ನವದೆಹಲಿ : ಪ್ರಸ್ತುತ ದೇಶದಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಬಿಜೆಪಿ ಅಧ್ಯಕ್ಷ ಜೆ ಪಿ ನಡ್ಡಾ ಹೇಳಿದ್ದಾರೆ.
ಲಾಕ್‌ಡೌನ್ ಘೋಷಿಸಿದಾಗ ನಮ್ಮಲ್ಲಿ ಯಾವುದೇ ಮೀಸಲಾದ ಕೋವಿಡ್-19 ಆಸ್ಪತ್ರೆಗಳು ಇರಲಿಲ್ಲ. ಇಂದು ನಮ್ಮಲ್ಲಿ 1,000 ಕೋವಿಡ್-19 ಆಸ್ಪತ್ರೆ ಮತ್ತು 2 ಲಕ್ಷ ಕೋವಿಡ್-19 ರೋಗಿಗಳಿಗೆ ಮೀಸಲಾದ ಹಾಸಿಗೆಗಳಿವೆ. ನಮ್ಮಲ್ಲಿ 21 ಸಾವಿರ ವೆಂಟಿಲೇಟರ್‌ಗಳಿವೆ. ಜೂನ್ ಅಂತ್ಯದ ವೇಳೆಗೆ ಪಿಎಂ-ಕೇರ್ಸ್ ನಿಧಿಯ ಮೂಲಕ ಸುಮಾರು 60 ಸಾವಿರ ವೆಂಟಿಲೇಟರ್‌ಗಳು ಲಭ್ಯವಾಗಲಿವೆ ಎಂದು ಉತ್ತರಪ್ರದೇಶ ಜನಸಂವಾದ ವರ್ಚುವಲ್ ರ‍್ಯಾಲಿಯಲ್ಲಿ ತಿಳಿಸಿದ್ದಾರೆ.
ಅಲ್ಲದೆ ಲಾಕ್‌ಡೌನ್ ಘೋಷಿಸಿದಾಗ ನಾವು ಯಾವುದೇ ಪಿಪಿಇ ಕಿಟ್ಗಳನ್ನು ಉತ್ಪಾದಿಸುತ್ತಿರಲಿಲ್ಲ. ಪ್ರಧಾನಿ ಮೋದಿ ಸ್ಥಳೀಯ ಉತ್ಪಾದಕರನ್ನು ಪ್ರೇರೇಪಿಸಿದ್ದಾರೆ. ಈಗ ನಾವು ಪ್ರತಿದಿನ 4.5 ಲಕ್ಷ ಪಿಪಿಇ ಕಿಟ್ಗಳನ್ನು ಉತ್ಪಾದಿಸುತ್ತಿದ್ದೇವೆ ಎಂದು ಬಹಳ ಹೆಮ್ಮೆಯಿಂದ ಹೇಳಬಲ್ಲೆ ಎಂದಿದ್ದಾರೆ.
ಯುಪಿ ಜನ ಸಂವಾದ ವರ್ಚುವಲ್ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದಲ್ಲಿ ಕೋವಿಡ್-19 ಪ್ರಕರಣ ಮತ್ತು ಸಾವುಗಳ ಸಂಖ್ಯೆಯನ್ನು ಗಮನಿಸಿದಾಗ, ನಾವು ತೃಪ್ತಿದಾಯಕ ಪರಿಸ್ಥಿತಿಯಲ್ಲಿದ್ದೇವೆ. ಸುಮಾರು 24 ಕೋಟಿ ಜನಸಂಖ್ಯೆಯ ರಾಜ್ಯದಲ್ಲಿ ಕೇವಲ 6,000 ಸಕ್ರಿಯ ಪ್ರಕರಣಗಳಿವೆ ಎಂದಿದ್ದಾರೆ.