ನವದೆಹಲಿ: ದೇಶದಾದ್ಯಂತ ಕೊರೊನಾ ಲಸಿಕೆ ನೀಡಲು ಕಳೆದ 6 ದಿನದ ಹಿಂದೆ ಚಾಲನೆ ನೀಡಲಾಗಿದ್ದು, ಮೊದಲ ಹಂತದಲ್ಲಿ ವಾರಿಯರ್ಗಳಿಗೆ ಲಸಿಕೆ ನೀಡಲಾಗುತ್ತಿದೆ.
ಈವರೆಗೆ 9,99,065 ಆರೋಗ್ಯ ಕಾರ್ಯಕರ್ತರು ಲಸಿಕೆ ಪಡೆದಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಗುರುವಾರ, 27 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ವ್ಯಾಕ್ಸಿನೇಷನ್ ಪ್ರಕ್ರಿಯೆಯ ಮೂಲಕ 1,92,581 ಫಲಾನುಭವಿಗಳಿಗೆ ಸಂಜೆ 6 ಗಂಟೆಯವರೆಗೆ ಲಸಿಕೆ ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಮನೋಹರ್ ಅಗ್ನಾನಿ ಹೇಳಿದ್ದಾರೆ.
ಇದಲ್ಲದೆ ಲಸಿಕೆಯಿಂದ ಅಡ್ಡ ಪರಿಣಾಮ ಉಂಟಾಗಿ ಓರ್ವ ರಾಜಸ್ಥಾನದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದಿದ್ದಾರೆ.
ಗುರುವಾರ ಸಂಜೆ 6 ಗಂಟೆಯವರೆಗೆ ಲಸಿಕೆ ಪಡೆದ ಒಟ್ಟು ಫಲಾನುಭವಿಗಳ ಸಂಖ್ಯೆಯಲ್ಲಿ ಆಂಧ್ರಪ್ರದೇಶದಲ್ಲಿ 15,507, ಬಿಹಾರದಲ್ಲಿ 15,798, ಕೇರಳದಲ್ಲಿ 10,266, ಕರ್ನಾಟಕದಲ್ಲಿ 16,103, ಮಧ್ಯಪ್ರದೇಶದಲ್ಲಿ 7,117, ತಮಿಳುನಾಡಿನಲ್ಲಿ 6,497, ದೆಹಲಿಯಲ್ಲಿ 5,128, ಗುಜರಾತ್‌ನಲ್ಲಿ 12,212 ಪಶ್ಚಿಮ ಬಂಗಾಳದಲ್ಲಿ 7,187 ಮಂದಿ ಎಂದು ವರದಿಯಾಗಿದೆ.
ಇದನ್ನೂ ಓದಿ: ಭಾರತದ ಲಸಿಕೆಗಳೇ ಅತ್ಯಂತ ವಿಶ್ವಾಸಾರ್ಹ.. ನಮಗೂ ಕೊಡಿ ಎನ್ನುತ್ತಿವೆ 92 ದೇಶಗಳು!