ETV Bharat / bharat

ಯೋಗಿ ನಾಡಲ್ಲಿ ಮತ್ತೊಂದು ದುಷ್ಕೃತ್ಯ... 6 ವರ್ಷದ ಬಾಲಕಿ ಮೇಲೆ ರೇಪ್​!

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​​ ತವರಲ್ಲಿ ಮತ್ತೊಂದು ಅಮಾನವೀಯ ದುಷ್ಕೃತ್ಯ ನಡೆದಿದ್ದು, ಕೇವಲ ಆರು ವರ್ಷದ ಬಾಲಕಿ ಮೇಲೆ ರೇಪ್​ ಮಾಡಲಾಗಿದೆ.

Minor rape
Minor rape
author img

By

Published : Oct 27, 2020, 12:36 AM IST

ಪಿಲಿಭಿತ್ (ಉತ್ತರ ಪ್ರದೇಶ): ಯೋಗಿ ಆದಿತ್ಯನಾಥ್​ ತವರಲ್ಲಿ ಮೇಲಿಂದ ಮೇಲೆ ಅತ್ಯಾಚಾರದಂತಹ ಅಮಾನವೀಯ ಕೃತ್ಯಗಳು ನಡೆಯುತ್ತಿರುವುದು ಬೆಳಕಿಗೆ ಬರುತ್ತಿದ್ದು, ಇದೀಗ ಅಂತಹ ಮತ್ತೊಂದು ಘಟನೆ ನಡೆದಿದೆ.

6 ವರ್ಷದ ಬಾಲಕಿ ಮೇಲೆ ಶಿಕ್ಷಕನೋರ್ವ ಅತ್ಯಾಚಾರ ನಡೆಸಿರುವ ಆರೋಪ ಕೇಳಿ ಬಂದಿದ್ದು, ಈಗಾಗಲೇ ಆತನ ಬಂಧನ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನ ಧರ್ಮೆಂದ್ರ ಮೌರ್ಯ ಎಂದು ಗುರುತಿಸಲಾಗಿದೆ. ಜಹಾನಾಬಾದ್​​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 2ನೇ ತರಗತಿಯಲ್ಲಿ ವಿದ್ಯಾರ್ಥಿನಿ ವ್ಯಾಸಂಗ ಮಾಡ್ತಿದ್ದು, ಟ್ಯೂಷನ್​ಗೆ ಸ್ನೇಹಿತರೊಂದಿಗೆ ತೆರಳಿದ್ದಳು. ಈ ವೇಳೆ ಅಲ್ಲಿ ಪಾಠ ಹೇಳುತ್ತಿದ್ದ ಶಿಕ್ಷಕ ಈಕೆಯ ಮೇಲೆ ಅತ್ಯಾಚಾರವೆಸಗಿದ್ದಾನೆಂದು ಪೊಲೀಸ್ ವರಿಷ್ಠಾಧಿಕಾರಿ ಜೈಪ್ರಕಾಶ್​ ತಿಳಿಸಿದ್ದಾರೆ.

ಬಾಲಕಿ ಅಳುತ್ತಾ ಮನೆಗೆ ಬಂದಾಗ ಕುಟುಂಬಸ್ಥರಿಗೆ ಮಾಹಿತಿ ಗೊತ್ತಾಗಿದೆ. ಈ ವೇಳೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಆರೋಪಿಯ ಬಂಧನ ಮಾಡಲಾಗಿದೆ. ಬಾಲಕಿಯನ್ನ ಚಿಕಿತ್ಸೆಗೋಸ್ಕರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.