ETV Bharat / bharat

ಬಸ್-ಕಾರಿನ ನಡುವೆ ಅಪಘಾತ: 9 ಮಂದಿ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ - ಕಾರು ಬಸ್ ನಡುವೆ ಡಿಕ್ಕಿ

ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದ ಪರಿಣಾಮ 9 ಮಂದಿ ಸಾವಿಗೀಡಾದ ಘಟನೆ ಉತ್ತರ ಪ್ರದೇಶದ ಪುರಾಣಪುರ್ ಪ್ರದೇಶದಲ್ಲಿ ನಡೆದಿದೆ.

7 dead, over 30 injured as bus, car collide in UP's Pilibhit
ಬಸ್ - ಕಾರಿನ ನಡುವೆ ಅಪಘಾತ
author img

By

Published : Oct 17, 2020, 8:06 AM IST

Updated : Oct 17, 2020, 10:21 AM IST

ಪಿಲಿಭಿತ್ (ಉತ್ತರ ಪ್ರದೇಶ): ಪುರಾಣಪುರ್ ಪ್ರದೇಶದಲ್ಲಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿ 9 ಜನರು ಸಾವನ್ನಪಿದ್ರೆ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಜೈ ಪ್ರಕಾಶ್ ತಿಳಿಸಿದ್ದಾರೆ.

ಬಸ್-ಕಾರಿನ ನಡುವೆ ಅಪಘಾತ

"ಬಸ್ ಲಖನೌದಿಂದ ಪಿಲಿಭಿತ್‌ಗೆ ಬರುತ್ತಿತ್ತು ಮತ್ತು ಪುರೈಪುರದಿಂದ ಪಿಕಪ್ ವಾಹನ ಬರುತ್ತಿತ್ತು. ಪುರಾಣಪುರ್​ ಗಡಿಯಲ್ಲಿ ಈ ಅಪಘಾತ ಸಂಭವಿಸಿದೆ. ಅಪಘಾತದ ನಂತರ ಬಸ್ ಹೊಲದಲ್ಲಿ ಪಲ್ಟಿಯಾದ ಪರಿಣಾಮ ಬಸ್​ನಲ್ಲಿದ್ದ ಹಲವಾರು ಜನರು ಗಾಯಗೊಂಡಿದ್ದಾರೆ. ಕಾರಿನಲ್ಲಿದ್ದವರು ಕೂಡ ಗಾಯಗೊಂಡಿದ್ದಾರೆ" ಎಂದು ಎಸ್​ಪಿ ಜೈ ಪ್ರಕಾಶ್ ತಿಳಿಸಿದ್ದಾರೆ.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಪ್ರಾಥಮಿಕ ಚಿಕಿತ್ಸೆಯ ನಂತರ ಕೆಲವರನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಯಿತು. ಬಲಿಯಾದವರಲ್ಲಿ ಹೆಚ್ಚಿನವರು ಪಿಲಿಭಿತ್‌ಗೆ ಸೇರಿದವರು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Last Updated : Oct 17, 2020, 10:21 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.