ಇಟಾನಗರ: ಅರುಣಾಚಲ ಪ್ರದೇಶದ ಲಾಂಗ್ಡಿಂಗ್ ಜಿಲ್ಲೆಯಲ್ಲಿ ಬಂಡುಕೋರರು ಹಾಗೂ ಭದ್ರತಾ ಪಡೆಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಎನ್ಎಸ್ಸಿಎನ್ನ (ಐಎಂ) ಆರು ಸದಸ್ಯರನ್ನು ಹತ್ಯೆ ಮಾಡಲಾಗಿದ್ದು, ಓರ್ವ ಯೋಧ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ ಅಸ್ಸೋಂ ರೈಫಲ್ಸ್ ಮತ್ತು ಅರುಣಾಚಲ ಪ್ರದೇಶ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಹತ್ಯೆಯಾದ ಪ್ರತ್ಯೇಕತಾವಾದಿಗಳ ಬಳಿ ನಾಲ್ಕು ಎಕೆ -47 ರೈಫಲ್ ಮತ್ತು ಎರಡು ಚೀನೀ ಎಂಕ್ಯೂ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಎಂದು ಅರುಣಾಚಲ ಪ್ರದೇಶದ ಡಿಜಿಪಿ ಆರ್ಪಿ ಉಪಾಧ್ಯಾಯ ಮಾಹಿತಿ ನೀಡಿದ್ದಾರೆ.
ಎನ್ಎಸ್ಸಿಎನ್:
ನ್ಯಾಷನಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ (NSCN), ಇದೊಂದು ನಾಗಾಲ್ಯಾಂಡ್ನ ಪ್ರತ್ಯೇಕತಾವಾದಿ ಗುಂಪಾಗಿದ್ದು, ಮುಖ್ಯವಾಗಿ ಭಾರತದ ಈಶಾನ್ಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ನಾಗಾಲ್ಯಾಂಡ್ನ ನಿಷೇಧಿತ ಉಗ್ರ ಸಂಘಟನೆ ಕೂಡ ಆಗಿದೆ.