ETV Bharat / bharat

OPPO ಕಾರ್ಖಾನೆಯ 6 ಉದ್ಯೋಗಿಗಳಿಗೆ ಕೊರೊನಾ ಸೋಂಕು.. ಸ್ಮಾರ್ಟ್​ಫೋನ್ ಉತ್ಪಾದನೆ ಬಂದ್

ಚೀನಾದ ಒಪ್ಪೋ(OPPO) ಸ್ಮಾರ್ಟ್‌ಫೋನ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಉದ್ಯೋಗಿಗಳಲ್ಲಿ ಕೊರೊನಾ ಸೊಂಕು ಪತ್ತೆಯಾಗಿದ್ದು, ಕಾರ್ಖಾನೆ ಬಂದ್ ಮಾಡಲಾಗಿದೆ.

6 OPPO workers test Covid-19 positive
6 ಉದ್ಯೋಗಿಗಳಿಗೆ ಕೊರೊನಾ ಸೋಂಕು
author img

By

Published : May 18, 2020, 5:01 PM IST

ನೋಯ್ಡಾ(ಉತ್ತರ ಪ್ರದೇಶ): ನೋಯ್ಡಾದಲ್ಲಿರುವ ಚೀನಾದ ಒಪ್ಪೋ(OPPO) ಸ್ಮಾರ್ಟ್‌ಫೋನ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಆರು ಉದ್ಯೋಗಿಗಳಿಗೆ ಕೊರೊನಾ ಸೋಂಕು ಕಂಡು ಬಂದಿದ್ದು, ಮುಂದಿನ ಸೂಚನೆ ಬರುವವರೆಗೂ ಎಲ್ಲ ಕಾರ್ಯಾಚರಣೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

  • As an organization that places the safety of all our employees and citizens at the forefront, we have suspended all operations at our manufacturing facility in Greater Noida and initiated #COVID19 testing for 3000+ employees, for which results are awaited: OPPO India https://t.co/6cGzM4ZDOx

    — ANI UP (@ANINewsUP) May 18, 2020 " class="align-text-top noRightClick twitterSection" data=" ">

ನೋಯ್ಡಾದಲ್ಲಿನ ಕಾರ್ಖಾನೆಯಲ್ಲಿ ಆರು ಕಾರ್ಮಿಕರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡ ಕಾರಣ ಕಾರ್ಖಾನೆಗೆ ಬಾರದಂತೆ ತಿಳಿಸಿದ್ದಾರೆ. ಮುಂದಿನ ಸೂಚನೆವರೆಗೂ ಮನೆಯಲ್ಲಿಯೇ ಇರಬೇಕೆಂದು ಕಂಪನಿ ಕೇಳಿದೆ ಎಂದು ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.

3 ಸಾವಿರಕ್ಕೂ ಹೆಚ್ಚು ಉದ್ಯೋಗಿಗಳಿಗೆ ಕೊರೊನಾ ಪರೀಕ್ಷೆ ಮಾಡಲಾಗಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದೇವೆ ಎಂದು ಒಪ್ಪೋ ಇಂಡಿಯಾ ವಕ್ತಾರರು ಹೇಳಿದ್ದಾರೆ. ಸದ್ಯ ನಮ್ಮ ಕಾರ್ಖಾನೆಯ ಎಲ್ಲಾ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದೇವೆ. ಪರೀಕ್ಷೆ ವರದಿ ಬಂದ ನಂತರ ನೆಗೆಟಿವ್ ಬಂದವರನ್ನು ಮಾತ್ರ ಕೆಲಸಕ್ಕೆ ಹಾಜರಾಗುವಂತೆ ತಿಳಿಸಲಾಗುವುದು. ಸೋಂಕು ಕಂಡು ಬಂದರೆ ಅಂತವರ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.