ಚೆನ್ನೈ: ಮಕ್ಕಳ್ ನೀಧಿ ಮೈಯಮ್ ಪಕ್ಷದ (ಎಂಎನ್ಎಂ) ಪ್ರಧಾನ ಕಾರ್ಯದರ್ಶಿ ಎ.ಅರುಣಾಚಲಂ ಇಂದು ಬಿಜೆಪಿಗೆ ಸೇರ್ಪಡೆಯಾಗಿ, ಕಮಲ್ ಹಾಸನ್ಗೆ ಶಾಕ್ ನೀಡಿದ್ದಾರೆ.
ತಮಿಳುನಾಡಿದ ಚೆನ್ನೈನಲ್ಲಿ ಬಿಜೆಪಿ ಕಚೇರಿಯಲ್ಲಿ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಅವರ ಉಪಸ್ಥಿತಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಅರುಣಾಚಲಂ ಸೇರ್ಪಡೆಯಾಗಿದ್ದಾರೆ.
ತಮಿಳುನಾಡಿನಲ್ಲಿ ನಡೆಯಲಿರುವ 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿರುವುದಾಗಿ ಬಹುಭಾಷಾ ನಟ ಹಾಗೂ ಎಂಎನ್ಎಂ ಸಂಸ್ಥಾಪಕ ಕಮಲ್ ಹಾಸನ್ ಹೇಳಿದ್ದರು. ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದಾರೆ. ಆದರೆ ಇದೀಗ ಕಮಲ ಹಿಡಿದು ಅರುಣಾಚಲಂ ಮಕ್ಕಳ್ ನೀಧಿ ಮೈಯಮ್ ಪಕ್ಷಕ್ಕೆ ಶಾಕ್ ನೀಡಿದ್ದಾರೆ.
-
Chennai: Makkal Needhi Maiam leader A. Arunachalam joins Bharatiya Janata Party in the presence of Union Minister and BJP leader Prakash Javadekar pic.twitter.com/wUh7Jfr6zC
— ANI (@ANI) December 25, 2020 " class="align-text-top noRightClick twitterSection" data="
">Chennai: Makkal Needhi Maiam leader A. Arunachalam joins Bharatiya Janata Party in the presence of Union Minister and BJP leader Prakash Javadekar pic.twitter.com/wUh7Jfr6zC
— ANI (@ANI) December 25, 2020Chennai: Makkal Needhi Maiam leader A. Arunachalam joins Bharatiya Janata Party in the presence of Union Minister and BJP leader Prakash Javadekar pic.twitter.com/wUh7Jfr6zC
— ANI (@ANI) December 25, 2020
ಓದಿ: ತಮಿಳುನಾಡಿನಲ್ಲಿ ತಲೆ ಎತ್ತಲಿದೆ ತೃತೀಯ ರಂಗ: ಕಮಲ್ ಹಾಸನ್
ವೃತ್ತಿಯಲ್ಲಿ ವಕೀಲರಾಗಿರುವ ಅರುಣಾಚಲಂ ತಮಿಳುನಾಡಿನ ಗ್ರಾಮೀಣ ಭಾಗದಲ್ಲಿ ಕಮಲ್ ಹಾಸನ್ ಅವರ ಎಂಎನ್ಎಂ ಪಕ್ಷವನ್ನು ಸ್ಥಾಪಿಸಲು ಅಡಿಪಾಯ ಹಾಕಿದ್ದರು ಎಂದು ಹೇಳಲಾಗುತ್ತದೆ.