟದ ( ಎಲೆಕ್ಟೋರಲ್ ಕಾಲೇಜ್ ) ಒಟ್ಟು 538 ಮತಗಳಲ್ಲಿ 308 ಮತಗಳನ್ನು ಗೆಲ್ಲಬಹುದು ಎನ್ನಲಾಗಿದೆ. ಇದೇ ವೇಳೆ ಟ್ರಂಪ್ ಕೇವಲ 113 ಸ್ಥಾನಗಳಿಗೆ ತೃಪ್ತಿಪಟ್ಟುಕೊಳ್ಳಬಹುದು ಎಂದು ಅಂದಾಜು ಮಾಡಲಾಗಿದೆ. ವಿಜೇತ ಅಭ್ಯರ್ಥಿ ಸರಳ ಬಹುಮತಕ್ಕಾಗಿ 538 ಮತಗಳಲ್ಲಿ 270 ಮತಗಳನ್ನು ಪಡೆಯಬೇಕಿದೆ.

ಈ ಮಧ್ಯೆ, ವಾಷಿಂಗ್ಟನ್ ಡಿ. ಸಿ. ಯಲ್ಲಿರುವ ಅಮೆರಿಕನ್ ವಿಶ್ವವಿದ್ಯಾಲಯದ ಖ್ಯಾತ ಇತಿಹಾಸ ಪ್ರಾಧ್ಯಾಪಕ ಅಲನ್ ಲಿಕ್ಟ್ಮನ್ ಕೂಡ ಈ ವರ್ಷದ ಚುನಾವಣೆಯಲ್ಲಿ ಬಿಡೆನ್ ವಿಜೇತರಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ. 13 ಐತಿಹಾಸಿಕ ಅಂಶಗಳನ್ನು ಗಣನೆಗೆ ತೆಗೆದುಕೊಂಡು ತಾವು ಅಭಿವೃದ್ಧಿಪಡಿಸಿದ “ ಕೀಸ್ ” ( Keys ) ಮಾದರಿ ಆಧರಿಸಿ ಲಿಕ್ಟ್ಮನ್ ಈ ಭವಿಷ್ಯ ನುಡಿದಿದ್ದಾರೆ. ಜನಾಭಿಪ್ರಾಯ ಸಂಗ್ರಹದ ವಿಧಾನದಲ್ಲಿ ಅವರ “ ಕೀಸ್ “ ಮಾದರಿ ವಿಶೇಷವಾಗಿದೆ. ಕಳೆದ ನಾಲ್ಕು ದಶಕಗಳಿಂದಲೂ ನಿಖರವಾಗಿ ಅಧ್ಯಕ್ಷೀಯ ಚುನಾವಣಾ ಫಲಿತಾಂಶದ ಮುನ್ಸೂಚನೆ ನೀಡುವಲ್ಲಿ ಅವರು ಪ್ರಸಿದ್ಧರಾಗಿದ್ದಾರೆ.

ಕೋವಿಡ್ - 19 ಬಿಕ್ಕಟ್ಟನ್ನು ಟ್ರಂಪ್ ನಿಭಾಯಿಸಿದ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಅಲ್ಲದೆ ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಅಂಚೆ ಮತದಾನವು ನಿಖರ ಫಲಿತಾಂಶ ನೀಡಲಾರದು ಎಂಬ ಕಾರಣಕ್ಕೆ ಅಮೆರಿಕದ ಅಧ್ಯಕ್ಷೀಯ ಚುನಾವಣಾ ಇತಿಹಾಸದಲ್ಲಿ ಹಿಂದೆಂದೂ ನಡೆಯದ ರೀತಿಯಲ್ಲಿ ನವೆಂಬರ್ 3 ಕ್ಕೆ ನಿಗದಿಯಾಗಿದ್ದ ಮತದಾನದ ದಿನವನ್ನು ಮುಂದೂಡಲು ಟ್ರಂಪ್ ಹೊರಟಿದ್ದರು. ಅವರ ಈ ಯತ್ನಗಳ ವಿರುದ್ಧವೂ ಆಕ್ಷೇಪಗಳು ವ್ಯಕ್ತವಾಗಿದ್ದವು.

ಈ ನಡುವೆ, ಬಿಡೆನ್ ಚುನಾವಣೆಯಲ್ಲಿ ಗೆದ್ದರೂ ಕೂಡ ಶ್ವೇತಭವನದ ಹೊಸ ಉತ್ತರಾಧಿಕಾರಿಯಾದ ಅವರು ಚೀನಾ ಮತ್ತು ಭಾರತದ ವಿಚಾರದಲ್ಲಿ ಟ್ರಂಪ್ ಹಾದಿಯಲ್ಲೇ ಸಾಗುತ್ತಾರೆ ಎನ್ನಲಾಗುತ್ತಿದೆ. ಭಾರತದೊಂದಿಗಿನ ಸಂಬಂಧದಲ್ಲಾಗಲೀ ಅಥವಾ ದಕ್ಷಿಣ ಚೀನಾ ಸಮುದ್ರ ಮತ್ತು ಇಂಡೋ - ಪೆಸಿಫಿಕ್‌ ಸಮುದ್ರದಲ್ಲಿ ಬೇರುಬಿಡುತ್ತಿರುವ ಚೀನಾದೊಂದಿಗೆ ತಾನು ನಡೆಸುತ್ತಿರುವ ವಾಣಿಜ್ಯ ಸಮರದಲ್ಲಾಗಲೀ ಯಾವುದೇ ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆಗಳು ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

" ಭಾರತ - ಅಮೆರಿಕ ಸಂಬಂಧ ನಿರ್ಣಾಯಕ ಘಟ್ಟ ತಲುಪಿದೆ " ಎಂದು ವಿದೇಶಾಂಗ ಸಚಿವಾಲಯದ ಮಾಜಿ ಕಾರ್ಯದರ್ಶಿ ಪಿನಕ್ ರಂಜನ್ ಚಕ್ರವರ್ತಿ ‘ ಈಟಿವಿ ಭಾರತ್ ‘ ಜೊತೆ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ.

ಭಾರತ ಮತ್ತು ಅಮೆರಿಕ ಜಾಗತಿಕ ಕಾರ್ಯತಂತ್ರದಲ್ಲಿ ಪಾಲುದಾರ ದೇಶಗಳಾಗಿದ್ದು ಇದಕ್ಕೆ ಎರಡೂ ದೇಶಗಳಲ್ಲಿ ಬೆಂಬಲ ಇದೆ. ಇದು ಪರಸ್ಪರ ವಿನಿಮಯ ಮಾಡಿಕೊಂಡ ಪ್ರಜಾಪ್ರಭುತ್ವ ಮೌಲ್ಯಗಳನ್ನು ಆಧರಿಸಿದೆ ಮತ್ತು ದ್ವಿಪಕ್ಷೀಯ, ಪ್ರಾದೇಶಿಕ ಹಾಗೂ ಜಾಗತಿಕ ವಿಷಯಗಳ ಬಗ್ಗೆ ಪರಸ್ಪರ ಆಸಕ್ತಿಯನ್ನು ವೃದ್ಧಿಸುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಅಲ್ಲದೆ ರಕ್ಷಣೆ ಮತ್ತು ರಾಜತಾಂತ್ರಿಕ ವಿಚಾರದಲ್ಲಿ ತನ್ನ ಪರಮಾಪ್ತ ಮಿತ್ರರಾಷ್ಟ್ರಗಳಿಗೆ ಸರಿಸಮನಾಗಿ ನವದೆಹಲಿಯನ್ನು ಪರಿಗಣಿಸುವ ಮೂಲಕ ಅಮೆರಿಕ ಭಾರತವನ್ನು ತನ್ನ ಪ್ರಮುಖ ರಕ್ಷಣಾ ಪಾಲುದಾರ ದೇಶವನ್ನಾಗಿ ಗುರುತಿಸಿದೆ.

ಅಮೆರಿಕ ಇಂಡಿಯಾ ಪೊಲಿಟಿಕಲ್ ಆಕ್ಷನ್ ಕಮಿಟಿಯ ಸಂಸ್ಥಾಪಕ ಸದಸ್ಯ ರಬಿಂದರ್ ಸಚ್‌ದೇವ್ ಅವರ ಪ್ರಕಾರ ಬಿಡೆನ್ ಅಧಿಕಾರಕ್ಕೆ ಬಂದರೆ, ಎರಡೂ ದೇಶಗಳ ನಡುವಿನ ಸಂಬಂಧಗಳು ಅದೇ ಹಾದಿಯಲ್ಲಿ ಮುಂದುವರಿಯುತ್ತವೆ. “ ಏಕೆಂದರೆ ಅಮೆರಿಕ - ಭಾರತ ಸಂಬಂಧಗಳ ಗಟ್ಟಿತನ ಕೆಲ ನಿರ್ಣಾಯಕ ಹಂತವನ್ನು ತಲುಪಿದೆ. ಈ ಸಂಬಂಧ ಸದಾ ಹೀಗೆ ಉತ್ತುಂಗದಲ್ಲೇ ಇರುತ್ತದೆ ಎಂದು ನಿರೀಕ್ಷಿಸಲಾಗುತ್ತಿದೆ ” ಎಂದು ಅವರು ಹೇಳಿದ್ದಾರೆ.

" ಈಗ ಉತ್ತುಂಗದತ್ತ ಸಾಗಿರುವ ಪಥ ಎಷ್ಟು ಬದಲಾಗಬಹುದು ಎಂಬುದು ನಿಮಗೆ ತಿಳಿದಿದೆ. ಕೆಲ ಆಡಳಿತಗಾರರ ಸಂದರ್ಭದಲ್ಲಿ ಅದು ಹೆಚ್ಚಾಗಬಹುದು, ಇನ್ನೂ ಕೆಲ ಆಡಳಿತಗಾರರ ಕಾಲಕ್ಕೆ ಅದು ಅದೇ ಹಾದಿಯಲ್ಲಿ ಸಾಗಬಹುದು. ಆದರೆ ಹೆಚ್ಚು ತೀವ್ರತೆ ಮತ್ತು ವೇಗವರ್ಧನೆ ಅದಕ್ಕೆ ಇರುವುದಿಲ್ಲ " ಎಂದು ಸಚ್‌ದೇವ್ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ಆದರೆ, ಇದೇ ವೇಳೆ ಅವರು, ಅಮೆರಿಕ ಸಂಸತ್ತಿನ ಮೇಲ್ಮನೆ ಮತ್ತು ಕೆಳಮನೆಗಳಿಗೆ ಚುನಾವಣೆ ಕೂಡ ನಡೆಯುತ್ತಿದೆ ಎಂಬುದನ್ನು ಸಹ ನೆನಪಿನಲ್ಲಿ ಇಡಬೇಕು ಎಂದು ಹೇಳಿದ್ದಾರೆ. ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮೇಲೆ ಡೆಮಾಕ್ರಟಿಕ್ ನಿಯಂತ್ರಣ ಸಾಧಿಸಿದರೆ, ಮೇಲ್ಮನೆಯಾದ ಸೆನೆಟ್ ರಿಪಬ್ಲಿಕನ್ ಪಕ್ಷದ ನಿಯಂತ್ರಣಕ್ಕೆ ಒಳಪಡುತ್ತದೆ.

" ಸೆನೆಟ್ನಲ್ಲಿ ಕೂಡ ಡೆಮಾಕ್ರಟಿಕ್ ಪಕ್ಷ ಬಹುಮತ ಸಾಧಿಸಿ ಮತ್ತು ಬಿಡೆನ್ ಶ್ವೇತಭವನದಲ್ಲಿ ಅಧಿಕಾರದಲ್ಲಿದ್ದಾಗ ಮಾತ್ರ , ಅಮೆರಿಕ - ಭಾರತದ ಸಂಬಂಧಗಳು ಜಿಗಟು ಹಾದಿ ಹಿಡಿಯುತ್ತವೆ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಡೆಮಾಕ್ರಟಿಕ್ ಪಕ್ಷದ ಕೆಲವು ಸದಸ್ಯರು ಭಾರತವನ್ನು ಟೀಕಿಸುತ್ತಿದ್ದು ಕೆಳಮನೆಯನ್ನು ನಿಯಂತ್ರಿಸುತ್ತಾರೆ. ಸೆನೆಟ್ ಅಂತಹವರ ಮೇಲೆ ಹೆಚ್ಚಿನ ಹತೋಟಿ ಸಾಧಿಸುತ್ತದೆ “ ಎಂದು ಸಚ್‌ದೇವ್ ಹೇಳಿದ್ದಾರೆ.

"ಅಮೆರಿಕ ವ್ಯವಸ್ಥೆಯಲ್ಲಿ, ಅಧ್ಯಕ್ಷರು ಎಲ್ಲಾ ಬಗೆಯ ಪರಮೋಚ್ಛ ಅಧಿಕಾರ ಪಡೆದಿದ್ದರೂ ಕೂಡ ಕೆಳಮನೆ ಮತ್ತು ಸೆನೆಟ್ ಎರಡೂ ಕೂಡ ತಮ್ಮದೇ ಆದ ಆಟಗಾರರನ್ನು ಹೊಂದಿವೆ ಎಂಬುದನ್ನು ನೆನಪಿನಲ್ಲಿಡಬೇಕು. ಈ ಸದಸ್ಯರು ಸಾಕಷ್ಟು ಅಡ್ಡಗಾಲು ಹಾಕಬಹುದು ಇಲ್ಲವೇ ಅಡಿಗಲ್ಲು ಕೂಡ ಆಗಬಹುದು ಎಂದು ನಿಮಗೆ ತಿಳಿದಿದೆ. ಅವರು ಮಸೂದೆ ಮತ್ತು ನಿರ್ಣಯಗಳಿಗೆ ಅಂಗೀಕಾರದ ಮುದ್ರೆ ಒತ್ತಬಹುದು ಇಲ್ಲವೇ ಮಸೂದೆಗಳಿಗೆ ಕೆಲ ತಿದ್ದುಪಡಿಗಳನ್ನು ಸೂಚಿಸಬಹುದು” ಎಂದು ಹೇಳಿದ್ದಾರೆ.

ಭಾರತದೊಂದಿಗೆ ಅಮೆರಿಕ ವಿಸ್ತೃತ ವ್ಯಾಪಾರ ಸಂಬಂಧವನ್ನು ಬಯಸುತ್ತದೆ. ಅದು ಪರಸ್ಪರ ಪೂರಕ ಮತ್ತು ನ್ಯಾಯೋಚಿತವಾಗಿದೆ. 2019 ರಲ್ಲಿ, ಸರಕು ಮತ್ತು ಸೇವೆಗಳಲ್ಲಿ ಒಟ್ಟಾರೆ ಅಮೆರಿಕ - ಭಾರತದ ದ್ವಿಪಕ್ಷೀಯ ವ್ಯಾಪಾರವು 9 149 ಶತಕೋಟಿ ಡಾಲರ್ ತಲುಪಿದೆ. ಅಮೆರಿಕ ಇಂಧನ ರಫ್ತು ವ್ಯಾಪಾರ ಸಂಬಂಧ ವೃದ್ಧಿಯ ಪ್ರಮುಖ ಕ್ಷೇತ್ರವಾಗಿದೆ.

ಇಷ್ಟಾದರೂ ಬಿಡೆನ್ ಶ್ವೇತಭವನಕ್ಕೆ ಪ್ರವೇಶಿಸಿದಲ್ಲಿ ಚೀನಾದೊಂದಿಗಿನ ಅಮೆರಿಕ ಸಂಬಂಧದ ಸ್ವರೂಪ ಹೇಗಿರಬಹುದು ಎಂಬುದರ ಬಗ್ಗೆ ತೀರಾ ಅನುಮಾನ ಹೊಗೆಯಾಡುತ್ತಿದೆ.

ಚಕ್ರವರ್ತಿ ಅವರ ಪ್ರಕಾರ, ಚೀನಾದ ವುಹಾನ್‌ ನಗರದಲ್ಲಿ ಹುಟ್ಟಿಕೊಂಡ ಕೋವಿಡ್ -19 ಸಾಂಕ್ರಾಮಿಕ ರೋಗವು ಒಂದು ಪ್ರಮುಖ ಬಿಕ್ಕಟ್ಟು ಆಗಿರುವುದರಿಂದ ಬಿಡೆನ್‌ಗೆ ಚೀನಾದ ಬಗ್ಗೆ ಈಗಾಗಲೇ ಅಮೆರಿಕ ತಳೆದ ನಿಲುವನ್ನು ಬದಲಿಸಲು ಸಾಧ್ಯ ಆಗುವುದಿಲ್ಲ.

ಇದಲ್ಲದೆ, ಅಧ್ಯಕ್ಷ ಟ್ರಂಪ್ ಚೀನಾದ ಮೇಲೆ ಸುಂಕ ಹೇರಿಕೆ ಮತ್ತಿತರ ವ್ಯಾಪಾರಿ ಅಂಕುಶಗಳನ್ನು ಹಾಕಿದ ನಂತರ ಅಮೆರಿಕ ಮತ್ತು ಚೀನಾ ನಡುವೆ ಆರ್ಥಿಕ ಸಂಘರ್ಷ ನಡೆಯುತ್ತಿದೆ. ವಾಷಿಂಗ್ಟನ್ ಬಣ್ಣಿಸುತ್ತಿರುವ "ಅನ್ಯಾಯದ ವ್ಯಾಣಿಜ್ಯ ಕ್ರಮಗಳನ್ನು" ಬದಲಿಸಿಕೊಳ್ಳುವಂತೆ ಚೀನಾಕ್ಕೆ ಆ ಮೂಲಕ ಒತ್ತಾಯಿಸಲಾಗುತ್ತಿದೆ. ಆ ವ್ಯಾಪಾರ ಅಭ್ಯಾಸಗಳು ಮತ್ತು ಅವುಗಳಿಂದ ಉಂಟಾಗುತ್ತಿರುವ ಪರಿಣಾಮ ಎಂದರೆ ಹೆಚ್ಚುತ್ತಿರುವ ವಾಣಿಜ್ಯ ಬಿಕ್ಕಟ್ಟು, ಬೌದ್ಧಿಕ ಆಸ್ತಿಯ ಕಳವು ಮತ್ತು ಚೀನಾಕ್ಕೆ ಅಮೆರಿಕ ತಂತ್ರಜ್ಞಾನದ ಬಲವಂತದ ವರ್ಗಾವಣೆ.

"ಈ ಸಮಯದಲ್ಲಿ ಚೀನಾ ವ್ಯೂಹಾತ್ಮಕ ಸವಾಲನ್ನು ಎಸೆಯುತ್ತಿದ್ದು ಬಿಡೆನ್ ಅವರಿಗೆ ಇದನ್ನು ತಳ್ಳಿಹಾಕಲು ಸಾಧ್ಯ ಆಗದು" ಎಂದು ಚಕ್ರವರ್ತಿ ಹೇಳಿದ್ದಾರೆ.

ಸಾಂಕ್ರಾಮಿಕ ಪಿಡುಗಿನ ನಡುವೆಯೂ ಚೀನಾ ಕೆಲವು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಮಾಜಿ ರಾಜತಾಂತ್ರಿಕರು ಗಮನಸೆಳೆದಿದ್ದಾರೆ. “ಆದರೆ ಅಮೆರಿಕದ ನೀತಿ ದೊಡ್ಡಮಟ್ಟದಲ್ಲಿ ಏರ್ಪಟ್ಟಿದೆ”.

ಅಮೆರಿಕ - ಚೀನಾ ಸಂಬಂಧಗಳ ಮೇಲೆ ಪರಿಣಾಮ ಬೀರುವ ಮತ್ತೊಂದು ಅಂಶ ಎಂದರೆ ಜಪಾನ್‌ನ ಪೂರ್ವ ಕರಾವಳಿಯಿಂದ ಆಫ್ರಿಕಾದ ಪೂರ್ವ ಕರಾವಳಿಯವರೆಗೆ ಹರಡಿಕೊಂಡಿರುವ ಇಂಡೋ-ಪೆಸಿಫಿಕ್ ಸಮುದ್ರ ಪ್ರದೇಶದಲ್ಲಿ ಬೀಜಿಂಗ್ನ ಹೆಚ್ಚುತ್ತಿರುವ ಪ್ರಭಾವ.

ಬೀಜಿಂಗ್ ಹಿಡಿತ ಹೆಚ್ಚುತ್ತಿರುವ ಪ್ರದೇಶದಲ್ಲಿ ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾದೊಂದಿಗೆ ಸೇರಿಕೊಂಡು ಶಾಂತಿ ಮತ್ತು ಸಮೃದ್ಧಿಗಾಗಿ ಕೆಲಸ ಮಾಡುತ್ತಿರುವ ಮೈತ್ರೊಕೂಟ ‘ ಕ್ವಾಡ್ ‘ ನ ಭಾಗವಾಗಿದೆ ಭಾರತ .

ಅಲ್ಲದೆ, ದಕ್ಷಿಣ ಚೀನಾ ಸಮುದ್ರದಲ್ಲಿ ಹಲವು ದೇಶಗಳ ಜೊತೆಗೆ ಪ್ರಾದೇಶಿಕ ವಿವಾದಗಳನ್ನಿರಿಸಿಕೊಂಡ ಚೀನಾ ಯುದ್ಧೋನ್ಮುಖಿಯಾದರೆ ಎಂಬ ಆತಂಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಕಳವಳ ಹುಟ್ಟುಹಾಕಿದೆ.

ಚೀನಾವನ್ನು "ಮರುಪರಿಶೀಲಿಸಬಹುದಾದ ಶಕ್ತಿ" ಎಂದು ಬಣ್ಣಿಸಿ 2017 ರಲ್ಲಿ ಬಿಡುಗಡೆಯಾದ ಅಮೆರಿಕದ ರಾಷ್ಟ್ರೀಯ ಭದ್ರತಾ ಕಾರ್ಯತಂತ್ರವನ್ನು ಉಲ್ಲೇಖಿಸಿ ಚಕ್ರವರ್ತಿ ಮಾತನಾಡಿದ್ದಾರೆ. ದಕ್ಷಿಣ ಚೀನಾ ಸಮುದ್ರದ ಬಗ್ಗೆ ವಾಷಿಂಗ್ಟನ್‌ನ ನೀತಿಯನ್ನು ಟ್ರಂಪ್ ಬದಲಾಯಿಸಿದ್ದಾರೆ ಮತ್ತು ಇಂದು ವಿಶ್ವಸಂಸ್ಥೆಯ ಸಾಗರ ಒಪ್ಪಂದವನ್ನು (UNCLOS) ಅವರು ಬೆಂಬಲಿಸಿದ್ದಾರೆ ಎಂದು ತಿಳಿಸಿದ್ದಾರೆ.

" ( ಭಾರತ - ಅಮೆರಿಕ – ಜಪಾನ್ – ಆಸ್ಟ್ರೇಲಿಯಾ ) ಮೈತ್ರಿಕೂಟ ಅಖಾಡಕ್ಕೆ ಇಳಿಯಲಿದ್ದು ಇದನ್ನು ಚೀನಾ ಪ್ರತಿಭಟಿಸುತ್ತದೆ" ಎಂದು ಅವರು ಹೇಳಿದ್ದಾರೆ.

ಸಚ್‌ದೇವ್ ಅವರ ಪ್ರಕಾರ, ಚೀನಾ ಕುರಿತಂತೆ ಟ್ರಂಪ್ ಆಡಳಿತದ ನಿಲುವು ಮತ್ತು ವಿಶ್ವ ಭೌಗೋಳಿಕ ರಾಜಕೀಯದ ನಿಲುವು ಹೆಚ್ಚು ಹೆಚ್ಚು ತೀವ್ರಗೊಳ್ಳುತ್ತಿದ್ದು ಆಕ್ರಮಣಕಾರಿಯಾಗುತ್ತಲೇ ಇದೆ.

"ಅದು ನವೆಂಬರ್ ವರೆಗೆ ಖುದ್ದು ವಿಶ್ವ ಭೂ ರಾಜಕೀಯವನ್ನು ಬದಲಾಯಿಸುತ್ತಿರುತ್ತದೆ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

" ಯಾಕೆಂದರೆ, ಒಮ್ಮೆ ನೀವು ಒಂದು ಹಾದಿ ತುಳಿದಿದ್ದರೆ, ಕೆಲವು ವಿಷಯಗಳನ್ನು ಬದಲಿಸಲು ಸಾಧ್ಯ ಇಲ್ಲದಂತಾಗುತ್ತದೆ . . . ಯಾವುದೇ ಅಧ್ಯಕ್ಷರು ಬರಲಿ, ಯಾವುದೇ ಅಧ್ಯಕ್ಷರು ಹೋಗಲಿ, ಅದು ಟ್ರಂಪ್ ಇರಲಿ ಅಥವಾ ಬಿಡೆನ್ ಆಗಿರಲಿ, ವಿಶಾಲ ಅರ್ಥದಲ್ಲಿ ಅವರೆಲ್ಲರೂ ಚೀನಾ ವಿರೋಧಿ ಧೋರಣೆಯನ್ನು ಮುಂದುವರಿಸುತ್ತಾರೆ ".

2050 ಅಥವಾ 2060 ರ ವೇಳೆಗೆ ಚೀನಾ ಜಗತ್ತಿನ ದೊಡ್ಡ ಆರ್ಥಿಕ ಶಕ್ತಿ ಅಥವಾ ವಿಶ್ವ ತಂತ್ರಜ್ಞಾನ ಶಕ್ತಿಯಾಗಿ ಬೆಳೆಯಲಿದೆ ಎಂಬ ಅಭಿಪ್ರಾಯ ಅಮೆರಿಕದಲ್ಲಿ ಉಂಟು ಎಂದು ಹೇಳಿದ ಸಚ್‌ದೇವ್, ವಾಷಿಂಗ್ಟನ್ ಈ ಹಿಂದೆ ಏಷ್ಯಾದ ದೈತ್ಯನೊಬ್ಬ ಮಹಾಶಕ್ತಿಯಾಗಿ ಬೆಳೆಯುವುದನ್ನು ವಿಳಂಬ ಮಾಡಲು ಮುಂದಾಗಿತ್ತು ಎಂದು ಹೇಳಿದ್ದಾರೆ.

"ಈಗ, ಟ್ರಂಪ್ ಆಡಳಿತದಲ್ಲಿ ಏನಾಗಿದೆ ಎಂದರೆ, ನಾವು ಚೀನಾದ ಉಗಮವನ್ನು ವಿಳಂಬಗೊಳಿಸುವುದು ಮಾತ್ರವಲ್ಲ ಅದರ ಉಗಮವನ್ನು ನಿರಾಕರಿಸಬೇಕು. ಹೀಗೆ ಚೀನಾ ಎಂದಿಗೂ ಪ್ರಥಮ ಸ್ಥಾನಕ್ಕೆ ಏರಬಾರದು" ಎಂದು ಅಮೆರಿಕ ನಂಬಿದೆ.

“ಹಾಗಾದರೆ, ಟ್ರಂಪ್ ಚೀನಾದೊಂದಿಗೆ ಪ್ರಾರಂಭಿಸಿರುವ ದೊಡ್ಡ ಯುದ್ಧ ಅದಾಗಿದೆ. ಈಗ, ಬಿಡೆನ್ ಆಡಳಿತ ಅಧಿಕಾರ ವಹಿಸಿಕೊಂಡರೆ, ಹೆಚ್ಚೂ ಕಡಿಮೆ ಅದೇ ಮಾರ್ಗದಲ್ಲಿ ಮುಂದುವರಿಯುತ್ತಾರೆ ಎಂದು ನಿರೀಕ್ಷಿಸಬಹುದು. ಏಕೆಂದರೆ ಸರಿ, ನಾವು ವಿಳಂಬ ಮಾಡುವುದು ಮಾತ್ರವಲ್ಲದೆ ಚೀನಾಕ್ಕೆ ಅಂತಹ ಅವಕಾಶವನ್ನು ನಿರಾಕರಿಸೋಣ ಎಂಬಂತಹ ನಿರ್ಧಾರದ ಹಂತಕ್ಕೆ ಒಮ್ಮೆ ಅಮೆರಿಕ ತಲುಪಿದ ನಂತರ, ನಾವು ಕೂಡ ಆ ಹಾದಿಯಲ್ಲಿ ಮುಂದುವರಿಯೋಣ ಎಂಬ ತೀರ್ಮಾನಕ್ಕೆ ಬಿಡೆನ್ ಬರಹುದು ” ಎಂಬುದು ಸಚ್‌ದೇವ್ ಅವರ ಪ್ರತಿಪಾದನೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.