ETV Bharat / bharat

ರಿಯಲ್ ಮ್ಯಾಂಗೋ ಬಳಸಿ ರೈಲ್ವೆ ಟಿಕೆಟ್ ಬುಕ್ಕಿಂಗ್​​: 994 ಮಂದಿ ಅರೆಸ್ಟ್​​​​​

ಕೊರೊನಾ ವೇಳೆ ರೈಲ್ವೆ ಟಿಕೆಟ್ ಬುಕ್ಕಿಂಗ್​​ಗಾಗಿ ರಿಯಲ್ ಮ್ಯಾಂಗೋ ಎಂಬ ಅನಧಿಕೃತ ಸಾಫ್ಟ್​ವೇರ್ ಬಳಸ್ತಿದ್ದ ವಂಚಕರನ್ನು ಆರ್​ಪಿಎಫ್​ ಸಿಬ್ಬಂದಿ ಬಂಧಿಸಿದ್ದಾರೆ.

Rpf
ಆರ್​ಪಿಎಫ್​
author img

By

Published : Sep 9, 2020, 6:54 AM IST

ನವದೆಹಲಿ: ಕೊರೊನಾ ವೇಳೆ ಅಕ್ರಮವಾಗಿ ರಿಯಲ್ ಮ್ಯಾಂಗೋ ಎಂಬ ಸಾಫ್ಟ್​ವೇರ್ ಬಳಸಿ ರೈಲ್ವೆ ಟಿಕೆಟ್​​ಗಳನ್ನು ಬುಕ್​ ಮಾಡುತ್ತಿದ್ದ 994 ಮಂದಿಯನ್ನು ರೈಲ್ವೆ ಭದ್ರತಾ ಪಡೆ (ಆರ್​​ಪಿಎಫ್​) ಬಂಧಿಸಿದೆ.

ಆರ್​​​ಪಿಎಫ್​ನ ಡೈರೆಕ್ಟರ್ ಜನರಲ್ ಅರುಣ್​ ಕುಮಾರ್​​​ ಈ ಬಗ್ಗೆ ಮಾಹಿತಿ ನೀಡಿದ್ದು, ಸುಮಾರು 87.70 ಲಕ್ಷ ಮೌಲ್ಯದ ನಕಲಿ ಟಿಕೆಟ್​ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಬಂಧಿತರಲ್ಲಿ 239 ಮಂದಿ ಏಜೆಂಟ್​​ಗಳೂ ಇದ್ದಾರೆಂದು ಸ್ಪಷ್ಟನೆ ನೀಡಿದ್ದಾರೆ.

ಆಗಸ್ಟ್ 9ರಂದು ರೇರ್ ಮ್ಯಾಂಗೋ (ರಿಯಲ್ ಮ್ಯಾಂಗೋ) ಎಂಬ ಸಾಫ್ಟ್‌ವೇರ್ ಪತ್ತೆಯಾಗಿದ್ದು, ರೈಲ್ವೆ ಟಿಕೆಟ್​​​ಅನ್ನು ಅಕ್ರಮವಾಗಿ ಬುಕ್​ ಮಾಡುವ ಸಲುವಾಗಿ ಬಳಸಲಾಗುತ್ತಿತ್ತು.

ಆರ್​​ಪಿಎಫ್​ ಈ ಕುರಿತು ತನಿಖೆ ನಡೆಸಿದಾಗ ಪ್ರತಾಪ್​ಗಢದ ಪಂಕಜ್​ ಕುಮಾರ್ ಪ್ರಜಾಪತಿ ಎಂಬಾತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಕಾರ್ಮಿಕರ ಫೋನ್ ನಂಬರ್ ಹಾಗೂ ಕೆವೈಸಿಯನ್ನು ಬಳಸಿ ವಂಚಕರು ರೈಲ್ವೆ ಟಿಕೆಟ್​ ಬುಕ್ ಮಾಡುತ್ತಿದ್ದರು ಎಂದು ಅರುಣ್​ ಕುಮಾರ್ ಮಾಹಿತಿ ನೀಡಿದ್ದಾರೆ.

ಸುಬೇಂದು ಬಿಸ್ವಾಸ್ ಎಂಬಾತ ಸಂಪೂರ್ಣವಾಗಿ ಈ ಸಾಫ್ಟ್​ವೇರ್ ನಿಯಂತ್ರಣ ಮಾಡುತ್ತಿದ್ದು, ಆತನ ಬಂಧನದ ನಂತರ ಮತ್ತಷ್ಟು ಹೆಸರುಗಳು ಹೊರಬಿದ್ದಿವೆ. ಸುಬೇಂದ್ರ ಬಿಸ್ವಾಸ್​ನನ್ನು ಮ್ಯಾಂಗೋ ಸರ್ ಎಂಬ ಹೆಸರಿನಿಂದಲೂ ಕರೆಯಲಾಗುತ್ತಿತ್ತು.

ಸುಬೇಂದು ಬಿಸ್ವಾಸ್​​ನ ಬ್ಯುಸಿನೆಸ್​ ಮ್ಯಾನೇಜರ್ ರಾಹುಲ್​ ರಾಯ್​ ಈ ಸಾಫ್ಟ್​ವೇರ್​ ಅಭಿವೃದ್ಧಿಪಡಿಸಿದ್ದು, ಈತನನ್ನು ಮ್ಯಾಂಗೋ ಗಾಯ್​ (Mango guy) ಎಂದು ಕರೆಯಲಾಗುತ್ತಿತ್ತು.

ಈಗ ಸದ್ಯಕ್ಕೆ ರಿಯಲ್​ ಮ್ಯಾಂಗೋ ಸಾಫ್ಟ್​ವೇರ್​ಅನ್ನು ಆರ್​ಪಿಎಫ್​ ಸಂಪೂರ್ಣವಾಗಿ ನಾಶ ಮಾಡಿದ್ದು, ಅನಧಿಕೃತ ಸಾಫ್ಟ್​ವೇರ್​ಗಳಲ್ಲಿ ಯಾವುದೇ ಕಾರಣಕ್ಕೂ ಟಿಕೆಟ್​ಗಳನ್ನು ಬುಕ್​ ಮಾಡಬಾರದೆಂದು ಸಾರ್ವಜನಿಕರಿಗೆ ಆರ್​ಪಿಎಫ್​ ಎಚ್ಚರಿಕೆ ನೀಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.