ETV Bharat / bharat

50 ಲಕ್ಷ ರೂ. ಮೌಲ್ಯದ 700 ಬಾಕ್ಸ್​ ಅಕ್ರಮ ಮದ್ಯ ವಶ - ಅಕ್ರಮ ಮದ್ಯ

ಉತ್ತರಪ್ರದೇಶದ ಗ್ರೇಟರ್ ನೋಯ್ಡಾದ ಹೆದ್ದಾರಿಯಲ್ಲಿ ಅಕ್ರಮವಾಗಿ ಟ್ರಕ್​ನಲ್ಲಿ ಸಾಗಿಸುತ್ತಿದ್ದ ಸುಮಾರು 50 ಲಕ್ಷ ರೂ. ಮೌಲ್ಯದ ಮದ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

one-held
ಅಕ್ರಮ ಮದ್ಯ ವಶ
author img

By

Published : Oct 5, 2020, 2:31 PM IST

ಗೌತಮಬುದ್ಧನಗರ/ಉತ್ತರಪ್ರದೇಶ: ಗ್ರೇಟರ್ ನೋಯ್ಡಾದ ರಾಷ್ಟ್ರೀಯ ಹೆದ್ದಾರಿ-91ರಲ್ಲಿ ಟ್ರಕ್​ನಲ್ಲಿ ಸಾಗಿಸುತ್ತಿದ್ದ ಸುಮಾರು 50 ಲಕ್ಷ ರೂಪಾಯಿ ಮೌಲ್ಯದ 700 ಬಾಕ್ಸ್​ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಅಕ್ರಮ ಮದ್ಯ ವಶ

ಘಟನೆ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಭಾನುವಾರ ರಾತ್ರಿ ಹೈವೇಯಲ್ಲಿ ಟ್ರಕ್​ ಚೆಕ್ಕಿಂಗ್​ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಟ್ರಕ್​ ಪರಿಶೀಲನೆಗೆ ಮುಂದಾದಾಗ ಟ್ರಕ್​ನಲ್ಲಿದ್ದ ಇಬ್ಬರು ತಪ್ಪಿಸಿಕೊಂಡು ಓಡಲು ಯತ್ನಿಸಿದ್ದಾರೆ. ಪೊಲೀಸ್​ ಸಿಬ್ಬಂದಿ ಕೂಡ ಅವರನ್ನು ಅಟ್ಟಾಡಿಸಿಕೊಂಡು ಹೋಗಿ ಒಬ್ಬನನ್ನು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದಾರೆ. ಇದೇ ವೇಳೆ ಪೊಲೀಸರು ಫೈರಿಂಗ್​ ಮಾಡಿದ್ದಾಗಿ ಗ್ರೇಟರ್ ನೋಯ್ಡಾದ ಹೆಚ್ಚುವರಿ ಪೊಲೀಸ್ ಆಯುಕ್ತ ವಿಶಾಲ್ ಪಾಂಡೆ ಹೇಳಿದ್ದಾರೆ.

ಪ್ರಕರಣದ ಓರ್ವ ಆರೋಪಿಯಾದ ಪವನ್​ ಎಂಬಾತನ ಕಾಲಿಗೆ ಪೊಲೀಸರು ಗುಂಡು ಹಾರಿಸಿ ಬಂಧಿಸಿದ್ದಾರೆ. ಅವನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ತಪ್ಪಿಸಿಕೊಂಡ ಪ್ರಕರಣದ ಮತ್ತೋರ್ವ ಆರೋಪಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.