ETV Bharat / bharat

ಅಯ್ಯೋ ದುರ್ವಿಧಿಯೇ... ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ 7 ಮಕ್ಕಳು ನೀರುಪಾಲು - ನದಿಯಲ್ಲಿ ಮುಳುಗಿ 7 ಮಕ್ಕಳು ಸಾವು

ಸೋನ್​ ನದಿಯಲ್ಲಿ ಮುಳುಗಿ ಏಳು ಮಕ್ಕಳು ಮೃತಪಟ್ಟಿರುವ ಘಟನೆ ಜಾರ್ಖಂಡ್​ನ ಗಡ್ವಾ ಜಿಲ್ಲೆಯಲ್ಲಿ ನಡೆದಿದೆ.

7 child drowned in sone river in garhwa
ನದಿಯಲ್ಲಿ ಸ್ನಾನಕ್ಕೆ ತೆರಳಿದ 7 ಮಕ್ಕಳು ನೀರುಪಾಲು
author img

By

Published : May 16, 2020, 11:35 AM IST

ಗಡ್ವಾ(ಜಾರ್ಖಂಡ್): ಸ್ನಾನ ಮಾಡಲು ತೆರಳಿದ್ದ 7 ಮಕ್ಕಳು ಸೋನ್ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಜಾರ್ಖಂಡ್​ನ ಗಡ್ವಾ ಜಿಲ್ಲೆಯಲ್ಲಿ ನಡೆದಿದೆ.

ಕಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ದುಮಾರ್ಸೋತಾ ಗ್ರಾಮದ ಏಳು ಮಕ್ಕಳು ಸೋನ್ ನದಿಯಲ್ಲಿ ಸ್ನಾನ ಮಾಡಲು ಬೆಳಗ್ಗೆ 6 ಗಂಟೆಗೆ ತೆರಳಿದ್ದರು. ಆದ್ರೆ 7 ಮಕ್ಕಳೂ ಕೂಡ ನೀರುಪಾಲಾಗಿದ್ದಾರೆ.

ಇಲ್ಲಿಯವರೆಗೆ ಗ್ರಾಮಸ್ಥರು 5 ಮಕ್ಕಳ ಮೃತದೇಹ ಹೊರತೆಗೆದಿದ್ದು, ಇನ್ನಿಬ್ಬರ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ಶೋಧಕಾರ್ಯ ಮುಂದುವರೆಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.